ಪಬ್ಲಿಕ್ ಅಲರ್ಟ್
ಚಿಕ್ಕಬಳ್ಳಾಪುರ,ಸೆ.೨೭- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿ ಸಂಘದ ಹಿರಿಯ ಸದಸ್ಯರಾದ ಸೋ.ಸು ನಾಗೇಂದ್ರನಾಥ್ ಅವರನ್ನ ಜಿಲ್ಲಾ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ನ.2 ರಂದು ಜಿಲ್ಲಾ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು, ಅದೇ ದಿನ ರಾಜ್ಯ ಸಂಘದ ಚುನಾವಣೆಯೂ ನಡಯಲಿದೆ. ಜಿಲ್ಲೆಯಲ್ಲಿ ಆಯ್ಕೆಯಾಗಬೇಕಿರುವ ಪದಾದಿಕಾರಿಗಳು ಹಾಗು ಕಾರ್ಯಕಾರಿ ಸಮಿತಿ ಸಭೆಗೆ ನಡೆಯುವ ಚುನಾವಣೆ ಪೂರ್ಣ ಪ್ರಕ್ರಿಯೆಗಳನ್ನ ಚುನಾವಣಾಧಿಕಾರಿ ನಡೆಸಬೇಕಾಗಿದೆ.
21 ದಿನಗಳ ಮೊದಲೇ ನೋಟಿಫಿಕೇಶನ್ ಮಾಡಲಿದ್ದಾರೆ ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಬೇಕಾಗಿದ್ದು ಅವರಿಗೆ ಸಂಘವು ಬೇಕಾದ ದಾಖಲೆಗಳನ್ನ ಒದಗಿಸಲಿದೆ ಚುನಾವಣಾಧಿಕಾರಿಯಾಗಿ ಸಂಘದ ಸಭೆಯಲ್ಲಿ ಸರ್ವಾನುತದಿಂದ ಆಯ್ಕೆ ಮಾಡಿರುವ ಸೋ ಸು ನಾಗೇಂದ್ರನಾಥ್ ಈಗಾಗಲೆ ಎರಡು ಮೂರು ಚುನಾವಣೆಗಳಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪಾರದರ್ಶಕ ಮತ್ತು ಪ್ರಮಾಣಿಕವಾಗಿ ಚುನಾವಣೆ ನಡೆಸಿ ಕೊಡ ಲಿದ್ದಾರೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಯರಾಮ್ ತಿಳಿಸಿದ್ದಾರೆ.
