ಪಬ್ಲಿಕ್ ಅಲರ್ಟ್ ನ್ಯೂಸ್:-38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ–2026 ಮೈಸೂರು ನಗರದಲ್ಲಿ ಭವ್ಯ ಯಶಸ್ಸಿನೊಂದಿಗೆ ಮುಕ್ತಾಯ
ಪ್ರತಿಯೊಬ್ಬರ ಜೀವನದಲ್ಲೂ ವೃತ್ತಿ ಮತ್ತು ಪ್ರವೃತ್ತಿ ಕೂಡ ಬಹಳ ಮುಖ್ಯ ಎಂದು ಪದ್ಮಶ್ರೀ ಪುರಸ್ಕೃತ ಹಿಂದುಸ್ತಾನಿ ಶಾಸ್ತ್ರೀಯ ಗಾಯಕರಾದ ಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಅಂಚೆ ಇಲಾಖೆ ವತಿಯಿಂದ ನಗರದ ಅಂಚೆ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ 38ನೇ ಅಖಿಲ ಭಾರತ ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಅರ್ಥಗರ್ಭಿತ ಎಂದು ಹೇಳಿದ ಅವರು ಅಂಚೆ ಇಲಾಖೆ ಪ್ರಾಮಾಣಿಕತೆಗೆ ಹೆಸರಾದ ಇಲಾಖೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅಂಚೆ ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಡಿಜಿಟಲಿಕರಣದ ಇಂದಿನ ಯುಗದಲ್ಲಿ ಒತ್ತಡಕೊಳ್ಳಗಾದಾಗ ಸಂಗೀತ ನೆಮ್ಮದಿಯನ್ನು ತರುತ್ತದೆ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಅಂಚೆ ವೃತ್ತದ ಸ್ಥಾನಿಕ ನಿರ್ದೇಶಕರಾದ ಶ್ರೀ ಸಂದೇಶ್ ಮಹದೇವಪ್ಪ. ಬೆಂಗಳೂರು ಕೇಂದ್ರ ಅಂಚೆ ವಲಯದ ನಿರ್ದೇಶಕರಾದ ವಿ. ತಾರ, ಉತ್ತರ ಕರ್ನಾಟಕ ಅಂಚೆ ವಲಯದ ನಿರ್ದೇಶಕರಾದ ಶ್ರೀ ಹರ್ಷ ಮತ್ತು ಮೈಸೂರು ಅಂಚೆ ತರಬೇತಿ ಕೇಂದ್ರದ ನಿರ್ದೇಶಕರಾದ ಡಾ ಆಶಿಶ್ ಸಿಂಗ್ ಠಾಕೂರ್ ಹಾಜರಿದ್ದರು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಫೆಬ್ರವರಿ 16ರಿಂದ 20ರವರೆಗೆ ಮೈಸೂರು ನಗರದ ಅಂಚೆ ತರಬೇತಿ ಕೇಂದ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಾಂಸ್ಕೃತಿಕ ಸಮಾವೇಶದಲ್ಲಿ ದೇಶದಾದ್ಯಂತದ 21 ಅಂಚೆ ವಲಯಗಳ ಪ್ರತಿನಿಧಿಗಳಾಗಿ 293 ಸ್ಪರ್ಧಿಗಳು (ಅಂಚೆ ಇಲಾಖೆ ಉದ್ಯೋಗಿಗಳು ಹಾಗೂ ಅವರ ಮಕ್ಕಳು) ಭಾಗವಹಿಸಿದರು.
ಒಟ್ಟು ಫಲಿತಾಂಶ
ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಫಲಿತಾಂಶವು ಒಟ್ಟು ಪ್ರದರ್ಶನದ ಆಧಾರದ ಮೇಲೆ ಈ ಕೆಳಗಿನಂತಿದೆ:
ಕೇರಳ ಅಂಚೆ ವಲಯವು 108 ಅಂಕಗಳೊಂದಿಗೆ ಒಟ್ಟು 22 ಬಹುಮಾನಗಳನ್ನು ಗಳಿಸಿ ( 17 ಪ್ರಥಮ, 4 ದ್ವಿತೀಯ ಹಾಗೂ 1 ತೃತೀಯ ಬಹುಮಾನಗಳೊಂದಿಗೆ ಚಾಂಪಿಯನ್ ಶಿಪ್ಪ್ ಸ್ಥಾನವನ್ನು ಪಡೆಯಿತು.
ಕರ್ನಾಟಕ ಅಂಚೆ ವಲಯವು 105 ಅಂಕಗಳೊಂದಿಗೆ ಒಟ್ಟು 34 ಬಹುಮಾನಗಳನ್ನು (16 ಪ್ರಥಮ, 14 ದ್ವಿತೀಯ ಹಾಗೂ 4 ತೃತೀಯ ಬಹುಮಾನಗಳು) ಪಡೆದು ರನ್ನರ್ ಅಪ್ ಸ್ಥಾನವನ್ನು ಪಡೆಯಿತು.
ಒಡಿಶಾ ಅಂಚೆ ವಲಯವು 38 ಅಂಕಗಳೊಂದಿಗೆ ಒಟ್ಟು 11 ಬಹುಮಾನಗಳನ್ನು ಗೆದ್ದು ತೃತೀಯ ಸ್ಥಾನವನ್ನು ಪಡೆದಿತು.
ಅತ್ಯುತ್ತಮ ವೈಯಕ್ತಿಕ ಪ್ರದರ್ಶನ:-
ಹಲವಾರು ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಪ್ರಮುಖ ವಿಜೇತರು ಹೀಗಿದ್ದಾರೆ:
ಚಾರ್ಮಿ ಎಸ್,
ಅಭಿಮನ್ಯು,
ಪ್ರಥಮ್ ಕೆ ಆರ್,
ಪುಣ್ಯಶ್ರೀ ಡಿ ಎಂ,
ಶಂಭವಿ ದೆಗಾವಿಮಠ
ಸೃಷ್ಟಿ ಜಿ ಎಸ್,
ದುರ್ಗಾ ರಾಮ್ ಎಸ್,
ಶ್ರೀಹರಿ ವಿ ಆರ್,
ತೀರ್ಥ ಪ್ರಕಾಶ್,
38ನೇ AIPCM–2026 ಸಾಂಸ್ಕೃತಿಕ ವಿನಿಮಯಕ್ಕೆ ಚೈತನ್ಯಮಯ ವೇದಿಕೆಯಾಗಿದ್ದು, ಅಂಚೆ ನೌಕರರ ಮಧ್ಯೆ ಏಕತೆ, ತಂಡ-ಭಾವನೆಯನ್ನು ಹಾಗೂ ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸಿತು. ಈ ಸಮಾವೇಶವು ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯವೃಂದ ಪ್ರದರ್ಶನಗಳು, ಜನಪದ ಪರಂಪರೆಗಳು ಹಾಗೂ ಆಧುನಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು.
ಇಂತಹ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಂಚೆ ಇಲಾಖೆ ನೌಕರರ ಕಲ್ಯಾಣ, ಸೃಜನಾತ್ಮಕ ಅಭಿವ್ಯಕ್ತಿ ಹಾಗೂ ಸಂಘಟನಾ ಏಕತೆಯನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.
