ಇಂದಿನಿಂದ ಜೆಮಿನಿ ಸರ್ಕಸ್‌ ಪ್ರಾರಂಭ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಈ ಬಾರಿಯ ದಸರಾ ಹಿನ್ನೆಲೆಯಲ್ಲಿ ನಗರದ ಮೃಗಾಲಯ ಸಮೀಪದ ಮೈದಾನದಲ್ಲಿ ಜೆಮಿನಿ ಸರ್ಕಸ್ ಪ್ರದರ್ಶನ ಸೆ. ೨೦ ರಂದು ಸಂಜೆ ೬.೩೦ಕ್ಕೆ ಚಾಲನೆ ಪಡೆಯಲಿದ್ದು, ರಾಜವಂಶಸ್ಥರಾದ ಡಾ. ಪ್ರಮೋದಾದೇವಿ ಒಡೆಯರ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಇದು ಸುಮಾರು ೪೦ ದಿನ ನಡೆಯಲಿದೆ ಎಂದು ಸರ್ಕಸ್ ವ್ಯವಸ್ಥಾಪಕ ಸುರೇಶ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ್‌ಸೇಠ್, ಟಿ.ಎಸ್. ಶ್ರೀವತ್ಸ ಹಾಜರಿರುವರು. ಪ್ರಾಣಿ ದಯಾ ಸಂಘದವರ ಕಾರಣದಿಂದಾಗಿ ಸರ್ಕಸ್‌ಗಳಲ್ಲಿ ಪ್ರಾಣಿಗಳನ್ನು ಬಳಸುವಂತಿಲ್ಲ. ಹೀಗಾಗಿ ದೇಶದಲ್ಲಿ ಕೇವಲ ೩ ಸರ್ಕಸ್ ಇವೆ. ಇವುಗಳಲ್ಲಿ ಜೆಮಿನಿ ಸರ್ಕಸ್ ಪ್ರಮುಖವಾದುದಾಗಿದೆ. ನಗರದಲ್ಲಿ ಮಧ್ಯಾಹ್ನ ೧, ಸಂಜೆ ೪, ರಾತ್ರಿ ೭ಕ್ಕೆ ಪ್ರದರ್ಶನಗಳು ನಡೆಯಲಿವೆ. ಟಿಕೆಟ್ ದರ ೧೫೦, ೨೫೦ ಹಾಗೂ ೩೫೦ ರೂ.ಗಳಾಗಿವೆ.  ಆಫ್ರಿಕನ್ ತಂಡದಿಂದ ಸಾಹಸ ಪ್ರದರ್ಶನ, ವಿವಿಧ ಪ್ರಾಣಿಗಳ ರೋಬಾಟ್‌ಗಳು ಈ ಬಾರಿಯ ಪ್ರಮುಖ ಆಕರ್ಷಣೆ ಆಗಲಿವೆ. ಸರ್ಕಸ್ ನಡೆಸುವುದರಿಂದ ಆಷ್ಟೇನೂ ಲಾಭ ಈಚೆಗೆ ಬರದಿದ್ದರೂ ಅದನ್ನೇ ನಂಬಿರುವ ಸುಮಾರು ೩೦೦ ಮಂದಿಯ ಜೀವನಕ್ಕೆ ಅಡ್ಡಿಯಾಗಬಾರದೆಂಬ ಕಾರಣದಿಂದ ನಡೆಸಲಾಗುತ್ತಿದೆ ಎಂದರು. ಸರ್ಕಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್.ವಿ. ನಾಗೇಶ್, ಸಂಚಾಲಕ ಪ್ರೇಮನಾಥ್ ಹಾಜರಿದ್ದರು.

Share This Article
Leave a Comment