ಪಬ್ಲಿಕ್ ಅಲರ್ಟ್
ಮೈಸೂರು: ಚಿತ್ರನಟ ಹಾಗೂ ರಾಜಕಾರಣಿಯಾದ ಎಸ್. ಜಯಪ್ರಕಾಶ್ (ಜೆ.ಪಿ) ಅವರ ಹುಟ್ಟುಹಬ್ಬ ಪ್ರಯುಕ್ತ ಅ.೨೮ ರಂದು ವಿವಿಧ ಸೇವಾ ಕಾರ್ಯ ಹಮ್ಮಿಕೊಂಡಿರುವುದಾಗಿ ಕನ್ನಡಪರ ಹೋರಾಟಗಾರ ತೇಜೇಶ್ ಲೋಕೇಶ್‌ಗೌಡ ತಿಳಿಸಿದರು.
ನಗರದಲ್ಲಿ ಜೆ.ಪಿ. ಅಭಿಮಾನಿ ಬಳಗದ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ಜಯಪ್ರಕಾಶ್ ಅವರು ನಂಜನಗೂಡು, ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಡಾ. ರಾಜ್‌ಕುಮಾರ್ ಪಾರ್ಕ್ಗೆ ಭೇಟಿ ನೀಡಿ ಡಾ. ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಭಿಮಾನಿಗಳಿಗೆ ಫಲಾಹಾರ ವಿತರಿಸಲಿದ್ದಾರೆಂದರು.
ನAತರ ಅಂದೇ ಬೃಂದಾವನ ಬಡಾವಣೆಯ ಚಾಮುಂಡಿ ಚಿಲ್ಡçನ್ಸ್ ಹೋಂ ವಿಶೇಷ ಚೇತನ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ, ಬಾಪೂಜಿ ಆನಂದ ಆಶ್ರಮದ ವಯೋವೃದ್ಧರಿಗೆ ಮಧ್ಯಾಹ್ನದ ಊಟ, ಹೆಬ್ಬಾಳಿನ ಚಿಗುರು ವಿಶೇಷ ಚೇತನರಿಗೆ ಅನ್ನದಾಸೋಹ ನಡೆಯಲಿದೆ. ನಂತರ ಜಯಪ್ರಕಾಶ್ ಸಂಜೆ ೫ಕ್ಕೆ ಬೆಂಗಳೂರು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ೬ಕ್ಕೆ ಚಾಮರಾಜಪೇಟೆಯ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಇವರ ದಿಗ್ದರ್ಶಕ ಶೀರ್ಷಿಕೆಯ ಹೊಸ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ ಎಂದರು.
ಸಿAಧುವಳ್ಳಿ ಶಿವಕುಮಾರ್, ಕೃಷ್ಣಪ್ಪ, ಮಹದೇವಸ್ವಾಮಿ, ರಘು ಅರಸ್, ಅಶೋಕ್‌ಕುಮಾರ್ ಹಾಜರಿದ್ದರು.
