ಪಬ್ಲಿಕ್ ಅಲರ್ಟ್
ಮೈಸೂರು:ಜಾಗೃತ ಕರ್ನಾಟಕ ಸಂಘಟನೆ ವತಿಯಿಂದ ಅ. ೨೫ ರಂದು ಬೆಳಗ್ಗೆ ೧೦-೩೦ಕ್ಕೆ ಮೈಸೂರು ವಿವಿ ಸೆನೆಟ್ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಜಾಗೃತ ಕರ್ನಾಟಕ ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಚ್.ವಿ. ವಾಸು ಮುಖ್ಯ ಭಾಷಣ ಮಾಡುವರು, ಜಿ.ಕೆ. ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡುವರು, ಬಡಗಲಪುರ ನಾಗೇಂದ್ರ, ಸುಹೇಲ್ ಅಹ್ಮದ್, ಸವಿತಾ ಪ. ಮಲ್ಲೇಶ್, ತಾವು ಉಪಸ್ಥಿತರಿರುವುದಾಗಿ ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮೀಕ್ಷೆ ವಿರುದ್ಧ ಅಪಪ್ರಚಾರ ನಡೆದಿದೆ. ಇದು ಜಾತಿ ಸಮೀಕ್ಷೆ ಎಂದು ಹಲವರು ತಪ್ಪು ಹಾದಿಗೆಳೆಯುತ್ತಿದ್ದಾರೆ. ಇದರೊಡನೆ ಇನ್ಫೋಸಿಸ್ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ಸಹಾ ಸಮೀಕ್ಷೆ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿ ತಪ್ಪು ಸಂದೇಶ ನೀಡಿರುವುದು ಖಂಡನೀಯ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದಾಗಿ ರಾಜ್ಯದ ಜನತೆಯ ಸ್ಥಿತಿಗತಿ ತಿಳಿಯಲಿದೆ. ಹೀಗಾಗಿ ಈ ಬಗ್ಗೆ ಅರಿವು ಮೂಡಿಸಲು ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ಅಹಿAದ ಜವರಪ್ಪ, ರವಿನಂದನ್, ಯೋಗೇಶ್ ಉಪ್ಪಾರ್, ಡಾ.ಬಿ.ಡಿ. ಮೋಹನ್, ಲೋಕೇಶ್ ಮಾದಾಪುರ ಇದ್ದರು.
ನಾಳೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತ ವಿಚಾರಗೋಷ್ಠಿ

Leave a Comment
Leave a Comment