ರಂಗಭೂಮಿ ಕಲೆ ಸಾಮಾಜಿಕ ಸಾಂಸ್ಕೃತಿಕ, ಶಿಕ್ಷಣ ಮತ್ತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ : ಜಿ ಟಿ ದೇವೇಗೌಡ
ಮೈಸೂರಿನ ಪುರುಭವನದಲ್ಲಿ ನಡೆದ ಪ್ರಭುಲಿಂಗಲೀಲೆ ಎಂಬ ಪೌರಾಣಿಕ ನಾಟಕದಲ್ಲಿ ಚಾಮುಲ್,ಯೂನಿಯನ್ ಅಧ್ಯಕ್ಷರು, ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಶ್ರೀ ಹೆಚ್ ಎಸ್ ನಂಜುಂಡ ಪ್ರಸಾದ್ ರವರು ಮತ್ತು ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರಾದ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಕೆರೆಹಳ್ಳಿ ಬಿ ದೊರೆಸ್ವಾಮಿ ರವರಿಗೆ ಸನ್ಮಾನಿಸಿ ಗೌರವಿಸಿದರು.
ಮಾತನಾಡಿದ ಜಿ ಟಿ ದೇವೇಗೌಡ ರವರು ರಂಗಭೂಮಿ ಎನ್ನುವುದು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುವುದಕ್ಕೆ ರಂಗಭೂಮಿ ಶ್ರೇಷ್ಠ,ಕಲೆ ಅದನ್ನು ಬೆಳೆಸಿ,ಉಳಿಸಿ, ಇಂದಿನ ಪೀಳಿಗೆಗೆ ಪ್ರೇರಣೆಯಾಗಿರುವ ಕೆರೆಹಳ್ಳಿ ಬಿ ದೊರೆಸ್ವಾಮಿ ರವರ ಅತ್ಯದ್ಭುತವಾದ ಕಲೆ ಪ್ರದರ್ಶನ ನಿಜಕ್ಕೂ ಮೈ ಜುಮ್ ಏನಿಸುವ ನಟನೆ ಇವರ ಕಲೆ ಹೀಗೆ ಮುಂದುವರೆಯಲಿ ಮತ್ತು ಸಾವಿರಾರು ಜನಕ್ಕೆ ಸ್ಪೂರ್ತಿಯಾಗಿರುವ ಇವರಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ದೊರಕಲಿ ಎಂದು ತಿಳಿಸುವುದರ ಜೊತೆಗೆ ಸಹಕಾರ ರತ್ನ ಶ್ರೀ ನಂಜುಂಡಪ್ಪ ರವರು ಅನೇಕ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಜಿ ಟಿ ದೇವೇಗೌಡ ರವರು ಕುದೇರು ಮಠದ ಪರಮಪೂಜ್ಯ ಶ್ರೀ ಗುರು ಶಾಂತಮ್ಮ ಸ್ವಾಮಿಜಿ ಅವರು ಹಾಗೂ ರಾಘವೇಂದ್ರ ನಗರ ಮಠದ ಶ್ರೀಗಳವರು ಮತ್ತು ಜಯರಾಮು, ಕೆರೆಹಳ್ಳಿ ಬಿ ದೊರೆಸ್ವಾಮಿ ರವರು, ಆಯೋಜಕರಾದ ಬಿಸಿ ಮಹದೇವಸ್ವಾಮಿ ರವರು ಚಿಕ್ಕ ರೇಖಾ, ಶಿವಕುಮಾರ್ (ರಂಸಿ)ಮುರುಡಗಳ್ಳಿ ಶಿವಣ್ಣ, ಜಗದೀಶ್, ಮಲ್ಲು, ಸುರೇಶ್ ಕೋಚನಹಳ್ಳಿ, ಪುರುಷೋತ್ತಮ್,ಮುಂತಾದವರು ಉಪಸ್ಥಿತರಿದ್ದರು.
ರಂಗಭೂಮಿ ಕಲೆ ಸಾಮಾಜಿಕ ಸಾಂಸ್ಕೃತಿಕ, ಶಿಕ್ಷಣ ಮತ್ತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ : ಜಿ ಟಿ ದೇವೇಗೌಡ
Leave a Comment
Leave a Comment
