ಜಂಬೂ ಸವಾರಿಯಲ್ಲಿ 35ಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳು pp ಭಾಗಿ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಈ ಬಾರಿ ಜಂಬೂ ಸವಾರಿಯಲ್ಲಿ ೩೦ ಜಿಲ್ಲೆಗಳ ಸ್ತಬ್ಧಚಿತ್ರಗಳು ಸೇರಿದಂತೆ ವಿವಿಧ ನಿಗಮ, ಇಲಾಖೆಗಳ ೩೫ಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಲಿವೆ. 
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶಕ್ತಿ ಯೋಜನೆಯ ಯಶೋಗಾಥೆ, ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ವಿಜಯದ ರನ್‌ ವೇ ಭಾರತದ ಆಕಾಶಕ್ಕೆ ಎಚ್‌ಎಎಲ್‌ನ ಶಕ್ತಿ, ಭಾರತ್ ಅರ್ಥ್ ಮೂವರ್ಸ್ ಅಮಿಟೆಡ್ ಆತ್ಮನಿರ್ಭರ ಭಾರತವನ್ನು ಮುನ್ನಡೆಸುತ್ತಿದೆ ರಕ್ಷಣಾ ಚಲನಶೀಲತೆಯಲ್ಲಿ ಮಾದರಿ, ಭಾರತೀಯ ರೈಲ್ವೆ ಇಲಾಖೆ ಚಿನಾಬ್ ಸೇತು ಹಾಗೂ ಪಂಬನ್ ಸೇತು, ಭೋವಿ ಅಭಿವೃದ್ಧಿ ನಿಗಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯೋಜನೆ, ನಗರಾಭಿವೃದ್ಧಿ ಇಲಾಖೆ ಸ್ಮಾರ್ಟ್, ಶುದ್ಧ ಕಾಳಜಿಯ ನಗರಗಳು, ಮೈಸೂರು ಮಹಾನಗರ ಪಾಲಿಕೆ ಸ್ವಾಸ್ಥ ಮತ್ತು ಸುಸ್ಥಿರ ಮೈಸೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಮಾದರಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಭೂತಪೂರ್ವ ಸಾಧನ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡ್ರಗ್ಸ್‌ ಮುಕ್ಯ ಕ್ಯಾಂಪಸ್‌ ಮಾದರಿ ಪ್ರದರ್ಶನವಿರಲಿದೆ. 
ಮಂಡ್ಯ ಜಿಲ್ಲೆ “ಸ್ವಾತಂತ್ರ್ಯ ಹೋರಾಟದ ದೀಪ-ಶಿವಪುರದ ಧ್ವಜ ಸತ್ಯಾಗ್ರಹ”, ಚಿಕ್ಕಬಳ್ಳಾಪುರ ಜಿಲ್ಲೆ ಜ್ಞಾನಿ – ವಿಜ್ಞಾನಿಗಳ ನಾಡು, ಧಾರವಾಡ ಜಿಲ್ಲೆಯ “ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಗರಗ ಕಲಘಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ”, ಉತ್ತರಕನ್ನಡ ಜಿಲ್ಲೆ ರಾಣಿ ಚೆನ್ನಭೈರದೇವಿ – ಮಸಾಲೆ ರಾಣಿ, ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ಮತ್ತು ಶಿಲ್ಪಕಲೆಗಳ ನಾಡು, ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ, ಶಿವಮೊಗ್ಗದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ, ಬಳ್ಳಾರಿ ಜಿಲ್ಲೆಯ ಸೆಪ್ಟೆಂಬರ್‌ನಲ್ಲಿ ಸಂಡೂರು ನೋಡು,  ವಿಜಯಪುರ ಜಿಲ್ಲೆಯ ಶಿವನ ಪ್ರತಿಮೆ ಶಿವಗಿರಿ ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಬಿಂಬಿಸುವ ಕಲೆ ದೈವಾರಾಧನೆ ಹಾಗೂ ಸಾಂಪ್ರದಾಯಿಕ ಕ್ರೀಡೆ, ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ, ಮಾಹಾದಾಸೋಹಿ ಪೀಠ ಮತ್ತು ಬಹುಮನಿ ಸುಲ್ತಾನ ಸಾಮ್ರಾಜ್ಯ, ತುಮಕೂರು ಜಿಲ್ಲೆಯ “ನವ್ಯ ಮತ್ತು ಪ್ರಾಚೀನ ಶಿಲ್ಪ ಕಲಾ ಸಂಕೀರ್ಣ- ನಮ್ಮ ತುಮಕೂರು ಜಿಲ್ಲೆ”, ಉಡುಪಿ ಜಿಲ್ಲೆಯ ಸ್ವಚ್ಛ ಉಡುಪಿ, ಕೊಡಗಿನ ಕೊಡಗಿನ ಚಾರಣ ಪಥಗಳು, ಹಾವೇರಿಯ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹಾದೇವ,  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಮಣ್ಯ ದೇವಸ್ಥಾನ, ದೇವನಹಳ್ಳಿ ಕೋಟಿ ಮತ್ತು ಕೆಂಪೇಗೌಡರ ವಿಗ್ರಹ, ಚಿಕ್ಕಮಗಳೂರು ಜಿಲ್ಲೆಯ ‘ಭದ್ರಬಾಲ್ಯ ಯೋಜನೆ’, ಗದಗ ಜಿಲ್ಲೆಯ “ಜೋಡು ಕಳಸದ ಗುಡಿ”, ಬೆಂಗಳೂರು ಗ್ರಾಮಾಂತರ(ರಾಮನಗರ)ದ ಚನ್ನಪಟ್ಟಣ ಗೊಂಬೆ, ಹೈನುಗಾರಿಕೆ ರೇಷ್ಮೆ, ಮೈಸೂರು ಜಿಲ್ಲೆಯ ಬದನವಾಳು ನೂಲುವ ಪ್ರಾಂತ್ಯದ ಸ್ತಬ್ಧಚಿತ್ರಗಳು ಸೇರಿ ಪೊಲೀಸ್‌ ಬ್ಯಾಂಡ್‌ ಹಾಗೂ ವಿವಿಧ ಇಲಾಖೆಗಳ ಕಲಾಚಿತ್ರ ಮೆರವಣಿಗೆ ಇರಲಿವೆ. 

Share This Article
Leave a Comment