ಕರ್ನಾಟಕ ಪೊಲೀಸ್ ಅಕಾಡೆಮಿಯ 46 ನೇ ತಂಡದ ಪ್ರೋ.ಪಿಎಸ್.ಐ ಪ್ರಶಿಕ್ಷಣಾರ್ಥಿ ಬಹುಮಾನ ವಿಜೇತರು

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಕರ್ನಾಟಕ ಪೊಲೀಸ್ ಅಕಾಡೆಮಿಯ 46 ನೇ ತಂಡದ ಪ್ರೋ.ಪಿಎಸ್.ಐ ಪ್ರಶಿಕ್ಷಣಾರ್ಥಿ ಬಹುಮಾನ ವಿಜೇತರು

ಮೈಸೂರು,ಮಾ 29 (ಕರ್ನಾಟಕ ವಾರ್ತೆ ):-ಸರ್ವೋತ್ತಮ ಪ್ರಶಿಕ್ಷಣಾರ್ಥಿ ಮತ್ತು ಅತ್ಯುತ್ತಮ ಒಳಾಂಗಣ ಪ್ರಶಿಕ್ಷಣಾರ್ಥಿ ಬಹುಮಾನ, ಮುಖ್ಯ ಮಂತ್ರಿಗಳ ಟ್ರೋಪಿ ಮುಖ್ಯ ಮಂತ್ರಿಗಳ ಸ್ಪೋರ್ಡ್ ಡಿಜಿ & ಐಜಿಪಿ ರವರ ಬೇಟನ್ ಬಹುಮಾನ ಮತ್ತು ಶ್ರೀ ಬಿಂ.ನಾ ಗರುಡಾಚಾರ್, ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು ರವರ (ರೂ:10,000/-)ನಗದು ಬಹುಮಾನವನ್ನು  ಅನಿಲ್ ಕುಮಾರ್ ತಿಪ್ಪಣ್ಣನವ‌ರು ಪಡೆದುಕೊಂಡಿದ್ದಾರೆ.

ಸರ್ವೋತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಬಹುಮಾನ,ಮಾನ್ಯ ಗೃಹ ಮಂತ್ರಿಗಳ ಟ್ರೋಫಿ,ಶ್ರೀ ಬಿಂ.ನಾ ಗರುಡಾಚಾರ್, ನಿವೃತ್ತ ಪೊಲೀಸ್ ಮಹಾ ನಿರ್ದೇಶಕರು ರವರು ಮತ್ತು ಪತ್ನಿ ಶ್ರೀಮತಿ ವತ್ಸಲಾ ಗರುಡಾಚಾರ್ ನಗದು(ರೂ 10,000/-) ಬಹುಮಾನವನ್ನು  ಕು.ಶಾಂಭವಿ ಜಿ ಅವರು ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಹೊರಾಂಗಣ ಪ್ರಶಿಕ್ಷಣಾರ್ಥಿ ಬಹುಮಾನ, ಡಿಜಿ & ಐಜಿಪಿ ರವರ ಕಪ್ ಅನ್ನು  ಸುನಿಲ್ ಎಂ ಅವರು ಪಡೆದುಕೊಂಡಿದ್ದಾರೆ.

ಉತ್ತಮ ರೈಫಲ್ ಫೈರಿಂಗ್ ಬಹುಮಾನವನ್ನು ದಶರಥ ಸಿ.ಕೆ ಅವರು ಪಡೆದುಕೊಂಡಿದ್ದಾರೆ.

ಉತ್ತಮ ಪಿಸ್ತೂಲ್ ಫೈರಿಂಗ್ ಬಹುಮಾನವನ್ನು ಶ್ರೀಧರ್ ಎಲ್ ಕೆ ಅವರು ಪಡೆಸುಕೊಂಡಿದ್ದಾರೆ.

Share This Article
Leave a Comment