ಅ.೩೦ಕ್ಕೆ ಮುಟ್ಟಿಸಿಕೊಂಡವರು ನಾಟಕ ಪ್ರದರ್ಶನ

Pratheek
0 Min Read

ಪಬ್ಲಿಕ್ ಅಲರ್ಟ್

ಮೈಸೂರು: ರಂಗಾತರಂಗ ಮೈಸೂರು ಮಕ್ಕಳ ರಂಗಭೂಮಿವತಿಯಿಂದ ಹಮ್ಮಿಕೊಂಡಿದ್ದ ೧ ವರ್ಷದ ವಾರಾಂತ್ಯ ತರಬೇತಿಯಲ್ಲಿ ಪಾಲ್ಗೊಂಡ ಮಕ್ಕಳು ಅಭಿನಯಿಸುತ್ತಿರುವ ಪಿ.ಲಂಕೇಶ್ ಅವರ ಕಥೆಯಾಧಾರಿತವಾದ ಮುಟ್ಟಿಸಿಕೊಂಡವರು ನಾಟಕ ಪ್ರದರ್ಶನ ಅ.೩೦ರ ಸಂಜೆ೬ಕ್ಕೆ ಕಲಾ ಮಂದಿರದ ಕಿರು ರಂಗಮAದಿರದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಕೀರ್ತಿರಾಜ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಆರ್. ರಘು ಕೌಟಿಲ್ಯ, ಡಾ. ಅಮರ್‌ಕುಮಾರ್, ಡಾ.ಟಿ. ಪದ್ಮಶ್ರೀ, ಎಂ. ಚಂದ್ರಶೇಖರ್, ವೆಂಕಟೇಶ್ ಈಡಿಗರ ಮುಖ್ಯ ಅತಿಥಿಗಳಾಗಿರುವರು. ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ನಾಟಕದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆಂದರು.
ಎಂ. ಚಂದ್ರಶೇಖರ್, ಎಂ.ಪಿ. ಸಂಜೀವಿನಿ ಹಾಗೂ ಇನ್ನಿತರರು ಇದ್ದರು.

Share This Article
Leave a Comment