ಬೆಳೆ ಪರಿಹಾರಕ್ಕೆ ಆಗ್ರಹಿಸಿ ಅ.೨೪ಕ್ಕೆ ರಾಜ್ಯಾದ್ಯಂತ ಹೋರಾಟ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮಳೆಹಾನಿ ಬೆಳೆ ನಷ್ಟ ಪರಿಹಾರ ಎನ್.ಡಿ.ಆರ್ ಎಫ್ ಪರಿಹಾರ ಮಾನದಂಡ ಹೆಚ್ಚಳ ಮಾಡವಂತೆ ಒತ್ತಾಯಿಸಿ ಅ.24ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ  ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಲಾಗುವುದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು. 
ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳೆ ಹಾನಿ ಪ್ರವಾಹ ಹಾನಿ ಪ್ರಕೃತಿ ವಿಕೋಪ ಬೆಳೆ ನಷ್ಟದ ಪರಿಹಾರ ಎನ್.ಡಿ.ಆರ್.ಎಫ್ ಮಾನದಂಡ ಕಳೆದ ಎಂಟು ವರ್ಷಗಳಿಂದ  ವೈಜ್ಞಾನಿಕವಾಗಿ ಪುನರ್ ಪರಿಶೀಲನೆ ಆಗಿಲ್ಲ. ಕೂಡಲೇ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಲಿ ಕಲ್ಯಾಣ ಕರ್ನಾಟಕ ಉತ್ತರ ಕರ್ನಾಟಕದ ರೈತರ ಬೆಳೆ ನಷ್ಟಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಬ್ಬು ಬೆಳೆಯಲು ಒಂದು ಟನ್ ಗೆ 3700 ವೆಚ್ಚವಾಗುತ್ತದೆ ಎಂದು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ಕೊಟ್ಟಿದೆ. ಇದನ್ನು ಅರಿತು ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಬೇಕೆಂದರು.
ವಿಶ್ವ ರೈತ ದಿನಾಚರಣೆಯನ್ನು ಡಿ.23ರಂದು ಈ ಬಾರಿ ಗುಲ್ಬರ್ಗದಲ್ಲಿ ರಾಜ್ಯ ಮಟ್ಟದ ರೈತ ಸಮಾವೇಶ ನಡೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು. ಈ ಸಮಾವೇಶದಲ್ಲಿ 10ಜನ ರೈತರಿಗೆ ಕೃಷಿ ಸಾಧಕ ಎಂದು ಗುರುತಿಸಿ ಐ.ಎ.ಎಸ್ ಪದವಿ ನೀಡಿ ಪುರಸ್ಕರಿಸಲಾಗುವುದು. ಭತ್ತದ ಕನಿಷ್ಠ ಬೆಂಬಲ ಬೆಲೆ 2369ರೂ.ಗೆ  ನಿಗದಿ ಮಾಡಲಾಗಿ ಇದು ಅವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರ  ಇದಕ್ಕೆ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಾಲ್ ಗೆ 500 ರೂ. ಪ್ರೋತ್ಸಾಹ ಧನ ನೀಡಬೇಕು. ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ಹಸಿರು ಸೇನೆ ರಾಜ್ಯ ಅಧ್ಯಕ್ಷ ಕರಬಸಪ್ಪಗೌಡ, ಮಹೇಶ್ ಬೆಳಗಾಂವ್ಕರ್. ಬಸವರಾಜ್ ಪಾಟೀಲ್. ಅತ್ತಹಳ್ಳಿ ದೇವರಾಜ್. ರಮೇಶ್ ಉಗಾರ್. ಪರಶುರಾಮ್ ಎತ್ತಿನಗುಡ್ಡ, ಎಸ್‌.ಪಿ.ಸಿದ್ನಾಳ್, ತುಮಕೂರು ಶಿವಕುಮಾರ್, ಶ್ರೀನಿವಾಸಗೌಡ , ಬೈರಾರೆಡ್ಡಿ, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಉಡಿಗಾಲ ರೇವಣ್ಣ, ಉಳುವಪ್ಪ ಬೆಳಗೇರಿ ಇನ್ನೂ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment