ಪಬ್ಲಿಕ್ ಅಲರ್ಟ್
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಸಡಗರದಲ್ಲಿದ್ದ ಸಂಧರ್ಭದಲ್ಲಿ ಹಕ್ಕಿಪಿಕ್ಕಿ ಜನಾಂಗದ ಒಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆಯುತ್ತದೆ. ಅದು ಸಿಎಂ ಸಿದ್ದರಾಮಯ್ಯರವರ ಸ್ವಂತ ಊರಿನಲ್ಲಿ ಸೌಜನ್ಯಕ್ಕಾದರೂ ಸಂತ್ರಸ್ತರ ಭೇಟಿ ಮಾಡಿಲ್ಲ. ಇನ್ನೂ ಸೂಕ್ತ ಪರಿಹಾರ ಕೊಟ್ಟಿಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ದಿನದಿಂದ ದಿನಕ್ಕೆ ಕೊಲೆ ಸುಲಿಗೆ, ಅಕ್ರಮ ಚಟುವಟಿಕೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊದಿಗೆರೆ ಕಿಡಿಕಾರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರಕಾರದ ಜವಾಬ್ದಾರಿ. ಅದನ್ನೂ ಕೇಂದ್ರ ಸರ್ಕಾರವೇ ಬಂದು ಮಾಡಬೇಕಿಲ್ಲ. ರಾಜ್ಯ ಸರ್ಕಾರವನ್ನ ಪ್ರತಿ ಹೆಜ್ಜೆ ಹೆಜ್ಜೆಗೂ ಎಚ್ಚರಿಸುವ ಕೆಲಸವನ್ನು ವಿರೋಧ ಪಕ್ಷ ಮಾಡುತ್ತಿದೆ.ಅತ್ಯಾಚಾರ ಪ್ರಕರಣ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತು ಆಡಿಲ್ಲ. ಅಹಿಂದ ನಾಯಕರು ಅನ್ನುವವರು ಯಾಕೆ ಏನು ಮಾತನಾಡುತ್ತಿಲ್ಲ. ಕಲಬುರಗಿಯಲ್ಲಿ ಆ ಕುಟುಂಬ ದವರನ್ನು ಪ್ರಿಯಾಂಕಾ ಖರ್ಗೆ ಭೇಟಿ ಆಗಬಹುದಿತ್ತು. ಸೌಜನ್ಯಕ್ಕಾದರೂ ಸಾಂತ್ವನ ಹೇಳಿಲ್ಲ. ನೇಹ ಹಿರೇಮಠ್ ಕೇಸ್ ನಲ್ಲಿ ನಮಗೆ ತೊಂದರೆ ಇದೆ ಅಂತ ಹೇಳಿದರು ಕ್ರಮ ತೆಗೆದುಕೊಳ್ಳಲಿಲ್ಲ. ಧರ್ಮಸ್ಥಳ ಕೇಸ್ ಕಾಲ್ಪನಿಕ ಆಗಿದ್ದು, ಅದಕ್ಕೆ ಕಾಳಜಿ ಕೊಟ್ಟಷ್ಟು ಕಣ್ಣ ಮುಂದೇ ಆದ ಈ ಘಟನೆಗೆ ಯಾಕೆ ಆಸಕ್ತಿ ತೋರಿಸುತ್ತಿಲ್ಲ?, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಎಲ್ಲಿದ್ದಾರೆ? ಬರೀ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಪ್ರಚಾರ ಪಡೆಯುವುದು, ಕಾಂಗ್ರೆಸ್ ಪಕ್ಷದ ಏಜೆಂಟ್ ರೀತಿ ವರ್ತಿಸುವುದಾ ನಿಮ್ಮ ಜವಾಬ್ದಾರಿ? ಒಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಕೊಲೆ ನಡೆದಿದ್ದರೂ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ನೀವು ನಿಮ್ಮ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಕೂಡಲೇ ನಾಗಲಕ್ಷ್ಮಿ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ನೀವೂ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ. ಅದೇ ಬಾಲಕಿ ಪ್ರಬಲ ಸಮುದಾಯದಲ್ಲಿ ಹುಟ್ಟಿದ್ದರೆ ಸುಮ್ಮನಿರುತ್ತಿದ್ರಾ.? ಅತ್ಯಾಚಾರ ಮಾಡಿ ಕೊಲೆಗೈದ ವ್ಯಕ್ತಿ ರಿಪೀಟ್ ಅಫೆಂಡರ್ ಆಗಿದ್ದಾನೆ. ಅವನ ಮೇಲೆ ಪೊಲೀಸ್ ಇಲಾಖೆ ಕಣ್ಣು ಇಡಬೇಕಲ್ವಾ.? ಕರ್ನಾಟಕದಲ್ಲಿ ಏನಾದರು ಆದರೆ ಮೊದಲು ವಿರೋಧ ಪಕ್ಷ ಸ್ಪಂದಿಸುತ್ತಿದೆ.ಸರಕಾರ ಸ್ಪಂದಿಸುತ್ತಿಲ್ಲ.ಸರ್ಕಾರ ಗ್ಯಾರಂಟಿ ಭಾಗ್ಯಗಳ ಜೊತೆ ಅತ್ಯಾಚಾರ ಭಾಗ್ಯ ದೌರ್ಜನ್ಯ ಭಾಗ್ಯ ನೀಡುತ್ತಿದೆ.ಸರ್ಕಾರ ಮುಂದಾದರು ಇಂತ ಘಟನೆಗಳು ನಡೆಯಂತೆ ಎಚ್ಚರಿಕೆ ವಹಿಸಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ನಾವು ಈಗಾಗಲೇ ಘಟನೆ ಕುರಿ ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ದೇವೆ. ಅದಕ್ಕೆ ಸೂಕ್ತ ಪ್ರತಿಕ್ರಿಯೆ ಏನೂ ಬಂದಿಲ್ಲ. ಅದಕ್ಕೆ ಈಗ ನಾವು ಕೇಂದ್ರ ಮಹಿಳಾ ಆಯೋಗಕ್ಕೂ ಅರ್ಜಿ ಸಲ್ಲಿಸಿದ್ದೇವೆಂದರು. ಸುದ್ದಿಗೋಷ್ಟಿಯಲ್ಲಿ ನಗರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಣುಕಾರಾಜ್, ಮಹೇಶ್ ರಾಜೇ ಅರಸ್, ಕಾರ್ತೀಕ್ ಮರಿಯಪ್ಪ ಮತ್ತಿತರರು ಹಾಜರಿದ್ದರು.
