ವಿಘ್ನ ವಿನಾಶಕ ಗಣೇಶ ನಮ್ಮೆಲ್ಲರ ಕಷ್ಟಗಳನ್ನು ಪರಿಹರಿಸಲಿ: ಶಾಸಕ ನಾರಾ ಭರತ್ ರೆಡ್ಡಿ

Chethan
1 Min Read

ಪಬ್ಲಿಕ್ ಅಲರ್ಟ್

ಬಳ್ಳಾರಿ: ವಿಘ್ನ ವಿನಾಶಕ ಗಣೇಶ ನಮ್ಮೆಲ್ಲರ ಕಷ್ಟ ಕೋಟಲೆಗಳನ್ನು ನಿವಾರಿಸಲಿ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ 13ನೇ ವಾರ್ಡ್ ವ್ಯಾಪ್ತಿಯ ಮಿಲ್ಲರ್ ಪೇಟೆಯ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.

ದೇವರ ಕೃಪೆಯಿಂದ ಈ ಸಲ ಮಳೆ ಚೆನ್ನಾಗಿ ಸುರಿದಿದ್ದು, ತುಂಗಭದ್ರಾ ಜಲಾಶಯದಲ್ಲೂ ಕೂಡ ಸಾಕಷ್ಟು ನೀರಿದ್ದು, ಕೃಷಿ – ಜನ ಜಾನುವಾರುಗಳಿಗೆ ಅನುಕೂಲ ಆಗಿದೆ ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಮಿಲ್ಲರ್ ಪೇಟೆಯ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿರುವೆ, ವಿಘ್ನ ವಿನಾಶಕ ಗಣೇಶ ನಮ್ಮೆಲ್ಲರನ್ನೂ ಕಾಪಾಡಲಿ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ವಾರ್ಡಿನ ಸದಸ್ಯ, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಸಿ.ಇಬ್ರಾಹಿಂ (ಬಾಬು) ಮಾತನಾಡಿ; ಪ್ರತಿ ವರ್ಷದಂತೆ ಈ ವರ್ಷವೂ ಶಾಸಕ ನಾರಾ ಭರತ್ ರೆಡ್ಡಿಯವರು ನಮ್ಮ ವಾರ್ಡಿನ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು, ವಾರ್ಡಿನ ಜನರ ಪರವಾಗಿ ಸನ್ಮಾನಿಸಿ, ನಮ್ಮ ವಾರ್ಡಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇವೆ ಎಂದರು.

ಪಾಲಿಕೆಯ ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯರಾದ ಎಂ.ಪ್ರಭಂಜನಕುಮಾರ್, ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಬಿಆರೆಲ್ ಸೀನಾ, ಬುಡಾ ಸದಸ್ಯ ಥಿಯೇಟರ್ ಶಿವು, ರಘು, ಶಿವು, ರಾಮು, ರಸೂಲ್ ಮೊದಲಾದವರು ಹಾಜರಿದ್ದರು.

Share This Article
Leave a Comment