ರಾಮಾಯಣದ ಮೂಲಕ ಜೀವನದ ಮೌಲ್ಯ ಸಾರಿದ ಮಹಾಕವಿ: ಸೋಮಶೇಖರ್

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ “ಜನನಿ” ಗೃಹ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಭಾರತ ದೇಶಕ್ಕೆ ಅತ್ಯದ್ಭುತವಾದ ಮಹಾನ್ ಗ್ರಂಥ ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ರವರು ನೀಡಿದ್ದಾರೆ.ನಮ್ಮ ಇತಿಹಾಸ ಮತ್ತು ರಾಮನ ಚರಿತ್ರೆಯ ಜೊತೆಗೆ ಪ್ರತಿಯೊಬ್ಬರು ಹೇಗೆ ಬಾಳಬೇಕು,ಹೇಗೆ ಜೀವನ ನೆಡೆಸಬೇಕು,ಪತಿ ಪತ್ನಿ,ಅಣ್ಣಾ ತಮ್ಮ,ಅಣ್ಣಾ ತಂಗಿ ಹೇಗೆ ಆದರ್ಶವಾಗಿ ಬಾಳಬೇಕು ಎಂದು ತಿಳಿಸಿದ್ದಾರೆ.ರಾಮನನ್ನು ಆದರ್ಶ ರಾಮ ಎನ್ನುತ್ತಾರೆ ಏಕೆಂದರೆ ಒಬ್ಬ ಪತ್ನಿಗೆ ಒಬ್ಬನೇ ಪತಿಯಾಗಿ ಆದರ್ಶವಾಗಿ ಬಾಳಿದವನು.ವಾಲ್ಮಿಕಿಯವರ ಸಂಪೂರ್ಣ ಜೀವನವು ದುಷ್ಟ ಕಾರ್ಯಗಳನ್ನು ತ್ಯಜಿಸಲು ಮತ್ತು ಒಳ್ಳೆಯ ಕಾರ್ಯಗಳು ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಲು ದಾರಿ ಮಾಡಿಕೊಡುತ್ತದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್ ಶ್ರೀಧರ್,ಆರ್.ಸಿ.ಜೋಗಿಮಹೇಶ್, ಭವ್ಯ, ಇಂದಿರಾ, ನಾಗರತ್ನ ಮಂಜುನಾಥ್, ಭವ್ಯಶ್ರೀ, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ಪಾಲಿಕೆ ಮಾಜಿ ಸದಸ್ಯರಾದ ಲೋಕೇಶ್.ವಿ.ಪಿಯಾ, ವಿಜಯ್ ಕುಮಾರ್, ರವಿಶಂಕರ್, ಪಟಾಕಿ ಮಂಜುನಾಥ್, ವಿಶ್ವನಾಥ್, ಶಂಕರ್ ಬಾಸ್, ರೂಪೇಶ್ , ಎನ್.ಎಸ್.ಯು,ಐ ಅಧ್ಯಕ್ಷ ಮನೋಜ್ ಪೈ, ಪುಟ್ಟಸ್ವಾಮಿ, ಮನು ನಾಯಕ್, ಸತೀಶ್ ನಾಯಕ್, ಶೇಖರ್ ನಾಯಕ್, ವಸಂತ್ ನಾಯಕ್, ನಾಗೇಶ್ ನಾಯಕ್, ರಮೇಶ್ ರಾಮಪ್ಪ, ಡೈರಿ ವೆಂಕಟೇಶ್, ಮಹದೇವೇಗೌಡ, ಮಹೇಂದ್ರ, ಚೇತನ್, ಆಟೋ ಪುಟ್ಟರಾಜು, ಅರುಣ್ ಗಂಗಾಧರ್, ಪಾನಿಪುರಿ ಶಿವು ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment