ಕರ್ನಾಟಕ ಸೇನಾಪಡೆಯಿಂದ ಗಾಂಧಿ ಜಯಂತಿ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕರ್ನಾಟಕ ಸೇನಾಪಡೆವತಿಯಿಂದ ಮೈಸೂರಿನ ರೋಟರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಈ ದೇಶ, ವಿಶ್ವ ಕಂಡ ಅತ್ಯುತ್ತಮ ಶಾಂತಿ & ಅಹಿಂಸ ನಾಯಕ. ನಾವು ಯಾರು ಪರಮಾತ್ಮನನ್ನು ನೋಡಿಲ್ಲ. ಪರಮಾತ್ಮನನ್ನು ನಾವು ಶಕ್ತಿ ಕೊಡು ಎಂದು ಕೇಳಿಕೊಳ್ಳುತ್ತೇವೆ. ಆದರೆ ಮಹಾ ಆತ್ಮ, ಮಹಾತ್ಮ ನಮ್ಮ ದೇಶದ 150 ಕೋಟಿ ಜನರಿಗೆ ಶಕ್ತಿಯನ್ನು ನೀಡಿದವರು. ಗಾಂಧೀಜಿರವರ ತ್ಯಾಗ, ಹೋರಾಟ, ಶ್ರಮವನ್ನು ಈ ದೇಶದಲ್ಲಿ ಯಾರು ನೆನಪಿಸಿಕೊಳ್ಳುತ್ತಿಲ್ಲ. ಇಂದು ಭಾರತ ವಿಶ್ವದಲ್ಲಿ ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಹೋಗಲು ಇವರ ಆಶೀರ್ವಾದ, ಸಂಕಲ್ಪವೇ ಕಾರಣ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಾಂಧಿವಾದಿ, ನಿವೃತ್ತ ಪ್ರಸಾರಾಂಗ ನಿರ್ದೇಶಕ ಕೆ.ಟಿ.ವೀರಪ್ಪ, ಕೆ ಆರ್ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ.ಎಲ್.ದೇವೇಗೌಡ, ಸಮಾಜ ಸೇವಕ ಕೆ.ಆರ್.ಧನ್ಯಕುಮಾರ್, ಕಿಯೋನಿಕ್ಸ್ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಬಾಲಾಜಿ, ಓಂ ಶ್ರೀ ಸಾಯಿ ಟ್ರಸ್ಟ್ ನಾ ಮ್ಯಾನೇಜಿಂಗ್ ಟ್ರಸ್ಟಿ ಡಾ.ಹೆಚ್.ಪಿ.ರಾಣಿಪ್ರಭ, ಹಿರಿಯ ಸಾಹಿತಿ ಡಾ.ಪುಷ್ಪ ಎಂ ಅಯ್ಯಂಗಾರ್, ನಂದನ ಸ್ಪೆಷಾಲಿಟಿ ಆಸ್ಪತ್ರೆ ನೇತ್ರ ರೋಗ ತಙ್ನ ಡಾ. ಸುಧಿಂದ್ರ, ಧಾರ್ಮಿಕ ಮುಖಂಡ ಡಾ.ಶ್ರೀಷಾ ಭಟ್ ಶ್ರೀ ಮಹಾತ್ಮ ಗಾಂಧೀಜಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾರಾಣಿ ವಿಜ್ಞಾನ ಕಾಲೇಜಿನ ಸುಮಾರು 40 ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಹಾತ್ಮ ಗಾಂಧೀಜಿ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾತ್ಮ ಗಾಂಧೀಜಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಟಿಜಿ ಆದಿಶೇಷಗೌಡ, ಮೈಸೂರು ಮಹಾನಗರ ಪಾಲಿಕೆ, ವಲಯ 3ರ ಸಹಾಯಕ ಆಯುಕ್ತ ಎಂ.ಸಂದೀಪ್, ಹಿರಿಯ ಸಮಾಜ ಸೇವಕ ಡಾ.ರಘುರಾಂ ಕೆ ವಾಜಪೇಯಿ, ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ, ಮೈಸೂರು ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ, ಹನುಮಂತಯ್ಯ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ವರಕೂಡು ಕೃಷ್ಣೇಗೌಡ, ಪ್ರಭಾಕರ್, ನೇಹ, ಭಾಗ್ಯಮ್ಮ, ಜ್ಯೋತಿ, ಗೀತಾ ಗೌಡ, ಡಾ . ಶಾಂತರಾಜೇ ಅರಸ್, ಮೊಗಣ್ಣಾಚಾರ್, ಬಸವರಾಜು, ಕುಮಾರ್, ರಘು ಅರಸ್, ರವೀಶ್, ವಿಷ್ಣು ಸೇರಿ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment