ಪಬ್ಲಿಕ್ ಅಲರ್ಟ್
ಮೈಸೂರು: ಕೆ ಆರ್ ಮೊಹಲ್ಲಾದಲ್ಲಿರುವ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸಂಘದ ನವೀಕೃತ ಕಟ್ಟಡಕ್ಕೆ ಭೇಟಿನೀಡಿ ಮಾತನಾಡಿದ ಅವರು, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನವಿಕೃತ ಕಟ್ಟಡಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಮ್ಮ ತಂದೆಯವರಾದ ಆರ್.ಗುಂಡುರಾಯರ ಅಚ್ಚುಮೆಚ್ಚಿನ ಪ್ರೀತಿಪಾತ್ರವಾದ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘ, ಮೈಸೂರಿನಲ್ಲಿ 1924ರಲ್ಲೆ ನಿರ್ಮಾಣ ಮಾಡಿದ್ದ ವಿದ್ಯಾರ್ಥಿ ನಿಲಯವು ಶತಮಾನೋತ್ಸವ ಕಂಡಿದೆ. ನಮ್ಮ ತಂದೆಯವರು ಸಹ ಭೇಟಿ ನೀಡುತ್ತಿದ್ದರು. ಹಾಗೆಯೆ ನಾನು ಸಹ ತಂದೆ ತಾಯಿಯಿಂದ ರೂಡಿಸಿಕೊಂಡ ಸೇವಾಮನೋಭಾವದ ದೃಷ್ಟೀಯಿಂದ ಸದಾಕಾಲಕ್ಕೂ ಸಂಘದ ಚಟುವಟಿಕೆಗಾಗಿ ಸಹಕಾರ ನೀಡುತ್ತೇನೆ. ಮೈಸೂರಿನಲ್ಲಿ ನಮ್ಮ ವಿಪ್ರ ಸಮಾಜದ ನಾಯಕರಾಗಿರುವ ಮೂಡ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್ ಸಹ ವಿಪ್ರ ಸಮುದಾಯದ ಹಲಾವರು ಸಂಘ ಸಂಸ್ಥೆಗಳಿಗೆ ಸಹಕಾರವನ್ನ ಕೊಟ್ಟಿದ್ದಾರೆ ಅದರಂತೆಯೇ ಸಂಘದ ನವೀಕೃತ ಕಟ್ಟಡದ ಲೋಕಾರ್ಪಣೆ ನೇತೃತ್ವ ವಹಿಸಬೇಕೆಂದು ತಿಳಿಸಿದರು.
ನಂತರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ ನಮ್ಮ ಸಮಾಜದ ಧೀಮಂತ ನಾಯಕರು ಕರ್ನಾಟಕ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನ ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಗುಂಡೂರಾಯರು ಹಲವಾರು ವಿಪ್ರ ನಾಯಕರನ್ನ ರಾಜೀಕೀಯವಾಗಿ ಮುಖ್ಯವಾಹಿನಿಗೆ ಬರಲು ಬೆನ್ನುಲುಬಾಗಿ ನಿಂತು ಪ್ರೇರಣೆಯಾದರು. ಅವರಂತೆ ಅವರ ಸುಪುತ್ರರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ಸಮುದಾಯದ ಯಾವುದೇ ಸಮಸ್ಯೆಗಳಿದ್ದರೂ ಸ್ಪಂದಿಸುವ ನಾಯಕರಾಗಿದ್ದಾರೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಾಹಾಸಭಾ ಸಂಘಟನಾತ್ಮಕವಾಗಿ ರಾಜ್ಯದಲ್ಲಿ ಬಲಿಷ್ಠವಾಗಲೂ ಗುಂಡೂರಾಯರ ಕುಟುಂಬ ಪ್ರಮುಖವಾದುದು, ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ನವೀಕೃತ ಕಟ್ಟಡಕ್ಕೆ ಗುಂಡೂರಾಯರು ಮತ್ತು ವರಲಕ್ಷ್ಮಿ ಗುಂಡೂರಾಯರ ಹೆಸರನ್ನ ನಾಮಕರಣ ಮುಂದಾಗಿರುವ ಸಂಘದ ಪದಾಧಿಕಾರಿಗಳಿಗೆ ಕಾರ್ಯ ಸ್ವಾಗತಾರ್ಹ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಜಿ ಎಸ್.ಎಲ್. ನಾಗರಾಜ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿನಯ್ ಕಣಗಾಲ್ ಇನ್ನಿತರರು ಹಾಜರಿದ್ದರು.
ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘಕ್ಕೆ ದಿನೇಶ್ ಗುಂಡೂರಾವ್ ಬೇಟಿ
Leave a Comment
Leave a Comment
