ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರಿಗೆ ಶಕ್ತಿ: ಡಾ: ಪುಷ್ಪ ಅಮರನಾಥ್

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರಿಗೆ ಶಕ್ತಿಯಾಗಿದ್ದ ಧೀರ ಮಹಿಳೆ. ಜೀವನದುದ್ದಕ್ಕೂ ಹೋರಾಟ ನಡೆಸಿದ ದಿಟ್ಟ ಮಹಿಳೆ ಎಂದು ಕರ್ನಾಟಕ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ತಿಳಿಸಿದರು‌.

ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಉದ್ಘಾಟಿಸಿ  ಮಾತನಾಡಿದರು. ಕಿತ್ತೂರು ರಾಣಿ ಚೆನ್ನಮ್ಮ ಎಂದರೆ  ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಮನೆ ಮಾತಾಗಿದ್ದಾರೆ. 18ನೇ ಶತಮಾನದಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜಯಪಡೆದರು. ಸಣ್ಣ ಸಾಮ್ರಾಜ್ಯದ ರಾಣಿಯಾಗಿದ್ದರೂ ಬ್ರಿಟಿಷರ ವಿರುದ್ಧ ಅವರ ವೀರ ಹೋರಾಟ ಇತಿಹಾಸದ ಪುಟದಲ್ಲಿ ಬರೆದಿಡುವಂತೆ ಮಾಡಿದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಟದ ನಂತರ  ಸ್ವಾತಂತ್ರ್ಯ ಪಡೆಯಲು ಆನೇಕ ಹೋರಾಟಗಾರರಿಗೆ ಕಿತ್ತೂರು ರಾಣಿ ಚೆನ್ನಮ್ಮ  ಪ್ರೇರಣೆಯಾಗಿದ್ದರೆ ಎಂದು ಬಣ್ಣಿಸಿದರು.

ಬ್ರಿಟಿಷ್ ರ ಆಳ್ವಿಕೆ ಕಾಲದಲ್ಲಿ ರಾಜ ಸಮಾಂತರು ಬ್ರಿಟಿಷ್ ರಿಗೆ ಕಪ್ಪ ನೀಡುತ್ತಿದ್ದರು ಆದರೆ ಅದನ್ನು ಕಿತ್ತೂರು ರಾಣಿ ಚೆನ್ನಮ್ಮ ಇದನ್ನು ವಿರೋಧಿಸಿ  ನಿಮಗೇಕೆ ಕೊಡಬೇಕು ಕಪ್ಪ‌ ಎಂದು ಹೋರಾಟ ಮಾಡಿದ ಏಕೈಕ ಮಹಿಳೆ.  ಸಮಾಜದಲ್ಲಿ ಹೆಣ್ಣು ಮಕ್ಕಳು ತಪ್ಪನ್ನು ವಿರೋಧಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದರು.

ಪುಜಾಪ್ರಭುತ್ವ, ಐಕ್ಯತೆ, ನಾಡುನುಡಿಗೆ ಧಕ್ಕೆಯಾದಾಗ ವಿರೋಧ ಶಕ್ತಿಗಳ ವಿರುದ್ಧ ಸಾರ್ವಜನಿಕರು ಗಟ್ಟಿಯಾಗಿ ನಿಲ್ಲಬೇಕಿದೆ. ಸೋತಾಗ ಕುಗ್ಗದೆ ಬದುಕುವ, ಬೆಳೆಯುವ ಶಕ್ತಿಯನ್ನು ರೂಡಿಸಿಕೊಳ್ಳಿ.  ಯಾವುದೇ ಅನ್ಯಾಯವಾದರೂ ಎದುರಿಸಿ ನಿಲ್ಲಬೇಕು ಎಂದು ಹೇಳಿದರು.

ಸಾಹಿತಿಗಳಾದ ಡಾ.ಸುಜಾತ ಅಕ್ಕಿ ಮಾತನಾಡಿ  ಬ್ರಿಟಿಷರು ವ್ಯಾಪಾರ ಕ್ಕೋಸ್ಕರ ಭಾರತಕ್ಕೆ ಬಂದರು ನಂತರ ನಮ್ಮಲ್ಲಿದ್ದ,  ಸಮೃದ್ಧವಾಗಿರುವಂತಹ ಸಂಪನ್ಮೂಲ,  ಮಸಾಲೆ ಪದಾರ್ಥಗಳನ್ನು ಹೊತ್ತು ಹೋದರು. ನಂತರ ಇಲ್ಲಿಯ  ಶ್ರೀಮಂತಿಕೆಯನ್ನು ಸವಿಯುತ್ತ ಇಲ್ಲೇ ನೆಲಸಿದರು.ಸಂಘಟನೆಯ ಕೊರತೆಯನ್ನು ಉಪಯೋಗಿಸಿಕೊಂಡು ಬ್ರಿಟಿಷರು ಭಾರತಲ್ಲೇ ನೆಲೆಯೂರಿದರು  ವ್ಯಾಪಾರ ಮಾಡುತ್ತಾ ಮಾಡುತ್ತಾ ಎಲ್ಲಾ ಸಂಸ್ಥಾನಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು ಎಂದು ಸ್ಮರಿಸಿದರು
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ್, ಮೈಸೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ, ಹಿರಿಯ ಕನ್ನಡ ಪರ ಹೋರಾಟಗಾರ ಮೂಗುರು ನಂಜುಂಡಸ್ವಾಮಿ, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಯಮುನಾ ಮತ್ತಿತರು ಉಪಸ್ಥಿತರಿದ್ದರು.

Share This Article
Leave a Comment