ಪಬ್ಲಿಕ್ ಅಲರ್ಟ್
ಮೈಸೂರು: ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಮನುವಾದಿ ವಕೀಲನನ್ನು ದೇಶದಿಂದಲೇ ಗಡಿಪಾರು ಮಾಡಿ ಆತನ ವಿರುದ್ಧ ಕ್ರಮಕ್ಕೆ ದೇಶದ ಎಲ್ಲಾ ನ್ಯಾಯಮೂರ್ತಿಗಳು ಪತ್ರಬರೆಯಬೇಕೆಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಎಂ.ನಾಗರಾಜು ಒತ್ತಾಯಿಸಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಪ್ರಕರಣವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಂಶೋಧನೆ ಹಾಗೂ ತರಬೇತಿವಿಭಾಗವತಿಯಿಂದ ಪ್ರತಿಭಟಿಸಲಾಯಿತು. ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಅವರು, ನ್ಯಾಯಮೂರ್ತಿಗಳನ್ನು ಗುರಿಯಾಗಿಟ್ಟುಕೊಂಡು ನಡೆದ ಬೆಳವಣಿಗೆ ಆಘಾತಕಾರಿಯಾಗಿದೆ. ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವಾಗಿರುತ್ತದೆ. ನ್ಯಾಯಮೂರ್ತಿಯವರು ದಲಿತ ಸಮುದಾಯಕ್ಕೆ ಸೇರಿದ್ದು ಸಾಮಾಜಿಕ ಪ್ರತಿರೋಧಕಗಳನ್ನು ಹೆದರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಇಂತಹ ಅತ್ಯುನ್ನತ ಸ್ಥಾನವನ್ನು ಹೊಂದಿರುವುದನ್ನು ಸಹಿಸದೇ ಈ ಕೃತ್ಯ ಎಸಗಿರುತ್ತಾರೆ. ಶೂ ಎಸೆದ ವ್ಯಕ್ತಿ ಸನಾತನಕ್ಕೆ ಅಗೌರವ ತೋರುವುದನ್ನು ಭಾರತ ಸಹಿಸುವುದಿಲ್ಲ ಎಂಬ ಘೋಷಣೆ ಕೂಗಿರುವುದರಿಂದ ಇವನೊಬ್ಬ ಜಾತಿವಾದಿಯಾಗಿದ್ದಾನೆ. ಮತಿಯವಾದಿ ಹಾಗೂ ಸನಾತನವಾದಿಯಾಗಿದ್ದು, ದೇವರ ಪ್ರೇರಣೆಯಿಂದ ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡುತ್ತದೆ. ಭಾರತ ಸಂವಿಧಾನವನ್ನು ಅಡಿಪಾಯವನ್ನಾಗಿರಿಸಿಕೊಂಡು ದೇಶವನ್ನು ಕಟ್ಟಲಾಗಿದೆ ವಿನಃ ಸನಾತನ ಧರ್ಮದಿಂದಲ್ಲ ಎಂಬುದನ್ನು ಯಾರೂ ಮರೆಯಬಾರದು ಎಚ್ಚರಿಕೆ ನೀಡಿದರು.
ಇಡೀ ದೇಶ ಈ ಕೃತ್ಯವನ್ನು ಕಂಡಿಸಬೇಕು ಎಂದಿದ್ದಾರೆ. ವಿದೇಶದಲ್ಲಿಯೂ ಸಹ ಈ ಕೃತ್ಯದ ಬಗ್ಗೆ ಚರ್ಚೆಯಾಗಿರುತ್ತದೆ. ಭಾರತ ಸಂವಿಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಣೆ ಮಾಡುವ ಹಾಗೂ ಎತ್ತಿ ಹಿಡಿಯುವ ನ್ಯಾಯಮೂರ್ತಿಗಳನ್ನು ಹೆದರಿಸುವ ಅವಮಾನಿಸುವ ಯತ್ನ ಇದಾಗಿದ್ದು, ಇದರ ಹಿಂದೆ ಸನಾತನ ಧರ್ಮವನ್ನು ಪ್ರತಿಪಾದಿಸುವ ಜಾತಿವಾದಿಗಳ, ಮನುವಾದಿಗಳ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಂಬಲ ಇರುತ್ತದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದರು.
ನ್ಯಾಯಮೂರ್ತಿಗಳ ಮೇಲೆ ಶೂ ಎಸೆದವನ ಗಡಿಪಾರಿಗೆ ಆಗ್ರಹ
Leave a Comment
Leave a Comment
