ರಾಜ್ಯಮಟ್ಟದ ಪಂಜ ಕುಸ್ತಿಗೆ ಚಾಲನೆ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು,ಸೆ.೨೭(ಜಿಎ)- ದಸರಾ ಶ್ರೀ, ದಸರಾ ಕುಮಾರಿ, ವಿಶೇಷ ಚೇತನ ಮತ್ತು ನವಚೇತನ ತಾರೆ ಕಪ್ ಪಡೆದುಕೊಳ್ಳಲು ಪಂಜ ಕುಸ್ತಿಯಲ್ಲಿ ಸ್ಪರ್ಧಾಳುಗಳು  ತೋಳ್ಬಲ ಪ್ರದರ್ಶಸಿದರು. ವಿಶೇಷ ಚೇತನರ ಪಂದ್ಯಗಳು ಎಲ್ಲರ ಗಮನ ಸೆಳೆಯಿತು.
ದಸರಾ ಮಹೋತ್ಸವದ ಕುಸ್ತಿ ಉಪಸಮಿತಿ ವತಿಯಿಂದ ಡಿ.ದೇವರಾಜ ಅರಸ್ ವಿವಿದೋದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪಂಜ ಕುಸ್ತಿಗೆ ಡಿಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಲ್.ನಾಗೇಶ್ ಅವರೊಂದಿಗೆ ಪಂಜ ಕುಸ್ತಿ ಆಡುವ ಮೂಲಕ  ರಾಜ್ಯಮಟ್ಟದ ಪಂಜ ಕುಸ್ತಿಗೆ ಚಾಲನೆ ನೀಡಿದರು.
ಬೆಂಗಳೂರು, ದಾವಣಗೆರೆ, ಮೈಸೂರು, ಚಿಕ್ಕಮಗಳೂರು, ಹಾಸನ, ಬೆಳಗಾವಿ, ಧಾರವಾಡ, ಗುಲ್ಬರ್ಗ, ರಾಯಚೂರು, ವಿಜಯಪುರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ೩೦೦ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.  ತೂಕಕ್ಕೆ ಅನುಗುಣವಾಗಿ ಪುರುಷರ ೧೧ ತಂಡ, ಮಹಿಳೆಯರ ೮ ತಂಡ, ವಿಶೇಷ ಚೇತನರ ಪುರುಷ ೪ ತಂಡ, ಮಹಿಳೆ ೪ ತಂಡ ಮಾಡಲಾಗಿತ್ತು.

Share This Article
Leave a Comment