ಸಿದ್ದಗಂಗೆಯಲ್ಲಿ ನೇಕ್ಸ್ಟ್ ಡೋರ್ ನಿದ್ರಾದೇವಿ ತಂಡ

Chethan
1 Min Read

ಪಬ್ಲಿಕ್ ಅಲರ್ಟ್
ತುಮಕೂರು: ನಿದ್ದೆ ಮನುಷ್ಯನ ಅವಿಭಾಜ್ಯ ಅಂಗ. ಹಣ ಹಿಂದೆ ಓಡುತ್ತಿರುವ ಈ ವೇಳೆ ನಿದ್ದೆಗೆಟ್ಟು ದುಡಿಯುವವರೇ ಹೆಚ್ಚಾಗಿದ್ದಾರೆ. ಮತ್ತೆ ಕೆಲವರಿಗೆ ರಾತ್ರಿ ಸಮಯದಲ್ಲಿ ನಿದ್ದೆಯೂ ಕೂಡ ಬರುವುದಿಲ್ಲ ಈ ಕಾರಣಕ್ಕಾಗಿ ಮನುಷ್ಯರ ಮನಸ್ಸಿನ ತೋಳಲಾಟವನ್ನು ಹೋಗಲಾಡಿಸಿ ನಿದ್ರಾಹೀನತೆಗೆ ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರ ದಿವ್ಯ ಔಷಧವಾಗಲಿದೆ ಎನ್ನುತ್ತಾರೆ ನಿರ್ಮಾಪಕ ಜೈ ರಾಮ್ ದೇವ್ ಸಮುದ್ರ.
ಶ್ರೀ ಸಿದ್ದಗಂಗಾ ಮಠದಲ್ಲಿ ಚಿತ್ರದ ಯಶಸ್ವಿಗೆ ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆ ಪೂಜೆ ಸಲ್ಲಿಸಿ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು, ಮಕ್ಕಳೊಂದಿಗೆ ಗೌರಿ ಹಬ್ಬ ಆಚರಿಸಿದ ಚಿತ್ರತಂಡ ಚಿತ್ರದ ಪ್ರಮೋಶನ್ ಮಾಡಿತು.
ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಸುಪುತ್ರ ಪ್ರವೀರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಅವರ ಅಭಿನಯದ ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರವು ವಿಭಿನ್ನ ಕಥಾ ಹಂದರವನ್ನು ಹೊಂದಿದ್ದು ಇಂದಿನ ಯುವಕರು ನಿದ್ರಾ ಹೀನತೆಯಿಂದ ಬಳಲುತ್ತಿರುವ ಸನ್ನಿವೇಶವನ್ನು ತೆರೆಯ ಮೇಲೆ ನಿರ್ದೇಶಕ ಸುರಗ್ ಸಾಗರ್ ಅವರು ಕಟ್ಟಿಕೊಟ್ಟಿದ್ದಾರೆ, ಖಂಡಿತವಾಗಿ ಇಂದಿನ ಯುವ ಜನರಿಗೆ ಈ ಚಿತ್ರ ಮನರಂಜನೆ ನೀಡಲಿದೆ ಎಂದು ಜೈರಾಮ್ ದೇವಸಮುದ್ರ ಅವರು ಮಾಹಿತಿ ಹಂಚಿಕೊಂಡರು.
ಚಿತ್ರದ ನಾಯಕ ನಟ ಪ್ರವೀರ್ ಶೆಟ್ಟಿ ಸೆ. ೧೨ರಿಂದ ರಾಜ್ಯಾದ್ಯಂತ ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು ನಮಗೆ ನಾಡಿನ ಎಲ್ಲಾ ಜನರ ಆಶೀರ್ವಾದ ಬೇಕಿದೆ ಎಂದು ಮನವಿ ಮಾಡಿಕೊಂಡರು.
ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರದ ನಾಯಕಿ ರಿಷಿಕ ನಾಯಕ್ ಮಾತನಾಡಿದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸುರಾಗ್ ಸಾಗರ್, ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಮಂಜುನಾಥಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಹಾಗೂ ಮಾಜಿ ಕರವೇ ಜಿಲ್ಲಾಧ್ಯಕ್ಷ ಟಿ ಇ ರಘುರಾಮ್, ಕರವೇ ಕಾರ್ಯಕರ್ತ ಲೋಕೇಶ್ ಗೌಡ ಇತರರು ಭಾಗವಹಿಸಿದ್ದರು.

Share This Article
Leave a Comment