ಪಬ್ಲಿಕ್ ಅಲರ್ಟ್
ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ವಿಧಾನ ಪರಿಷತ್ತ ಸದಸ್ಯ ಸಿ.ಎನ್.ಮಂಜೇಗೌಡ ಮಾಡುವ ಮೂಲಕ ನೇರವೇರಿಸಿದರು.
ಬಳಿಕ ಮಾತನಾಡಿ, ನಮ್ಮ ನಾಡು, ದೇಶ ಕಂಡಂತಹ ಮಹಾನ್ ಇಂಜಿನಿಯರ್, ಸರಳ ವ್ಯಕ್ತಿತ್ವದ ವ್ಯಕ್ತಿ, ತಮ್ಮ ಬುದ್ದಿವಂತಿಕೆ ಹಾಗೂ ಕೆಲಸದಿಂದಲೇ ವಿಶ್ವ ವಿಖ್ಯಾತರಾದವರು. ಅದರಲ್ಲೂ ವಿಶೇಷವಾಗಿ ಬ್ರಿಟೀಷರಿಂದ ಸರ್ ಎಂಬ ಬಿರುದನ್ನು ಪಡೆದವರು. ಮುಂಬೈನಲ್ಲಿ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿದ್ದ ವಿಶ್ವೇಶ್ವರಯ್ಯನವರನ್ನು ಮೈಸೂರಿಗೆ ಕರೆಯಿಸಿಕೊಂಡ ನಾಲ್ವಡಿರವರು ಕನ್ನಂಬಾಡಿ ಕಟ್ಟೆಯ ಉಸ್ತುವಾರಿ ನೀಡಿ, ಕಟ್ಟೆಯನ್ನು ಅದ್ಬುತವಾಗಿ ನಿರ್ಮಾಣ ಮಾಡಿದರು ಎಂದು ಹೇಳಿದರು.
ನಂತರ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಾಲದಲ್ಲಿ ಇಂಜಿನೀಯರ್ ಆಗಿ ಬಂದಂತಹ ವಿಶ್ವೇಶ್ವರಯ್ಯರವರು ಕನ್ನಂಬಾಡಿ ಕಟ್ಟೆ ಸೇರಿದಂತೆ ಹಲವಾರು ಅಣೆಕಟ್ಟುಗಳ ಹಾಗೂ ರಸ್ತೆಗಳ ನಿರ್ಮಾಣಕ್ಕೆ ಕಾರಣರಾದರು. ಮಹಾರಾಜರ ಸಹಕಾರದಿಂದ ಅನೇಕ ಕೈಗಾರಿಕೆಗಳು, ವಿದ್ಯುಚ್ಛಕ್ತಿ ಸ್ಥಾವರ,ಮೈಸೂರು ಬ್ಯಾಂಕ್ ಸೇರಿದಂತೆ ಹಲವಾರು ಸ್ಥಾಪಿಸಿದರು. ಇಂತಹ ಮಹನೀಯರ ದಿನಾಚರಣೆಯನ್ನು ಮುಂದಿನ ವರ್ಷದಿಂದ ಸರ್ಕಾರ ಜಿಲ್ಲಾಡಳಿತದವತಿಯಿಂದ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಎಪಿಎನ್ ಪ್ರಾಪರ್ಟಿಸ್ ನ ಎ.ಪಿ.ನಾಗೇಶ್ ಸಿಹಿ ವಿತರಿಸಿದರು. ರಾಜ್ಯ ಒಕ್ಕಲಿಗರ ಸಂಘದ ಕಾಮಗಾರಿ ಅಧ್ಯಕ್ಷ ಸಿ.ಜಿ.ಗಂಗಾಧರ್, ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್, ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಶಿವಲಿಂಗಯ್ಯ, ನೇಹಾ, ಪದ್ಮ, ಪ್ರಜೀಶ್, ಮನು ನಾಯಕ್, ವರಕೂಡು ಕೃಷ್ಣೇಗೌಡ, ಹನುಮಂತಯ್ಯ, ಮಂಜುಳ, ಸುಶೀಲ, ತಾಯೂರ್ ಗಣೇಶ್, ಪ್ರಭಾಕರ್, ತ್ಯಾಗರಾಜ್, ರಾಮಕೃಷ್ಣೇಗೌಡ, ಜ್ಯೋತಿ, ಕುಮಾರ್ ಗೌಡ, ನಂದಕುಮಾರ್, ರಘು ಅರಸ್, ಅಶೋಕ್ ಹನುಮಂತೇಗೌಡ, ಆನಂದ್ ಗೌಡ, ದರ್ಶನ್ ಗೌಡ, ಗಣೇಶ್ ಪ್ರಸಾದ್ ಇನ್ನೂ ಇತರರು ಉಪಸ್ಥಿತರಿದ್ದರು.
