ಪಬ್ಲಿಕ್ ಅಲರ್ಟ್
ಮೈಸೂರು: ಶಾರದಾದೇವಿ ನಗರದಲ್ಲಿ ಸಂಸದರ ನಿಧಿಯಿಂದ ಅನುದಾನ ನೀಡಿರುವ ಶಾರದಾದೇವಿ ನಗರದ ನಮೋ ಉದ್ಯಾನವನ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮೈಸೂರು ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಬಿ.ಎಂ.ರಘು, ಚಾಮುಂಡೇಶ್ವರಿ ಕ್ಷೇತ್ರ ಅಧ್ಯಕ್ಷ ರಾಕೇಶ್ ಭಟ್, ಮುಖಂಡರಾದ ಹೆಚ್.ಜಿ.ರಾಜಮಣಿ, ರಮೇಶ್ ರಾಂಪುರೆ, ಪುಟ್ಟಸ್ವಾಮಿ, ಶ್ರೀಧರ್ ಶರ್ಮಾ, ಶಶಿಕಾಂತ್, ಅಭಿಷೇಕ್ ಗೌಡ, ಶಿವು ಪಟೇಲ್, ರವಿ ನಾಯಕoಡ, ರವಿ ಅರಸ್, ರಮಾಬಾಯಿ, ಸುಮಿತ್ರ,ಲೋಕೇಶ್ ರೆಡ್ಡಿ, ಹಿರಿಯಣ್ಣ, ಲಕ್ಷ್ಮಿ ಜಯಶೇಖರ್,ವಿನುತಾ, ಮಂಜುಳಾ, ಕಲಾವತಿ,ತುಳಸಿ, ರಾಧಾ, ಚಂದ್ರಶೇಖರ್ ಶೆಟ್ಟಿ, ಹೇಮಂತ್, ಬಸವಣ್ಣ, ಮಧು ಶೇಖರ್, ಚಂದನ್, ಸಾಗರ್, ಸೂರ್ಯ ಮುಂತಾದವರು ಉಪಸ್ಥಿತರಿದ್ದರು.
