ಪಬ್ಲಿಕ್ ಅಲರ್ಟ್
ಮೈಸೂರು: ಸಾಮಾಜಿಕ ವ್ಯವಸ್ಥೆ ಮತ್ತು ನೈಸರ್ಗಿಕ ಪರಿಸರ ಕಲುಷಿತವಾಗುತ್ತಿದೆ. ಭವಿಷ್ಯದ ಪೀಳಿಗೆಗಾಗಿ ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಮೈಸೂರು ನಗರ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ.ಎಸ್. ಸುಂದರ್ ರಾಜ್ ಹೇಳಿದರು.
ಹೂಟಗಳ್ಳಿ ಎಸ್‌ಆರ್‌ಎಸ್ ಕಾಲೋನಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಬೋಧಿವೃಕ್ಷö ಸೊಸೈಟಿ ಫಾರ್ ಡೆವಲಪ್‌ಮೆಂಟ್ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಹುಟ್ಟುಹಬ್ಬ ಪ್ರಯುಕ್ತ ಸಸಿ ನೆಡುವ ಹಾಗೂ ಪರಿಸರ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಬದುಕಿನಲ್ಲಿ ನಾನಾ ಕಷ್ಟಗಳನ್ನು ಎದುರಿಸಿರುವ ಹೆಣ್ಣು ಮಕ್ಕಳಿಗೆ ಒಡನಾಡಿ ಸೇವಾ ಸಂಸ್ಥೆ ಊರುಗೋಲಾಗಿ ಪಿತೃಸ್ಥಾನದಲ್ಲಿದ್ದು ಆಶ್ರಯ ನೀಡಿದೆ. ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಬದುಕು ಕಟ್ಟಿಕೊಳ್ಳಬೇಕು. ಜ್ಞಾನ ಸಂಪಾದನೆ ಮಾತ್ರ ನಿಮ್ಮೆಲ್ಲರ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಿದರು.
ಹೋರಾಟಗಾರ ಅಹಿಂದ ಜವರಪ್ಪ ಅವರು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಜನರ ಕೆಲಸಗಳಿಗೆ ಪೂರ್ಣ ಸಮಯವನ್ನು ವಿನಿಯೋಗಿಸಿದ್ದಾರೆ. ಒಡನಾಡಿ ಸೇವಾ ಸಂಸ್ಥೆಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಬೋಧಿವೃಕ್ಷö ಸೊಸೈಟಿ ಫಾರ್ ಡೆವಲಪ್‌ಮೆಂಟ್ ಅಧ್ಯಕ್ಷö ಎಂ.ಎಸ್. ಚಂದ್ರ ಮಾತನಾಡಿ, ಪರಿಸರ ವಿe್ಞÁನವು ಅರಿವು ಮೂಡಿಸುವುದಕ್ಕೆ ಸೀಮಿತವಾಗಿರದೆ ಅದನ್ನು ಹೇಗೆ ಕಾರ್ಯ ರೂಪಕ್ಕೆ ತರುವುದು ಎಂಬುವುದನ್ನು ತಿಳಿಸಬೇಕು. ಹವಾಮಾನ ವಿe್ಞÁನವು ಸಂವಿಧಾನದ ಹಕ್ಕುಗಳಿಗೆ ಮತ್ತು ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಸಿಬೇಕು. ನಾವು ತೆರದ ಜಗದಲ್ಲಿ ಅರಣ್ಯಕರಣ ಎಂಬ ಯೋಜನೆಯಲ್ಲಿ ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರ ೪೫೦೦ ಸಸಿಗಳನ್ನು ನೆಟ್ಟು ಪೋಷಿಸುತ್ತಿz್ದೆÃವೆ.
ದಲಿತ ಮುಖಂಡ ಹರಿಹರ ಅನಂತಸ್ವಾಮಿ ಮಾತನಾಡಿ, ಅಹಿಂದ ಜವರಪ್ಪ ಒಡನಾಡಿ ಸಂಸ್ಥೆಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ಆದರ್ಶವಾಗಿದೆ. ದಿಕ್ಕು ದಿಸೆಯಿಲ್ಲದಂತಹ ಮಕ್ಕಳನ್ನು ಬದುಕು ರೂಪಿಸುವ ಮಾನವೀಯ ಕಾರ್ಯದಲ್ಲಿ ಒಡನಾಡಿ ನಿರತವಾಗಿದೆ. ವಿದ್ಯಾರ್ಥಿಗಳು ಬುದ್ದನ ಚಿಂತನೆಗಳನ್ನು ರೂಡಿಸಿಕೊಳ್ಳಬೇಕು ಎಂದರು.
ಒಡನಾಡಿ ಸ್ಟ್ಯಾನ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅಂತಹ ಓದುಗರು ಮತ್ತೊಬ್ಬರಿಲ್ಲ. ಅವರಿಗೆ ಆದ್ದಂತಹ ಶೋಷಣೆ ನಮಗೆ ಯಾರಿಗೂ ಆಗಿಲ್ಲ. ಅವರ ಕಷ್ಟಗಳನ್ನೆ¯್ಲÁ ನಾವು ಅರಿತು ಅವರ ಆದರ್ಶ, ತತ್ವ ಹಾಗೂ ಅವರಿಗೆ ಓದಿನ ಆಸಕ್ತಿಯನ್ನು ಅನುಸರಿಸಬೇಕು ಎಂದು ಹೇಳಿದರು.
ಲೇಖಕ ರಾಘವೇಂದ್ರ ಅಪುರಾ, ಪ್ರಭು, ಪತ್ರಕರ್ತ ಸೋಮಯ್ಯ ಮಲೆಯೂರು, ಮುನಿರಾಜು, ಸ್ವಾಮಿ, ಪ್ರಜ್ವಲ್, ದರ್ಶನ್, ಚೇತನ್, ವಿಶ್ವನಾಥ್, ಮಂಜುನಾಥ್ ಮುಂತಾದವರಿದ್ದರು.
ಭವಿಷ್ಯದ ಪೀಳಿಗೆಗೆ ಪರಿಸರ ಉಳಿಸೋಣ
Leave a Comment
Leave a Comment
