ಪಬ್ಲಿಕ್ ಅಲರ್ಟ್
ಮೈಸೂರು: ನಗರದ ಸ್ಕೌಟ್ಸ್ ಅಂಡ್ ಗ್ಲೈಡ್ಸ್ ಮೈದಾನದಲ್ಲಿ ಎರಡನೇ ದಿನದ ಮಹಿಳಾ ದರ್ಬಾರ್ ನಲ್ಲಿ ಎಲ್ಲರನ್ನೂ ರಂಜಿಸುವ ಮೂಲಕ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡಿತು.
ಹೌದು ಒಮ್ಮೆಲೆ ಸೀರೆಯುಟ್ಟ ನಾರಿಯರು ತಾವು ಯಾರಿಗೇನೂ ಕಮ್ಮಿ ಇಲ್ಲವೆಂಬಂತೆ ವಾಕ್ ಮಾಡಿ ಫ್ಯಾಶನ್ ಶೋ ನಡೆಸಿಕೊಟ್ಟರು. ಇದರಲ್ಲಿ ೧೨ಮಂದಿಯ ತಂಡ ಪಾಲ್ಗೊಂಡಿತ್ತು. ಅಲ್ಲದೆ ರಾಗಿ ಬೀಸುವುದು, ಹಗ್ಗ ಜಗ್ಗಾಟ, ಜಾನಪದ ನೃತ್ಯಗಳನ್ನು ೫೦ಕ್ಕೂ ಹೆಚ್ಚು ಮಂದಿಯ ತಂಡ ಆಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಇದೇ ವೇಳೆ ಸ್ಪರ್ಧಾ ವಿಜೇತರು ಬಹುಮಾನ ಪಡೆದು ಗೆದ್ದರೆ, ಪಾಲ್ಗೊಂಡ ನಾರಿಯರು ಬಾಗವಹಿಸಿ ಸಂತಸ ಪಟ್ಟರು.


ಇದೇ ವೇಳೆ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಅವರು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಅಧ್ಯಕ್ಷೆ ಮಲ್ಲಿಗೆ ವಿರೇಶ್ ಅವರ ಜತೆಗೂಡಿ ವೇದಿಕೆ ಮೇಲೆ ನಡಿಗೆಯ ಹೆಜ್ಜೆ ಹಾಕಿ ಎಲ್ಲರನ್ನೂ ಹುರಿದುಂಬಿಸಿದರು.
