ಗುಂಡ್ಲುಪೇಟೆ ಜ್ಞಾನ ಸೂರ್ಯ ಭವನದಲ್ಲಿ ಜಿಲ್ಲಾರಾಜಯೋಗ ವಿದ್ಯಾರ್ಥಿಗಳ ಸಮಾವೇಶ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಗುಂಡ್ಲುಪೇಟೆ ಜ್ಞಾನ ಸೂರ್ಯ ಭವನದಲ್ಲಿ ಜಿಲ್ಲಾರಾಜಯೋಗ ವಿದ್ಯಾರ್ಥಿಗಳ ಸಮಾವೇಶ
ಗುಂಡ್ಲುಪೇಟೆ -ಪಟ್ಟಣದ ಶ್ವೇತಾದ್ರಿ. ಭಡಾವಣೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನ ಸೂರ್ಯ ಭವನದಲ್ಲಿ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಜಿಲ್ಲಾ ರಾಜಯೋಗ ವಿದ್ಯಾರ್ಥಿಗಳ ಸಮಾವೇಶವನ್ನು ಭಾನುವಾರ 10 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜಯೋಗ ಪ್ರವಾಚಕಿ ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಉದ್ಘಾಟಿಸಿ, ಈ ವರ್ಷದ ಘೋಷ ವಾಕ್ಯವಾದ “ಆಧ್ಯಾತ್ಮಿಕ ಸಶಕ್ತೀಕರಣದಿಂದ ಹೊಸ ಜಗತ್ತಿನ ಸ್ಥಾಪನೆ” ಕುರಿತು ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯ ರಾಜಯೋಗ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೂಚಿಸಿದ್ದಾರೆ.

Share This Article
Leave a Comment