ಪಬ್ಲಿಕ್ ಅಲರ್ಟ್
ಮೈಸೂರು: ಆರ್ ಎಸ್ ಎಸ್ ನೊಂದಣಿಯಾಗದೇ ನಡೆಯುತ್ತಿರುವುದು ರಾಷ್ಟ್ರದ್ರೋಹಿಯೋ ಅಥವಾ ರಾಷ್ಟ್ರ ಭಕ್ತಿಯೋ ಎಂಬುದನ್ನು ಪ್ರಧಾನಿ ನರೇಂದ್ರಮೋದಿ ಹೇಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಉಗ್ರಪ್ಪ ಪ್ರಶ್ನಿಸಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ಎರಡು ವಿಚಾರದ ಬಗ್ಗೆ ಪ್ರಸ್ತಾಪ ಆಗುತ್ತಿದ್ದು, ಮತಗಳ್ಳತ( ವೋಟ್ ಚೋರ್) ಮತ್ತೊಂದು ಭಾರತೀಯ ಜನತಾ ಪಾರ್ಟಿಯವರ ಮಾತೃಸಂಸ್ಥೆ ಆರ್ ಎಸ್ ಎಸ್ ಪ್ರಾರಂಭವಾಗಿ ನೂರು ವರ್ಷಗಳ ಕಾಲ ಆಗಿದೆ. 1900 ವಿಜಯದಶಮಿಯ 25ರಂದು ಆರ್ ಎಸ್ ಎಸ್ ಪ್ರಾರಂಭ ಮಾಡಲಾಯಿತು. ಪ್ರಧಾನಿಯಾದ ನರೇಂದ್ರ ಮೋದಿ ಬಹುದೊಡ್ಡ ಸರ್ಟಿಫಿಕೇಟ್ ನೀಡಿದ್ದಾರೆ. ಆರ್ ಎಸ್ ಎಸ್ ಸಹಕಾರದಿಂದ ಪ್ರಧಾನಿಯವರಾಗಿ ಸಹಜವಾಗಿ ಸರ್ಟಿಫಿಕೇಟ್ ನೀಡಿದ್ದಾರೆ. ಒಂದೆಡೆ ಮತಗಳ್ಳತ ಆದರೆ ಮತ್ತೊಂದೆಡೆ ಸಮಾಜವನ್ನೇ ಚೋರ್ ಮಾಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ ಎಂದರು.
ಬಡತನ, ಜಾತಿ ವ್ಯವಸ್ಥೆ ಹೋಗಾಲಡಿಸಲು ಆರ್ ಎಸ್ ಎಸ್ ಕೊಡುಗೆಗಳು ಎನೂ? ದೇಶವನ್ನು ಬಲಿಷ್ಠಗೊಳಿಸಲು ಇವರ ಕೊಡುಗೆ ಎನೂ? ಕಳೆದ ನೂರು ವರ್ಷಗಳ ಸಂಘದ ನೈಜ ಭಾರತದ ಅಭಿವೃದ್ಧಿಗೆ ಎನೂ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಿ. ಆರ್ ಎಸ್ ಎಸ್ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಬ್ರಿಟಿಷ್ ಅವರ ಜತೆಗೆ ಸೇರಿಕೊಂಡಿದ್ದರು. ದೇಶಕ್ಕೆ ಸಂವಿಧಾನ ಕೊಡಲಿಕ್ಕೂ ಇವರ ಕೊಡುಗೆ ಎನಿಲ್ಲ. ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ನೈಜತೆ ಕೊಡಲಿಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದರು.
ಸಂವಿಧಾನದ ಆರ್ಟಿಕಲ್ 14ರ ಅಡಿಯಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಸಮಾನವಾಗಿ ನೋಡಬೇಕಾದ ಕಾನೂನಿನ ಅಡಿಯಲ್ಲಿ ಇಂದಿಗೂ ಸಂಕುಚಿತವಾಗಿರಿಸಿಕೊಂಡಿದ್ದಿರಿ. ಆರ್ ಎಸ್ ಎಸ್ ಅನ್ನು ಯಾಕೆ ನೊಂದಣಿ ಮಾಡಿಕೊಂಡಿಲ್ಲ. ಪ್ರತಿ ವರ್ಷ ನಾಗಪುರದಿಂದ ಕನ್ಯಾಕುಮಾರಿ, ಕಾಶ್ಮೀರದವರೆಗೂ ಎಲ್ಲಾ ಶಾಖೆಗಳಲ್ಲಿ ಆರ್ ಎಸ್ ಎಸ್ ನ ಹಿತೈಶಿಗಳ ಮೂಲಕ ಸಾವಿರಾರು ಕೋಟಿ ಹಣ ಪಡೆಯುತ್ತಿದ್ದಿರಿ. ಅದರ ಲೆಕ್ಕಚಾರ ಎಲ್ಲಿದೆ. ಎಲ್ಲಿ ತೆರಿಗೆ ಕಟ್ಟಿದ್ದಿರಿ, ಯಾವ ನ್ಯಾಷನಲ್ ಹೆರಾಲ್ಡ್ ಮೇಲೆ ಇಲ್ಲದ ಪ್ರಕರಣ ದಾಖಲಿಸಿ ತೊಂದರೆ ನೀಡುತ್ತಿದ್ದಿರಿ. ಬೇರೆಯಾದರೂ ಈ ರೀತಿ ವಸೂಲಿ ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿತ್ತು ಎಂದು ಹೇಳಿದರು.
ಬಿಜೆಪಿ, ಆರ್.ಎಸ್.ಎಸ್, ಬಜರಂಗದಳ, ಭಾರತೀಯ ಮಜೂದರ್ ಸೇರಿ 42 ಸಂಘಟನೆಗಳಿವೆ. ಇದರಲ್ಲಿ 3800 ಮಂದಿ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದ್ದು, ಇವರೆಲ್ಲರ ಅಕೌಂಟ್ ಲೆಕ್ಕಾ ಯಾರು ಹೇಳುತ್ತಾರೆ. ಹಿಂದೂತ್ವದ ಬಗ್ಗೆ ಮಾತನಾಡುತ್ತಿದ್ದಿರಿ ನಿಜವಾದ ಹಿಂದೂತ್ವದ ಫಿಲಾಸಫರ್ ವಿವೇಕಾನಂದರು ಚಿಕಾಗೋ ಮಾನವತ್ವ, ಬಾತೃತ್ವದ ಸಂದೇಶ ಸಾರಿದ್ದಾರೆ. ಕುವೆಂಪು ವಿಶ್ವಮಾನವತ್ವ ಎಂದು ಕರೆದಿದ್ದಾರೆ. ಮತದ ಆದಾರ ಮೇಲೆ ಸಮಾಜ ಒಡೆಯುವ ಕೆಲಸಮಾಡುತ್ತಿದ್ದಿರಿ. ಜಾತಿ ವ್ಯವಸ್ಥೆ ಜಾರಿ ಮಾಡುತ್ತಾ, ಶ್ರೇಣಿಕೃತ ವ್ಯವಸ್ಥೆ ಮಾಡಿದ್ದಿರಿ. ಒಬ್ಬನೇ ಒಬ್ಬ ದಲಿತನನ್ನು ಆರ್ ಎಸ್ ಎಸ್ ಸರಸ್ವತಿ ಚಾಲಕರನ್ನಾಗಿ ಮಾಡಿದ್ದಿರಾ?. ಆರ್ ಎಸ್ ಎಸ್ ನನ್ನು ಬ್ರಾಹ್ಮಣರ ಸ್ವಯಂಸೇವಕ ಸಂಘ ಎಂದು ಕರೆಯಬಹುದು ಎಂದು ಹೇಳಿದರು.
ಎಸ್ಸಿ, ಎಸ್ಟಿ ಶೂದ್ರರನ್ನು ಆರ್ ಎಸ್‌ಎಸ್ ಉನ್ನತ ಹುದ್ದೆಗೆ ನೇಮಕ ಮಾಡಿದ್ದಿರಾ? ಇಂತಹ ನೊಂದಣಿ ಯಾಗದ ಸಂಸ್ಥೆಗೆ ಎನೂ ಕ್ರಮ ಕೈಗೊಳ್ಳುತ್ತೀರಿ. 140 ಕೋಟಿ ಭಾರತೀಯರನ್ನು ಸಂಘಟನೆ ಮಾಡಿ ಸಮ ಸಮಾಜವನ್ನು ಕಟ್ಟು ನಿಟ್ಟಿನಲ್ಲಿ ಇದ್ದಿದ್ದಾರೆ ಸರಿ ಎನ್ನಬಹುದು. ದೇಶದಲ್ಲಿ ಸಮಸಮಾಜ ಕನಸು ಹೊತ್ತ ಸಂಘಟನೆ ಇದ್ದರೆ ಅದು ಕಾಂಗ್ರೆಸ್ ನ ವಿಚಾರಧಾರೆಯಾಗಿದೆ. ಜಗದೀಶ್ ಶೆಟ್ಟರ್ ಮೊದಲು ಆದೇಶ ಮಾಡಿದ್ದು, ಅದನ್ನು ನಾವು ಜಾರಿ ಮಾಡುತ್ತಿದ್ದೇವೆ ಎಂದರು.
ಕರ್ನಾಟಕ ಸಿವಿಲ್ ಸರ್ವೀಸಸ್ ನಿಯಮದಡಿಯಲ್ಲಿ ರಾಜಕೀಯ, ಮತೀಯ ಸಂಘಟನೆಗಳ ರೀತಿಯಲ್ಲಿ ಇರಬಾರದು ಎಂಬಂತೆ ಇದೆ. ಆದರೆ, ಕ್ಲಾಸ್ 4 ಇಂದ ಕ್ಲಾಸ್ ೧ ರವೆರೆಗೆ ಆರ್ ಎಸ್‌ಎಸ್ ನವರನ್ನೇ ತುಂಬಿದ್ದೀರಿ, ಅವರು ಸಮಾಜಕ್ಕೆ ಪೂರಕ ಆಗುವುದಿಲ್ಲ.ಈಗ ನಡೆಯುತ್ತಿರುವುದು ವೈಚಾರಿಕ ಸಂಘರ್ಷ ಹೊರತು, ವೈಯುಕ್ತಿಕ ಸಂಘರ್ಷ ಅಲ್ಲ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದು, ಗಾಂಧಿ ಕೊಂದ ನಿಮ್ಮ ಮನಸ್ಥಿತಿ ನೂರು ವರ್ಷದ ನಂತರವು ಹೋಗಿಲ್ಲ ಎಂಬುದು ತೋರಿಸುತ್ತದೆ. ಈ ಮನಸ್ಥಿತಿ ಬಿಡಿ ಇಲ್ಲದಿದ್ದರೆ ಜನರೇ ನಿಮಗೆ ಪಾಠ ಕಲಿಸುತ್ತಾರೆ. ಹಿಂಸೆ, ಮತೀಯ ಮನಸ್ಥಿತಿ ಇರುವವರನ್ನು ಮೋಹನ್ ಭಾಗವತ್, ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮ್ ನೊಂದಾಯಿತ ಸಂಸ್ಥೆಯಲ್ಲದ ಸಂಘಟನೆ ನಡೆಯಲು ಹೇಗೆ ಬಿಟ್ಟಿದ್ದಿರಿ ಎಂದು ಪ್ರಶ್ನಿಸಿದರು.
ಯತ್ನಾಳ್ ಗೆ ನಿಜಕ್ಕೂ ಬದ್ಧತೆ ಇದ್ದರೆ ಯಡಿಯೂರಪ್ಪ ಅವರ ಕುಟುಂಬದವರು ವಿದೇಶಗಳಲ್ಲಿ ಕೋಟಿ ಗಟ್ಟಲೆ ಆಸ್ತಿ ಇಟ್ಟಿದ್ದಾರೆನ್ನುತ್ತಾರೆ. ಯಾಕೆ ವಿಚಾರ ಸಾಕ್ಷಿಸಮೇತ ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರಿಗೂ ಸೇರಿ ಕಾನೂನು ಜಾರಿಮಾಡಿದೆ. ಇದನ್ನು ಜಾತಿ ಮನಸ್ಥಿತಿಯಲ್ಲಿ ನೋಡುವುದು ಬಿಡಿ. ಬೆಂಗಳೂರಿನ ಎಚ್ ಎಎಲ್ ಸಹಯೋಗದೊಂದಿಗೆ 2015ರಲ್ಲಿ ಇದೇ ಮೋದಿ ಅಂಬಾನಿಯವರಿಗೆ ಕೊಡುವುದಕ್ಕೆ ಇದನ್ನು ತೆಗೆದರು. 11 ವರ್ಷಗಳಲ್ಲಿ1.48 ಲಕ್ಷ ಕೋಟಿ ಸಾಲ ಮಾಡಿದ್ದಿರಿ. ಸ್ವಾತಂತ್ರ್ಯ ಬಂದ 1947ರಿಂದ ೨೦೧೪ರವರೆಗೆ 52 ಲಕ್ಷ ಕೋಟಿ ಸಾಲವಿತ್ತು. 200 ಲಕ್ಷ ಕೋಟಿ ಸಾಲ 148 ಲಕ್ಷ ಕೋಟಿ ಸಾಲ ಮಾಡಿದ್ದಿರಿ. ರಾಜ್ಯಕ್ಕೆ ನಿಮ್ಮ ಕೊಡುಗೆ ಎನೆಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಬಂದು ಎರಡು ವರ್ಷ ಆಗಿದೆ. ಬಿಬಿಎಂಪಿ ಭೂಮಿಯನ್ನು ಅಡವಿಟ್ಟು ಸಾಲ ತೆಗೆದುಕೊಂಡ ಬಿಜೆಪಿ ರಸ್ತೆ ಅಭಿವೃದ್ಧಿ ಮಾಡುವುದಾಗಿ ಹೇಳಿದರು ಸುಮ್ಮನಾದರು. ಅವರು ಎನೂ ಮಾಡದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಗಲು ರಾತ್ರಿ ವೈಟ್ ಟ್ಯಾಪಿಂಗ್ ಮಾಡುತ್ತಾ ಅಭಿವೃದ್ಧಿಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆಂದರು. ಕೆಪಿಸಿಸಿ ಉಪಾಧ್ಯಕ್ಷ ನಂಜುಂಡಸ್ವಾಮಿ, ಮೈಸೂರ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಉಪಸ್ಥಿತರಿದ್ದರು.
ಬಾಕ್ಸ್
ರಾಜ್ಯದಲ್ಲಿನ ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೆ ನನ್ನ ನೇತೃತ್ವದಲ್ಲೇ 40 ಜನರ ಸಮಿತಿ ಮಾಡಲಾಯಿತು. 2018 6 ಸಾವಿರ ಪುಟಗಳನ್ನು ನೀಡಿದ್ದೇನೆ. ವರದಿ ಅನುಷ್ಠಾನವಾದರೆ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. ಬಾಲಕಿಯ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಿಎಂ ಗಮನಕ್ಕೆ ತರಲಾಗುವುದು ಎಂದು ಉಗ್ರಪ್ಪ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಪ್ರತಿಕ್ರಯಿಸಿದರು.
ಬಾಕ್ಸ್
ಹೈಕಮಾಂಡ್ ನಿರ್ಧಾರವೇ ಅಂತಿಮ: ಉಗ್ರಪ್ಪ
ಮೈಸೂರು: ಮುಖ್ಯಮಂತ್ರಿ ಹುದ್ದೆ ಹಾಗೂ ಅಧಿಕಾರ ಹಂಚಿಕೆ ವಿಚಾರವಾಗಿ ನಮ್ಮಲ್ಲಿ ಪಕ್ಷದ ಹೈಕಮಾಂಡ್ ಅಂತಿಮ. ಸಿಎಂ ಆಯ್ಕೆಯಂತಹ ಸಂದರ್ಭ ಬಂದರೆ ಶಾಸಕರೆಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಹೈಕಮಾಂಡ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಉಗ್ರಪ್ಪ ತಿಳಿಸಿದರು.
ನವೆಂಬರ್ ಕ್ರಾಂತಿ ಹಾಗೂ ಸಿಎಂ ಬದಲಾವಣೆಗೆ ಶಾಸಕರ ಅಭಿಪ್ರಾಯವೇ ಅಂತಿಮವೇ ಎಂಬ ಕುರಿತು ಪ್ರಶ್ನೆಗೆ ಪ್ರತಿಕ್ರಯಿಸಿದರು. ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ, ಲೋಕಸಭಾ ಚುನಾವಣೆಯ ದೃಷ್ಠಿಯಲ್ಲಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಹೊಸಬರಿಗೆ ಅವಕಾಶ ಕಲ್ಪಿಸಿಕೊಡುವ ಅನಿವಾರ್ಯತೆಯೂ ಇದೆ ಎಂದರು.
1984ರಲ್ಲಿ ಎಚ್.ಡಿ.ದೇವೇಗೌಡರ ಆದಿಯಾಗಿ 16ಮಂದಿ ಹಿರಿಯ ರಾಜಕಾರಣಿಗಳನ್ನು ರಾಜೀನಾಮೆ ಕೊಡಿಸಿ ಪಕ್ಷದ ಕೆಲಸಕ್ಕೆ ಕಳುಹಸಿದರು. ಹೀಗಾಗಿ ಸಿಎಂಗೆ ಅನುಭವವಿದೆ. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಹೊಸ ಬರಿಗೆ ಬದ್ಧತೆ ಅವಕಾಶ ಕೊಡುವ ಈ ದಿಕ್ಕಿನಲ್ಲಿ ಯೋಚಿಸಬಹುದು. ೧೦ರಿಂದ ೨೦ ವರ್ಷದ ಅಧಿಕಾರದ ಅನುಭವ ಇರುವವರನ್ನು ಪಕ್ಷದ ಸಂಘಟನೆಗೆ ಕಳುಹಿಸಿಕೊಡಿ ಎಂಬುದು ನಮ್ಮ ಅಭಿಪ್ರಾಯವೂ ಆಗಿದೆ. ಈ ಅಭಿಪ್ರಾಯದ ಹಿನ್ನೆಲೆಯಲ್ಲೇ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಆರ್ ಎಸ್ ಎಸ್ ನೊಂದಣಿಯಾಗದಿರುವುದು ರಾಷ್ಟ್ರದ್ರೋಹಿಯೋ, ರಾಷ್ಟ್ರಭಕ್ತಿಯೋ: ಉಗ್ರಪ್ಪ ಪ್ರಶ್ನೆ
Leave a Comment
Leave a Comment
