ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾತಾಗಿರುವ ಈ ಹೊತ್ತಲಲ್ಲಿ ಕತ್ತಲಾಗುತ್ತಿದ್ದಂತೆ ಇಡೀ ದೀಪಾಲಂಕಾರದ ಬೆಳಕು ಮೈಸೂರನ್ನೇ ತನ್ನ ಆಕರ್ಷಕ ಬೆಳಕಿನಲ್ಲಿ ಬೆಳಗುವಂತೆ ಕಣ್ಮನ ಸೆಳೆಯುತ್ತಿದೆ.
ಅದರಲ್ಲೂ ಅರಮನೆ ಸುತ್ತಲಿನ ರಾಜಮಾರ್ಗ ಎಕಮುಖ ಸಂಚಾರ ವ್ಯವಸ್ಥೆ ಮಾಡಿದ್ದರೂ ಸಹ ಜನತೆ ವೃತ್ತಗಳಲ್ಲಿ ದೀಪಾಲಂಕಾರ ವೀಕ್ಷಿಸಲು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಅದರಲ್ಲೂ ಕೋಟೆ ಆಂಜನೇಯ ಮಾರ್ಗ ಜಯಚಾಮರಾಜೇಂದ್ರ ವೃತ್ತ, ನಾಲ್ವಡಿ ವೃತ್ತ, ವಿಜಯದಶಮಿ ಮೆರವಣಿಗೆ ಸಾಗುವ ಸಯ್ಯಾಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆಯೂ ಸೇರಿ ಪ್ರಮುಖ ರಸ್ತೆಗಳಲ್ಲಿನ ದೀಪಾಲಂಕಾರದ ಬೆಳಕು ಎಲ್ಲರನ್ನೂ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.
ನಗರದ ಒಟ್ಟು 118 ವೃತ್ತಗಳು, 136 ಕಿ.ಮೀ ರಸ್ತೆಗಳಿಗೆ ದೀಪಾಲಂಕಾರವನ್ನು ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್‌ಇಡಿ ಬಲ್ಬ್‌ಗಳಿಂದ ಮಾಡಲಾಗಿರುವ 80 ಪ್ರತಿಕೃತಿಗಳನ್ನು ಇರಿಸುವ ಮೂಲಕ ದಸರಾ ದೀಪಾಲಂಕಾರದ ಅಂದವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈಗಾಗಲೇ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯ ಜನರು ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸುತ್ತಿದ್ದಾರೆನ್ನಬಹುದು.




ಬಾಕ್ಸ್
ಎಚ್ಚರವಿರಲಿ
ದೀಪಾಂಲಕಾರದ ಕಂಬಗಳಲ್ಲಿ ಅಂತರ ಕಾಯ್ದುಕೊಳ್ಳಿ, ಹತ್ತಿರ ನಿಂತು ಸೆಲ್ಫಿ,ಫೋಟೊ, ವೀಡಿಯೋ ಶೂಟ್ ಮಾಡುವುದು ಅಪಾಯಕಾರಿ. ಮಳೆ ಸಂದರ್ಭ ಕಂಬಗಳ ಹತ್ತಿರ ಹೋಗದಿರಿ, ದೀಪಾಲಂಕಾರದ ರಸ್ತೆಗಳಲ್ಲಿ ಜಾಗರೂಕರಾಗಿ ವಾಹನ ಚಲಾಯಿಸಿ, ದೂರುಗಳಿಗೆ ಸಹಾಯವಾಣಿ 1912 ಸಂಪರ್ಕಿಸುವಂತೆ ಚೆಸ್ಕಾಂ ಕೋರಿದೆ.
