ಮೈಸೂರು: ಮಹಾಬೋಧಿ ಶಾಲೆಯು ಪ್ರತಿವರ್ಷದಂತೆ ದೆಹಲಿ ಪಬ್ಲಿಕ್ ಶಾಲೆ ಮೈಸೂರು ಆಯೋಜಿಸಿದ್ದ ಅಂತರಶಾಲಾ ಪ್ರತಿಷ್ಠಿತ ಫ್ರೀಡಂ ಕಪ್ ಪುಟ್ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದು, ಸತತವಾಗಿ ಹತ್ತು ಬಾರಿ ಜಯಗಳಿಸಿ ಇತಿಹಾಸ ದಾಖಲೆ ಬರೆದಿದೆ. ಈ ಕ್ರೀಡಾಕೂಟದಲ್ಲಿ ಸುಮಾರು 25 ಶಾಲೆಗಳು ಪಾಲ್ಗೊಂಡಿದ್ದವು.
2015ರಲ್ಲಿ ತನ್ನ ಚೊಚ್ಚಲ ಪ್ರತಿಷ್ಠಿತ ಫ್ರೀಡಂ ಕಪ್ ಪುಟ್ಬಾಲ್ ಚಾಂಪಿಯನ್ ಶಿಪ್‌ನ್ನು ಮಡಿಲಿಗೇರಿಸಿಕೊಂಡ ಶಾಲೆಯು ತನ್ನ ವಿಜಯದ ಪರಂಪರೆಯನ್ನು ಶಿಸ್ತು, ಕ್ರೀಡಾಮನೋಭಾವ ಗಳಿಂದಾಗಿ ನಿರಂತರವಾಗಿ 10ನೇ ಬಾರಿಯೂ ಜಯ ಸಾಧಿಸಿ ಈ ಕೀರಿಟವನ್ನು ಧರಿಸಿದೆ.
ಪ್ರಾರಂಭಿಕ ಸುತ್ತಿನಲ್ಲಿ ಇಂಟರ್‌ನ್ಯಾಷ್‌ನಲ್ ಶಾಲೆಯನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ನಲ್ಲಿ ಎಕ್ಸೆಲ್ ಪಬ್ಲಿಕ್ ಶಾಲೆಯನ್ನು ಶಾಲೆಯನ್ನು ಮಣಿಸಿದ ನಂತರ ಸೆಮಿಫೈನಲ್‌ನಲ್ಲಿ ಡಿ ಪಾಲ್ ಇಂಟರನ್ಯಾಷನಲ್ ಶಾಲೆಯ ವಿರುದ್ಧ ಜಯಗಳಿಸಿ ಮುನ್ನಡೆ ಸಾಧಿಸಿ ರೋಚಕ ಅಂತಿಮ ಪಂದ್ಯದಲ್ಲಿ ಅತಿಥೇಯ ದೆಹಲಿ ಪಬ್ಲಿಕ್ ಶಾಲೆಯ ವಿರುದ್ಧ ವಿಜಯವನ್ನು ತನ್ನದಾಗಿಸಿಕೊಂಡು ಇತಿಹಾಸ ನಿರ್ಮಿಸಿತು.
ಕ್ರೀಡಾಕೂಟದಲ್ಲಿ ಸೋನಂ ದೋರ್ಜೇ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆ, ಸ್ವಾಜಿನ್ ಜೋಸ್ಟೆಲ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದರು. ಈ ಜಯಕ್ಕೆ ಕಾರಣಕರ್ತರಾದ ಹಿರಿಯ ತರಬೇತುದಾರರಾದ ಲುಟನ್ ಥ ಅನ್ನೋ ಮತ್ತು ಶ್ರೀ ವಿವೇಕ್ ಬೋಥ್ ಮೊದಲಾದವರ ಸಹಕಾರವೇ ವಿಜಯಕ್ಕೆ ಕಾರಣವಾಗಿದೆ.
ಈ ವಿಜಯೋತ್ಸವವನ್ನು ಶಾಲಾ ಆಡಳಿತ ಮಂಡಳಿಯ ತಂಡದ ಆಟಗಾರರಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿ ಅಭಿನಂದಿಸಿದರು.
ಮೈಸೂರು ಯುವ ಪುಟ್ಬಾಲ್ ಪ್ರತಿಭೆಗಳಿಗೆ ಸದಾ ವೇದಿಕೆಯನ್ನು ಒದಗಿಸುತ್ತಿರುವುದಕ್ಕಾಗಿ ದೆಹಲಿ ಪಬ್ಲಿಕ್ ಶಾಲೆಗೆ ಶಾಲಾ ಆಡಳಿತ ಮಂಡಳಿ ಧನ್ಯವಾದಗಳನ್ನು ತಿಳಿಸಿದರು.