ಪಬ್ಲಿಕ್ ಅಲರ್ಟ್
ಮೈಸೂರು: ಚಾಮರಾಜ ಕ್ಷೇತ್ರದಲ್ಲಿ 415 ಲಕ್ಷಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್ ಗೌಡ ಗುದ್ದಲಿ ಪೂಜೆ ನೇರವೇರಿಸಿದರು.
ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ 5ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೆ.ಹರೀಶ್‌ಗೌಡ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಗುದ್ದಲಿಪೂಜೆ ನೆರವೇರಿಸಿದರು. ವಾರ್ಡ್ ನಂ.2ರ ಮಂಚೇಗೌಡನಕೊಪ್ಪಲು ಗಣಪತಿ ದೇವಸ್ಥಾನದ ರಸ್ತೆ, ಸಂಗಮ ವೃತ್ತದ ಉದ್ಯಾನವನದ ಪಕ್ಕದ ರಸ್ತೆ ಅಭಿವೃದ್ಧಿ, ಹೆಬ್ಬಾಳಿನ ಯಲ್ಲಮ್ಮ ದೇವಸ್ಥಾನದ ಮುಂಭಾಗ, ಅಡ್ಡ ರಸ್ತೆಗಳ ಕಾಂಕ್ರೀಟ್ ರಸ್ತೆ, ದೊಡ್ಡ ಮಳೆನೀರು ಚರಂಡಿ ಅಭಿವೃದ್ಧಿ ಕಾಮಗಾರಿಯ ಅಂದಾಜು ಮೊತ್ತ 198.98 ಲಕ್ಷ ಆಗಿದ್ದು, ವಾರ್ಡ್ ನಂ.20ರ ವಿಜಯನಗರದ ಜನರಲ್ ತಿಮ್ಮಯ್ಯ ರಸ್ತೆಯಿಂದ 20ನೇ ಮುಖ್ಯರಸ್ತೆವರೆಗೆ ದೊಡ್ಡ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿಗೆ 20ನೇ ಮುಖ್ಯ ರಸ್ತೆ, ವಿಜಯನಗರ ಪೊಲೀಸ್ ಸ್ಟೇಷನ್ ಹತ್ತಿರ ೧೮೦ಲಕ್ಷ ಮೊತ್ತದ ಕಾಮಗಾರಿಗೂ ಚಾಲನೆ ನೀಡಿದರು.
ನಗರ, ಕಸಬಾ ಹೋಬಳಿ, ಹೆಬ್ಬಾಳು ಸರ್ವೆ ನಂ.272ರಲ್ಲಿರುವ ಪ್ರಾಧಿಕಾರದ ಖಾಲಿ ಜಾಗದ ಸುತ್ತ ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಸುವ ೩೫.೬೧ಲಕ್ಷ ರೂ ಕಾಮಗಾರಿಗೂ ಇದೇ ವೇಳೆ ಚಾಲನೆ ನೀಡಿದರು. ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ವಾರ್ಡ್ ಅಧ್ಯಕ್ಷ ಶ್ರೀಧರ್, ಮಾಜಿ ಉಪಮಹಾಪೌರ ಮಹದೇವಪ್ಪ, ಮುಖಂಡರಾದ ಡೆಲ್ಲಿ ರವಿ, ಕೇಬಲ್ ಪುಟ್ಟರಾಜು, ಲೋಕೇಶ್, ಡಿ.ರಾಮಚಂದ್ರು, ಪಟೇಲ್ ಸೋಮಣ್ಣ, ರಾಮಚಂದ್ರು ಪುಟ್ಟಸ್ವಾಮಿ, ಟಿವಿಎಸ್ ರಮೇಶ್, ಕಾಂತರಾಜು, ಲಾರಿ ಕುಮಾರ್, ವಾರ್ಡ್ 20ರ ನಗರಪಾಲಿಕೆ ಮಾಜಿ ಸದಸ್ಯ ಸುಬ್ಬಯ್ಯ, ಮುಖಂಡರಾದ ಗೋಪಾಲಸ್ವಾಮಿ, ವಾರ್ಡ್ ಅಧ್ಯಕ್ಷ ಸಂತೋಷ್, ಅರವಿಂದ್, ದಿಲೀಪ್, ಪ್ರಶಾಂತ್, ಪಾಲಾಕ್ಷ, ಜಾಕೋಬ್, ಶೇಖರ್, ಪಾಲಿಕೆ ಅಧಿಕಾರಿಗಳಾದ ಹಿತೇಂದ್ರ, ಅಶ್ವಿನಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.