ಶಾಸಕ ಟಿ.ಎಸ್.ಶ್ರೀವತ್ಸ ವಿರುದ್ಧ ದೂರು

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಕುರುಬ ಸಮಾಜದ ಯುವ ಮುಖಂಡ ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಬಗ್ಗೆ ಶಾಸಕ ಶ್ರೀವತ್ಸ ಅವರ ವಿರುದ್ಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿ ಸಲ್ಲಿಸಲಾಯಿತು.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀವತ್ಸರವರು ಕರುಬ ಸಮಾಜ ಮತ್ತು ನಾಯಕ ಸಮಾಜದ ಮಧ್ಯೆ ಬಿರುಕು ಸೃಷ್ಟಿಸುವ ದುರುದ್ದೇಶದಿಂದ ಮಾಧ್ಯಮದಲ್ಲಿ ಹೇಳಿಕೆ ನೀಡುತ್ತಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರದ ಹೇಳಿಕೆಯಾಗಿದೆ. ಕೂಡಲೇ ಶಾಸಕರನ್ನು ಬಂಧಿಸಿ ಸಮಾಜದ ಶಾಂತಿ ಕಾಪಾಡಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಮ್ರವಾಗಿ ಬೇಡಿಕೊಳ್ಳುತ್ತಿದ್ದೇನೆಂದರು.
ಈ ಸಂದರ್ಭದಲ್ಲಿ ಲೋಕೇಶ್ ಕುಮಾರ್ ಮಾದಾಪುರ, ಕಾಳೇಗೌಡ ಕೆರ್ಗಳ್ಳಿ, ಮೈಸೂರು ಬಸವಣ್ಣ, ಮೋಹನ್ ಸೇವಾದಳ, ರಾಜಪ್ಪ ಜಟ್ಟಿಹುಂಡಿ ರವಿಶಂಕರ್ ಮೂರ್ತಿ ಉಪಸ್ಥಿತರಿದ್ದರು.

Share This Article
Leave a Comment