100 ರೂ ಕೆಜಿ ಚಿಕನ್ ಮುಗಿಬಿದ್ದ ಮೈಸೂರಿಗರು…!

Chethan
1 Min Read

ಮೈಸೂರು: ಸಂಡೇ ಬಂದ್ರೇ ಬಾಡೇ ನಮ್ ಗಾಡು ಅನ್ನೋ ಮಂದಿಯೇ ಹೆಚ್ಚು ಅದರಲ್ಲಿ ಆಫರ್ ಕೊಟ್ರೇ ಕೇಳಬೇಕಾ, ಅದರಲ್ಲೂ ಕೇವಲ 100 ರೂ.ಗೆ ಕೆಜಿ ಚಿಕನ್ ವಿಷಯ ತಿಳಿಯುತ್ತಿದ್ದಂತೆ ಚಿಕನ್ ಕೊಳ್ಳಲು ಮೈಸೂರಿಗರು ಮುಗಿಬಿದ್ದ ವಿಶೇಷವೇ ಈ ವಾರದ ಸಂಡೇ ಸ್ಪೆಷಲ್ ಆಗಿದೆ.
ಹೌದು ಹಳೆ ಮೈಸೂರು ಭಾಗದಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ಭಾನುವಾರ ಅಂದ್ರೆ ಬಾಡೂಟ ಅನ್ನೋದು ಸಹಜವಾಗಿದೆ. ಇಂತಹ ವೇಳೆ ನಗರದ ಉದಯಗಿರಿಯ ಶೈನ್ ಷಾ ಅವರು ತಮ್ಮ ಮಾಂಸದಂಗಡಿಯ 7ನೇ ವಾರ್ಷಿಕೋತ್ಸವ ನೆನಪಿಗಾಗಿ ಕೆಜಿ ಚಿಕನ್ ಗೆ 100 ರೂ.ಗಳ ರಿಯಾಯಿತಿ ಮಾರಾಟ ಘೋಷಿಸಿದ್ದಾರೆ.


ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು, ಮಕ್ಕಳು ಮಹಿಳೆಯರು ಅಂಗಡಿಗೆ ಮುಗಿಬಿದ್ದು ಕೊಳ್ಳಲಾರಂಭಿಸಿದ್ದಾರೆ. ಒಟ್ಟಾರೆ ಆಫರ್ ಗಾಗಿ ಅಂಗಡಿಗೆ ಮುಗಿ ಬಿದ್ದು ಸಂತಸದಲ್ಲೇ ಕೊಳ್ಳುತ್ತಿರುವ ದೃಶ್ಯ ಕಂಡು ಬಂದಿತು‌.

ಮಟನ್ ಅಂಗಡಿ ಮಾಲೀಕ ಶೈನ್ ಷಾ
ಉದಯಗಿರಿಯಲ್ಲಿರುವ ಮಳಿಗೆಗೆ ಜನರ ಮುತ್ತಿಗೆ.

Share This Article
Leave a Comment