ಪಬ್ಲಿಕ್ ಅಲರ್ಟ್
ಮೈಸೂರು: ಸಚಿವರಾದ ಪ್ರಿಯಾಂಕ ಖರ್ಗೆಯವರೇ ನಿಮ್ಮದೇ ಇಲಾಖೆ ವ್ಯಾಪ್ತಿಗೆ ಬರುವ ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ 27 ತಿಂಗಳ ಸಂಬಳ ನೀಡದೆ ಇರುವುದರಿಂದ ನೀರುಗಂಟಿ ಚಿಕ್ಕೂಸನಾಯಕ ಬೇಸತ್ತು ಪಿ ಡಿ ಓ ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷೆಯ ಗಂಡನ ಕಿರುಕುಳಕ್ಕೆ ಮನನೊಂದು ಹೊನ್ನೂರು ಗ್ರಾಮ ಪಂಚಾಯತಿಯ ಮುಂದೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಇಲಾಖೆ ವೈಪಲ್ಯ ನಿಮ್ಮದೇ ವೈಪಲ್ಯಕ್ಕೆ ಅಮಾಯಕನ ಬಲಿಯಾಗಿದೆ ಎಂದು ಮೈಸೂರು ಮಹಾನಗರ ಮಾಧ್ಯಮ ಸಹ ಸಂಚಾಲಕ ಬಿ.ಎಂ.ಸಂತೋಷ್ ಕುಮಾರ್ ತಿಳಿಸಿದರು.
ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿ ನಿಮಗೆ ಮಾಡಲು ಬಹಳಷ್ಟು ಕೆಲಸಗಳಿವೆ. ನಿಮ್ಮ ಸರ್ಕಾರ ವೈಪಲ್ಯಗಳ ಕಾರಣ, ಗೂಗಲ್ ಕಂಪನಿ ಆಂಧ್ರದ ಪಾಲಾಗಿದೆ. ಕರ್ನಾಟಕಕ್ಕೆ ತಂದಿದ್ದರೆ, ಉದ್ಯೋಗವಕಾಶಗಳು ಸಿಗುತ್ತಿದ್ದವು, ಈ ಜವಾಬ್ದಾರಿಯನ್ನು ನಿರ್ವಹಿಸದ ನೀವು ಆರ್ ಎಸ್ ಎಸ್ ಬ್ಯಾನ್ ಮಾಡಿ ಎಂದು ದ್ವೇಷದ ರಾಜಕಾರಣ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ. ಗ್ರಾಮ ಪಂಚಾಯತಿಯಲ್ಲಿ 27 ತಿಂಗಳಿಂದ ಸಂಬಳಕೊಟ್ಟಿಲ್ಲ ಎಂದರೆ ನಿಮ್ಮ ಇಲಾಖೆ ಇದೆಯೋ, ಸತ್ತಿದೆಯೋ,
ಸಂವಿಧಾನದ ಉದ್ದುದ್ದ ಭಾಷಣ ಮಾಡುವ ನೀವು ಅದೇ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಬಲಿತೆಗೆದುಕೊಂಡಿದ್ದೀರಿ. ಈ ಜನರನ್ನು ಅಧಿಕಾರಕ್ಕಾಗಿ ಬಳಸಿಕೊಳ್ಳುವ ನೀವು ಕನಿಷ್ಠ ಆ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಬೇಕಿತ್ತು. ಅದು ಮಾಡದೇ ಆರ್ ಎಸ್ ಎಸ್ ತೋಜೋವದೆ ಮಾಡುವುದೇ ನಿಮ್ಮ ಸಚಿವಗಿರಿಯ ಕೆಲಸವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮ್ಮನ್ನು ಆರ್ ಎಸ್ ಎಸ್ ಹಾಗೂ ಬಿಜೆಪಿ ತೋಜೋವದೆ ಮಾಡಲು ಸಚಿವಗಿರಿ ನೀಡಿದ್ದಾರೆ ಎನ್ನುವಂತಿದೆ. ಗ್ರಾಮೀಣಬಿವೃದ್ಧಿ, ಐ ಟಿ ಬಿ ಟಿ ಸಚಿವರಾಗಿ ನಿಮ್ಮ ಕೊಡುಗೆ ಶೂನ್ಯ. ಮುಂದಿನ ದಿನಗಳಲ್ಲಿ ನಿಮ್ಮ ಆಡಳಿತ ವೈಖರಿಗೆ ಜನರೇ ನಿಮ್ಮನ್ನು ತಿರಸ್ಕಾರ ಮಾಡಿ ಮನೆಗೆ ಕಳುಹಿಸುತ್ತಾರೆ. ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ನೀರು ಗಂಟಿ ಸಾವಿಗೆ ಅವರ ಕುಟುಂಬಕ್ಕೆ ನ್ಯಾಯ ಕೊಡಬೇಕು ಎಂದು ಅಗ್ರಹಿಸಿದರು.
