ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲೇ ವಿಜಯದಶಮಿಯ ಕೇಂದ್ರ ಬಿಂದು ಅಂಬಾರಿ ಹೊರುವ ತಾಲೀಮಿಗು ಗಜಪಡೆ ಅಣಿಯಾಗಿದ್ದು, ತಾಲೀಮಿನ ಮೊದಲ ದಿನವೇ ಜನಸ್ತೋಮ ರಸ್ತೆಯ ಇಕ್ಕೆಲಗಳಲ್ಲಿ ಸೇರಲಾರಂಭಿಸಿವೆ. ಮಾತ್ರವಲ್ಲದೆ, ದಿನೇ ದಿನೇ ತಾಲೀಮು ವೀಕ್ಷಿಸಲು ಬರುವವರ ಸಂಖ್ಯೆಯೂ ದುಪ್ಪಟಾಗಲಾರಂಭಿಸಿದೆ.
ಹೌದು ಈಗಾಗಲೇ ನಗರದೆಲ್ಲೆಡೆ ದೀಪಾಲಂಕಾರದ ಜಗಮ ಎಲ್ಲರ ಗಮನ ಸೆಳೆಯುತ್ತಿದೆ. ಮತ್ತೊಂದೆಡೆ ನಾಡಹಬ್ಬ ಉದ್ಘಾಟನೆಗೆ ದಸರೆ ಎಲ್ಲಾ ಕಾರ್ಯಕ್ರಮ ವೇದಿಕೆಗಳು ಸಜ್ಜಾಗುತ್ತಿವೆ. ಈ ಮಧ್ಯೆ ದಸರೆಯ ಕೇಂದ್ರ ಬಿಂದು ವಿಜಯದಶಮಿಯಾಗಿದ್ದು. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಅರಮನೆಯ ಆವರಣದಲ್ಲಿ ನೆಲೆಸಿರುವ ಗಜಪಡೆ ತಂಡಕ್ಕೆ ಭಾರ ಹೊರಿಸುವ ತಾಲೀಮನ್ನು ಸಹ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ವಿಶೇಷ ಜಮ್ಕಾನ, ಹಾಸಿಗೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ೪.೩೦ಕ್ಕೆ ವಿಶೇಷಪೂಜೆ ಸಲ್ಲಿಸಿ ಮರದ ಅಂಬಾರಿ ಹೊರಿಸುವ ತಾಲೀಮಿಗೆ ಸಂಪ್ರದಾಯಿಕ ಚಾಲನೆ ನೀಡಲಾಯಿತು. ಆ ಮೂಲಕ ಮರದ ಅಂಬಾರಿಯೊಳಗೆ ೭೦೦ ಕೆಜಿ ತೂಕದ ಮರಳು ಮೂಟೆಯಿಟ್ಟು ಬಾರ ಹೊರುವ ಪೂರ್ವ ತಾಲೀಮಿಗೂ ಚಾಲನೆ ದೊರೆಯಿತು.



ಇನ್ನೂ ಅದರ ಹಿಂದೆಯೇ ೧೩ ಆನೆಗಳು ಸಹ ಅಭಿಮನ್ಯುವನ್ನು ಹಿಂಬಾಲಿಸಿದವು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯಿಂದ ಪುಷ್ಪ ನಮನ ಸಲ್ಲಿಸಿ ತಾಲೀಮಿನ ಮೆರವಣಿಗೆಗೆ ಚಾಲನೆ ಸಿಕ್ಕಿತು. ಅರಮನೆ ಹೊರ ಆವರಣಕ್ಕೆ ಆಗಮಿಸುತ್ತಿದ್ದಂತೆ ಜನಸ್ತೋಮ ಭೀಮಾ ಎಂದು ಕೂಗಲಾರಂಭಿಸಿದರೆ ಮತ್ತೊಂದೆಡೆ ಆನೆಗಳನ್ನು ಸೆರೆ ಹಿಡಿಯಲು ಸಾಲುಗಟ್ಟಿ ನಿಂತಿದ್ದರು. ಈ ಹಿನ್ನಲೆಯಲ್ಲಿ ಸುಮಾರು ೨ ತಾಸಿಗೂ ಹೆಚ್ಚು ಕಾಲ ಗಜಪಡೆ ಸಾಗುವ ಮಾರ್ಗದೂದ್ದಕ್ಕೂ ಸಂಚಾರ ದಟ್ಟಣೆಯುಂಟಾಗಿತ್ತು. ಸಂಚಾರಿ ಪೊಲೀಸರು ಸಹ ವಾಹನಗಳಿಗೆ ಬದಲಿ ಮಾರ್ಗ ತೋರಿಸಲು ಇನ್ನಿಲ್ಲದ ಶತ ಪ್ರಯತ್ನ ನಡೆಸಿದರಾದರೂ ಸಹ ಅನೇಕರು ತಾಲೀಮು ವೀಕ್ಷಿಸಲು ರಸ್ತೆಯಲ್ಲೇ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ಸವಾರರಿಗೂ ಪರದಾಡುವಂತೆ ಮಾಡಿದ್ದರು.
ಅರಮನೆ ಕೋಟೆ ಆಂಜನೇಯ ದ್ವಾರದಿಂದ ಹೊರ ಗಜಪಡೆ ತಂಡ ನಾಲ್ವಡಿ ವೃತ್ತದ ಮೂಲಕ ದೇವರಾಜ ಅರಸು ಮಾರುಕಟ್ಟೆ ಮಾರ್ಗವಾಗಿ ಕೆ.ಆರ್.ಆಸ್ಪತ್ರೆ, ಆಯುರ್ವೇದಿಕ್ ವೃತ್ತ, ಬನ್ನಿಮಂಟಪದವರೆಗೆ ಸಾಗಿತು. ನಿತ್ಯವೂ ತಾಲೀಮನ್ನು ವೀಕ್ಷಿಸಲು ದಿನೇ ದಿನೇ ಜನಸ್ತೋಮ ಹೆಚ್ಚಳ ಆಗುತ್ತಿದ್ದು, ತಾಲೀಮಿನಲ್ಲೇ ಜನಸಂಖ್ಯೆ ಹೆಚ್ಚುವ ಸೇರುವ ಮೂಲಕ ಸಂದಣಿ ಹೆಚ್ಚಾಗುತ್ತಿದೆ.
