ವಿವಿಧ ಕ್ಷೇತ್ರದ ಸಾಧಕರಿಗೆ ರಾಜೇಂದ್ರ ಶ್ರೀ ಪ್ರಶಸ್ತಿ ಪ್ರದಾನ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ವಿವಿಧ ಕ್ಷೇತ್ರದ ಸಾಧಕರಿಗೆ ಮೈಸೂರು ಶರಣ ಮಂಡಲಿಯ ವತಿಯಿಂದ ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಸಮಾಜ ಸೇವಕ ಮಹೇಶ ಶೆಣೈ, ಹಿರಿಯ ಪತ್ರಕರ್ತ ಎಂ.ಟಿ.ಯೋಗೇಶ್ ಕುಮಾರ್, ಕೈಗಾರಿಕೋದ್ಯಮಿ ಆರ್.ವೀರೇಶ್ ಅವರಿಗೆ ಹಾರ-ಶಾಲು, ಮೈಸೂರು ಪೇಟೆ ತೊಡಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಮೈಸೂರು ಶರಣ ಮಂಡಲಿಯೂ ಸಮಾಜದ ಏಳಿಗೆಗಾಗಿ ತಮ್ಮ ಕ್ಷೇತ್ರದಲ್ಲಿ ಶ್ರಮಿಸುತ್ತಿರುವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರು. ರಾಜೇಂದ್ರ ಶ್ರೀ ಸೇವಾ ಪ್ರಶಸ್ತಿ ಭಾಜನರಾದ ವಿವಿಧ ಕ್ಷೇತ್ರದ ಸಾಧಕರಿಗೆ ಶುಭಾ ಕೋರಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ, ಶರಣ ಮಂಡಲಿ ಅಧ್ಯಕ್ಷ ಮುಗೂರು ನಂಜುಂಡಸ್ವಾಮಿ ವೇದಿಕೆಯಲ್ಲಿ ಹಾಜರಿದ್ದರು. ಗುರುಸ್ವಾಮಿ ಪ್ರಾರ್ಥಿಸಿದಿರು.

Share This Article
Leave a Comment