ಪ್ರೇಕ್ಷಕರ ಮನಸೂರೆಗೊಳಿಸಿದ ಕನ್ನಡದ ಕಂಪಿನ ರಸದೌತಣ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಪ್ರೇಕ್ಷಕರ ಮನಸೂರೆಗೊಳಿಸಿದ ಕನ್ನಡದ ಕಂಪಿನ ರಸದೌತಣ

ಮೈಸೂರು:- ಅ.13 (ಕರ್ನಾಟಕ ವಾರ್ತೆ):- ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…ಕೇಳಿಸದೆ ಕಲ್ಲು ಕಲ್ಲಿನಲ್ಲಿ.. ನನ್ನದೆ ಕೋಗಿಲೆಯ… ಏನೇ ಕನ್ನಡತಿ ನೀ ಯಾಕೆ ಹಿಂಗಾಡ್ತಿ… ಹೀಗೆ ಒಂದರ ಹಿಂದೆ ಒಂದರಂತೆ ಕನ್ನಡ ಕಂಪನ್ನು ಸಾರುವಂತಹ ಕನ್ನಡ ಗೀತೆಗಳ ರಸದೌತಣವು ಪ್ರೇಕ್ಷಕರ ಮನಸೂರೆಗೊಳಿಸಿತು.

ಮಂಗಳವಾರ ಸಂಜೆ ನಗರದ ಅರಮನೆ ಆವರಣದಲ್ಲಿ ಕಲಾವಿದರಾದ ಅಜಯ್ ವಾರಿಯರ್, ಅನುರಾಧ ಭಟ್ ಮತ್ತು ತಂಡದವರಿಂದ ನಡೆದ “ಸ್ವರಯಾನ” ಕಾರ್ಯಕ್ರಮವು ಪ್ರೇಕ್ಷಕರನ್ನು ಸ್ವರ ಸಾಗರದಲ್ಲಿ ತೇಲುವಂತೆ ಮಾಡಿತು.

ಕಲಾವಿದರಾದ ಅಜಯ್ ವಾರಿಯರ್ ಧ್ವನಿಯಲ್ಲಿ ಆರಂಭವಾದ ಶಾರದೆ ದಯೆ ತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮುತ್ತಾದೆ ಹಾಡಿನ ಮೂಲಕ ಪ್ರೇಕ್ಷಕರನ್ನು ಸ್ವರಯಾನ ರಸದೌತಣಕ್ಕೆ ಕರೆದೊಯ್ದುರು.

ಗಾಯಕಿ ಅನುರಾಧ ಭಟ್ ಅವರು ಹಾಡಿದ
ಕೇಳಿಸದೆ ಕಲ್ಲು ಕಲ್ಲಿನಲ್ಲಿ ಹಾಗೂ ಸಂಗಡಿಗರು ಹಾಡಿದ ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮೋನೆ, ಎಲ್ಲಿರುವೆ ಮನವ ಕಾಡುವ ರೂಪಸಿಯೇ, ಯಾರಿಗಾಗಿ ಆಟ, ಯಾರಿಗಾಗಿ ನೋಟ ಹೇಳು ಜಾಣನೇ ಹೇಳು.. ಹಾಡುಗಳಿಗೆ ಪ್ರೇಕ್ಷಕರ ತಲೆದೂಗಿದರು.

ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು, ಜೋಕೆ ನಾನು ಬಳ್ಳಿಯ ಮಿಂಚು, ಸುತ್ತಮುತ್ತಲು ಸಂಜೆಗತ್ತಲು, ಮೆತ್ತ ಮೆತ್ತಗೆ ಮೈಮುಟ್ಟಲು, ಯಾರೇ ನೀನು ರೋಜಾ ಹೂವೆ ಹಾಡುಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದರು.

ಹೊಸಬೆಳಕು ಮೂಡುತ್ತಿದೆ, ಸಂತೋಷಕ್ಕೆ ಹಾಡು ಸಂತೋಷಕ್ಕೆ, ಕಾಣದಂತೆ ಮಾಯವಾದನು, ಶಿವ ಕೈಲಾಸ ಸೇರಿಕೊಂಡನು.. ಹಾಡಿಗೆ ಹಿರಿಯರು,ಕಿರಿಯರನ್ನದೇ ಕುಣಿದು ಸಂಭ್ರಮಿಸಿದರು.

ಸ್ವರಯಾನ ಕಾರ್ಯಕ್ರಮಕ್ಕೂ ಮುನ್ನ ಗಾಯಕಿ ಭಾಗ್ಯಶ್ರೀ ಗೌಡ ಹಾಗೂ ತಂಡದವರು ಐಗಿರಿ ನಂದಿನಿ ನಂದಿತಾ ಮೇದಿನಿ, ಮೈಸೂರು ರಾಜ್ಯದ ದೊರೆಯೇ ರಣಧೀರ ನಾಯ್ಕನೆ ಸೇರಿದಂತೆ ಹಲವು ಭಕ್ತಿ ಗೀತೆ ಹಾಡಿ ಪ್ರೇಕ್ಷಕರ ಮನದಲ್ಲಿ ಚಾಮುಂಡಿ ತಾಯಿಯನ್ನು ಸ್ಮರಿಸುವಂತೆ ಮಾಡಿದರು.

Share This Article
Leave a Comment