ಜಾತಿ ಸಮೀಕ್ಷೆಯಲ್ಲಿ ಶಿವಾರ್ಚಕ ನಮೂದಿಸಿ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು:ಈ ಬಾರಿಯ ಸಾಮಾಜಿಕ, ಶೈಕ್ಷಣಿಕ  ಸಮೀಕ್ಷೆ ವೇಳೆ ಶಿವಾರ್ಚಕ ಸಮುದಾಯದವರು  ಜಾತಿ ಕಾಲಂನಲ್ಲಿ ಶಿವಾರ್ಚಕ, ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು. ಆದರೆ ಉಪ ಜಾತಿ ಕಾಲಂನಲ್ಲಿ ಏನನ್ನೂ ನಮೂದಿಸಬಾರದು ಎಂದು ಕರ್ನಾಟಕ ರಾಜ್ಯ ಶಿವಾರ್ಚಕರ ಸಂಘ ಮನವಿ ಮಾಡಿದೆ.
ಈ ಕುರಿತು ನಗರದಲ್ಲಿ ಗೌರವಾಧ್ಯಕ್ಷ ಅಂಬಳೆ ಶಿವಣ್ಣ ಸುದ್ದಿಗಾರರೊಡನೆ ಮಾತನಾಡಿ, ಶಿವಾರ್ಚಕ ಸಮುದಾಯದವರು ರಾಜ್ಯದಾದ್ಯಂತ ಹಂಚಿ ಹರಡಿ ಹೋಗಿದ್ದಾರೆ. ಈ ಹಿಂದೆ ಜಾತಿ ಗಣತಿ ವೇಳೆ ಪ್ರತ್ಯೇಕ ಕಾಲಂ ಇರಲಿಲ್ಲ. ಇದೀಗ ಪ್ರತ್ಯೇಕವಾಗಿ ಕ್ರಮ ಸಂಖ್ಯೆ ನೀಡಲಾಗಿದೆ ಎಂದರು.
ಹೀಗಾಗಿ ಶಿವಾರ್ಚಕರು ಈ ಅವಕಾಶ ಬಳಸಿಕೊಂಡು ಜಾತಿ ಕಾಲಂನಲ್ಲಿ ಕೇವಲ ಶಿವಾರ್ಚಕ,, ಧರ್ಮ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು ಎಂದು ತಿಳಿಸಿದರು.
ಇನ್ನಿತರ ಮುಖಂಡರಾದ ಬಜರಂಗಿ ಉಮೇಶ್, ರಘು ಕೀರ್ತಿ, ಬಸವಣ್ಣ ಮಲಕುಂಡಿ, ಮಹದೇವಸ್ವಾಮಿ ಭುಗತಗಳ್ಳಿ ಇದ್ದರು.

Share This Article
Leave a Comment