ಆರ್‌ಎಸ್ ಎಸ್ ಕುರಿತು ಖರ್ಗೆ ಮಾತನಾಡಲಿ: ಶ್ರೀವತ್ಸ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಆರ್ ಎಸ್ ಎಸ್ ಕುರಿತು ಸಿಎಂ, ಸಚಿವರ ಹೇಳಿಕೆಗಳ ಕುರಿತುಂತೆ ಎಐಸಿಸಿ ರಾಷ್ಟಿçÃಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ನಿಲುವು ತಿಳಿಸಲಿ ಎಂದು ಶಾಸಕ ಶ್ರೀವತ್ಸ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರಾದ ಪ್ರಿಯಾಂಕ ಖರ್ಗೆಯವರು ತಂದೆಯವರ ರಾಜಕೀಯ ಹಾದಿಯನ್ನು ಗಮನಿಸಬೇಕಿದೆ. ಅದರಲ್ಲೂ ರಾಜ್ಯದಲ್ಲಿ ಸಿಎಂ ಆದಿಯಾಗಿ ಅನೇಕ ಸಚಿವರು ಆರ್ ಎಸ್‌ಎಸ್ ನಿಗ್ರಹಿಸುವ ಕುರಿತು ಅನೇಕ ರೀತಿಯ ಹೇಳಿಕೆ ನೀಡಿದರು. ದ್ವೇಷದ ಮಾತನ್ನು ಸಹ ಆಡಿದ್ದಾರೆ. ಆದರೆ, ಅದಕ್ಕೆ ನ್ಯಾಯಾಲಯ ಸರ್ಕಾರಕ್ಕೆ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಯತೀಂದ್ರ ಹೇಳಿಕೆ ಖಂಡನೀಯ:
ಚುನಾವಣಾ ಆಯೋಗವನ್ನು ಕುರಿತಂತೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಖಂಡನೀಯ. ರಾಜ್ಯದಲ್ಲಿ ೧೪೦ ಸ್ಥಾನ ಗೆದ್ದಾಗ ಮತಗಳತನದ ಅರಿವಾಗಲಿಲ್ಲ. ಅದೇ ಸಂಸತ್ ಚುನಾವಣೆಯಲ್ಲಿ ಅಕ್ರಮವಾಗಿದೆ. ವಿಧಾನಸಭೆಯಲ್ಲಿ ಸಕ್ರಮವೇ? ಹೀಗಾಗಿ ಮತಗಳವು ಹೆಸರಿನಲ್ಲಿ ಚುನಾವಣಾ ಆಯೋಗವನ್ನು ಹೀಯಳಿಯುವ ಹೇಳಿಕೆಗಳು ಸರಿಯಲ್ಲ. ಇಂದಿರಾಗಾAದಿ ತುರ್ತು ಪರಿಸ್ಥಿತಿ ಹೇರಿಕೆ ಸೇರಿ ಯಾವೆಲ್ಲಾ ಸಂದರ್ಭದಲ್ಲಿ ಸಂವಿಧಾನ ದುರ್ಬಳಕೆ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು. 
ಸಂವಿಧಾನ ಧತ್ತ ಸಂಸ್ಥೆಯನ್ನು ಹೀಯಾಳಿಸುವುದು ಸರಿಯಲ್ಲ. ಮತದಾರರ ಪರಿಷ್ಕರಣೆ ಮಾಡಿದರೆ ತೊಂದರೆಯಾಗುತ್ತದೆ ಎಂಬ ಆತಂಕದಲ್ಲಿ ಮತಗಳವು ಕುರಿತು ಹೀಗೆಲ್ಲಾ ಮಾತನಾಡುತ್ತಿದ್ದಾರೆಂಬ ಸಂಶಯ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಬೆಳ್ಳಿಗ್ಗೆ ನಂಜನಗೂಡಿನಲ್ಲಿ ಹುಲಿದಾಳಿಯಿಂದ ಪಾರಾಗಿದ್ದರೆ, ಎಚ್.ಡಿ.ಕೋಟೆಯಲ್ಲಿ ಹಸು ತಿಂದಿದೆ. ಹೀಗಾಗಿ ಅರಣ್ಯ ಇಲಾಖೆ ಶೀಘ್ರ ಕೂಬಿಂಗ್ ಕಾರ್ಯಾಚರಣೆ ನಡೆಸಲಿ. ಅರಣ್ಯದೊಳಗಿನ ಒತ್ತುವರಿ, ಅಕ್ರಮ ಕಟ್ಟಡ ತೆರವುಗೊಳಿಸದೇ ಸುಮ್ಮನಾಗಿರುವುದೇ ಹುಲಿ ನಗರಕ್ಕೆ ಬರುವುಂತಾಗಿದೆ. ಶೀಘ್ರ ಸ್ಪಂದಿಸದಿದ್ದರೆ ಹಿಂದೆ ಅರಣ್ಯಾಧಿಕಾರಿಗಳನ್ನು ಬೋನ್ ನಲ್ಲೇ ಕೂಡಿಹಾಕಿದ್ದರು. ಅಂತಹ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತುಕೊಳ್ಳಿ ಎಂದರು. 
ನನಗಾಗಿ ಶವ ತಂದಿದ್ದರೆ ಅದು ಅಪರಾಧ ನಾನು ಕ್ರಮ ಕೈಗೊಳ್ಳುತ್ತೇನೆಂದು ಅರಣ್ಯ ಸಚಿವರು ಹೇಳಿಕೆ ನೀಡಿದ್ದು, ಶೀಘ್ರ ಸಂಬAದಿಸಿದ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಿ ಎಂದರು. 
ನಾವೆಲ್ಲಾ ಹಿರಿಯ ರಾಜಕಾರಣಿಗಳನ್ನು ನೋಡಿ ಕಲಿಯುತ್ತಿದ್ದೇವೆ. ಹೀಗಿರುವಾಗ ಮಾಜಿ ಸಭಾಧ್ಯಕ್ಷರಾದ ಕಾಗೇರಿಯವರು ಹಾಲಿ ವಿಧಾನಸಭಾ ಅಧ್ಯಕ್ಷರ ವಿರುದ್ಧ ಗುರುತರ ಅಪದಾನೆ ಮಾಡಿದ್ದು, ಇದಕ್ಕೆ ಶೀಘ್ರ ಉತ್ತರ ನೀಡಬೇಕೆಂದು ಬಯಸುತ್ತೇನೆ. ಬಹುಶಃ ಮೂರಕ್ಕೂ ಹೆಚ್ಚು ಶಾಸಕರು ಜೈಲಿಗೆ ಹೋಗಿದ್ದು ಇವರ ಸರ್ಕಾರದ ಅವಧಿಯಲ್ಲೇ ಎಂದೆನಿಸುತ್ತದೆ. ಇದೆಲ್ಲವನ್ನು ಮುಚ್ಚಿಕೊಳ್ಳಲು ಅನಗತ್ಯ ವಿಚಾರಗಳನ್ನು ಚರ್ಚೆಗೆ ತರುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆಂದು ನನಗೆ ಅನಿಸುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ವಕ್ತಾರಾದ ಮೋಹನ್, ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಕೆಆರ್ ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜೇ ಅರಸ್, ಪ್ರಧಾನ ಕಾರ್ಯದರ್ಶಿ ಜಯರಾಮ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಬಿಜೆಪಿ ಮುಖಂಡ ಗೋಕುಲ್ ಗೋವರ್ಧನ್, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

Share This Article
Leave a Comment