ಕಾವ್ಯದೊಳಗೆ ಪ್ರಪಂಚವೇ ಆವರಿಸಿಕೊಂಡಿದೆ: ಡಾ.ಸಿ.ಪಿ.ಕೃಷ್ಣಕುಮಾರ್

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕಾವ್ಯ ಎಂಬುದು ಸಂಸ್ಕೃತಿಯ ಒಂದು ಅಂಗವಾಗಿದೆ. ಪ್ರೀತಿ ಸಹಾನುಭೂತಿಯೇ ಕಾವ್ಯದ ಆದಿ ಮತ್ತು ಬುನಾದಿಯಾಗಿದ್ದು, ಕಾವ್ಯದಲ್ಲಿ ಪ್ರಪಂಚವೇ ಅಡಗಿದೆ ಎಂದು ಖ್ಯಾತ ಕವಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ. ಎಂ. ಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಂಚ ಕಾವ್ಯದೌತಣ ಕವಿಗೋಷ್ಠಿಯಲ್ಲಿ ಜರುಗಿದ್ದ ಪ್ರಬುದ್ಧ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಕಾವ್ಯ ಎಂಬುದು ಅರಮನೆ. ಬೆಳಕಿನ ಬೆರಗಿನ ಅರಮನೆ ಅದಕ್ಕೆ ದಾಳಿ ಹಲವು ಅನ್ನೊಂದು, ಒಂದೊಂದು ಬಂದೂರವಾಗಿದೆ. ನಾಲ್ಕು ದಿನದ ಕವಿಗೋಷ್ಠಿಯನ್ನು ನಡೆಸಿ ಐದನೇಯ ಅಂದರೆ ಕೊನೆಯ ಕವಿಗೋಷ್ಠಿಯಾಗಿದ್ದು, ಈ ಕವಿಗೋಷ್ಠಿಯನ್ನು ಪಂಚಕೋಶ ಎಂದು ಕರೆಯಬಹುದಾಗಿದೆ ಎಂದರು.
ಕಾವ್ಯದ ಪರಿಣಿತಿಗೆ ಮುಖ್ಯವಾದದ್ದು ಕಾವ್ಯದ ಔತಣ, ಐದು ಗೋಷ್ಠಿಗಳ ಹೂರಣ, ರಸೋತ್ಪದಾನ, ಆನಂದದ ಜನನ ಇದರಲ್ಲಿ ಉದ್ದಿಷ್ಟವಾಗಿದ್ದು,  ಮಾನವತೆಯ ಸಾರ ಲಕ್ಷಣ ಈ ಕವಿಗೋಷ್ಠಿಯಲ್ಲಿ ಸಾರ್ಥಕವಾಗಿದ್ದು, ನಾವೆಲ್ಲರೂ ಮಾನವರಾಗಿದ್ದೇವೆ. ಸಂಸಾರಕ್ಕೆ ಸಂಸ್ಕಾರವನ್ನು ಹೆರೆಯುವುದು ಕಾವ್ಯದ ಧ್ಯೇಯವಾಗಿದೆ. ಕಾವ್ಯ ಆತ್ಮವನ್ನು ರಕ್ಷಿಸುವುದಿಲ್ಲ ಆದರೆ ರಕ್ಷಣೆಗೆ ಯೋಗ್ಯವಾಗಿರುತ್ತದೆ. ಭಾವದ ಮಿಗಿಲಾಗಿ ಅನುಭವವೇ ಕಾವ್ಯದ ಅಂತರಂಗವಾಗಿದ್ದು, ವೈಚಾರಿಕೆ ಅತ್ಯಗತ್ಯ ಎಂದು ತಿಳಿಸಿದರು.
ಕಾವ್ಯಕ್ಕೆ ಭಾಷೆಯೇ ಮೂಲತಃ ಬೆಳಗಾಗಿದ್ದು,  ಅದು ಕಾವ್ಯದಲ್ಲಿ ಒಂಬೆಳಗಾಗುತ್ತದೆ. ಸಮಾಜದಲ್ಲಿ ವಿಜೃಂಬಿಸುತ್ತಿರುವ ಮೌಢ್ಯ ಮಂದನೆಯನ್ನು ದೂರ ಮಾಡುತ್ತದೆ. ಕವಿತೆ  ಸಮಸ್ಯೆಯನ್ನು ಪರಿಹರಿಸುವ ತಪಸ್ಸಾಗಿದೆ. ಈ ಸಂಧರ್ಭದಲ್ಲಿ ಕುವೆಂಪು ಅವರನ್ನು ಕುರಿತು ಹಾಗೂ ಬಿ. ಎಂ ಶ್ರೀ ಅವರನ್ನು ಕುರಿತ ಕಾವ್ಯ ವಾಚನ ಮಾಡಿ ಕನ್ನಡಾಭಿಮಾನಿಗಳ ಮನಸ್ಸನ್ನು ಗೆದ್ದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಕವಿಯ ಮನಸ್ಸು ಎಲ್ಲಿ ಇರುತ್ತದೆ ಅಲ್ಲಿ ಶಾಂತಿ ನೆಲೆಕೊಂಡಿರುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡುವಲ್ಲಿ ಹಾಗೂ  ಸುಸ್ಥಿರ ಸಮಾಜವನ್ನು ನಿರ್ಮಿಸುವಲ್ಲಿ ಕವಿಗಳ ಅವಶ್ಯಕತೆ ಬಹಳ ಮುಖ್ಯ ಎಂದು ಹೇಳಿದರು.
ಇಂದಿನ ಪ್ರಪಂಚ ಕಲುಷಿತವಾಗಿ ಚಲಿಸುತ್ತಿದೆ ಎಂದು ಭಾವಿಸುತ್ತೇವೆ ಆದರೆ ಸಮಾಜ ಮಾನಸಿಕವಾಗಿ, ಭೌತಿಕವಾಗಿ , ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಷ್ಟೇ ಕಲುಷಿತ ಗೊಂಡರು ಅದನ್ನು ತಿಳಿಮಾಡಿ ಪರಿಶುದ್ಧ ಗೊಳಿಸುವವರು ಯಾರಾದರೂ ಇದ್ದಾರೆ ಎಂದರೆ ಅವರೇ ಕವಿಗಳು. ಕವಿಗಳು ಶುದ್ಧೀಕರಣದ ಯಂತ್ರ. ಕವಿಗಳು ಸಹೃದಯವನ್ನು ಹೊಂದಿರುವವರು ಎಂದರು. ನಂತರ ಕನ್ನಡ ತಾಯಿಯ ಬಗ್ಗೆ ಆಶಯಗೀತೆಯನ್ನು ನುಡಿದು ಕನ್ನಡ ಪ್ರೇಮ ಮೆರೆದರು. ಪ್ಲಾವಿಯ ಕ್ಯಾಸ್ಟಲೀನೊ ಕೊಂಕಣಿ ಭಾಷೆಯಲ್ಲಿ ಕೋಣ್  ಕೋಣಾಸ್ ಎಂಬ ಶೀರ್ಷಿಕೆಯ ಕವನ ವಾಚಿಸಿದರು.
ಪದ್ಮಿನಿ ನಾಗರಾಜ್ ಅವರು ಹಾರುವೆ ಫಿನಿಕ್ಸ್ ನಂತೆ ಎಂಬ ಶೀರ್ಷಿಕೆಯ ಕಾವ್ಯ ವಾಚಿಸಿದರು. ಕಾ.ರಾಮೇಶ್ವರಪ್ಪ ಯುಗದ ಸೂರ್ಯನೇ ಎಂಬ ಕವನವನ್ನು ವಾಚಿಸಿದಾರು. ಉಮೇಶ್ ಬಾಬು ಮಠದ್ ಅವರು ಬೇಕಾಗಿದ್ದಾರೆ ಎಂಬ ಕವನ ವಾಚಿಸಿದರು. ಮನುಷ್ಯ ಸಂಬಂಧ, ಬಾಂಧವ್ಯ ದ ಬಗ್ಗೆ ತಿಳಿಸಿದರು. ದೇವೂ ಮಾಕೊಂಡ ಅವರು ನಗುವೇ ಒಮ್ಮೆ ನಕ್ಕುಬಿಡು ಎಂಬ ಕವನವನ್ನು ವಾಚಿಸಿ ನಗು ಮನುಷ್ಯನಿಗೆ ಎಷ್ಟು ಮುಖ್ಯ ಎಂಬುದರ ಮಹತ್ವನ್ನು ತಿಳಿಸಿದರು. ಒಟ್ಟು 34 ಕವಿಗಳು ತಮ್ಮದೇ ಆದಂತಹ ಕವಗಳನ್ನು ತಮ್ಮದೇ ಆದ ಭಾಷೆಯಲ್ಲಿ ವಾಚಿಸಿ ಕನ್ನಡಿಗರ ಮನಸನ್ನು ಗೆದ್ದರು.
ಕಾರ್ಯಕ್ರಮದಲ್ಲಿ ಕವಯತ್ರಿ ಡಾ. ಮಲ್ಲಿಕಾಘಂಟೆ, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಜಿ. ಎಸ್. ಸೋಮಶೇಖರ್,  ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು  ಹಾಗೂ ನಿರ್ದೇಶಕರಾದ ಪ್ರೊ . ಎನ್
ಕೆ ಲೋಕಾಕ್ಷಿ, ಮೈಸೂರು ಮಹಾನಗರ ಪಾಲಿಕೆಯ  ವಲಯದ ಕಚೇರಿಗೆ -2 ಅಭಿವೃದ್ಧಿ ಅಧಿಕಾರಿಗಳಾದ ಚೇತನ್ ಬಾಬು ಎಂ. ಅಧಿಕಾರೇತರ ಸಮಿತಿಯ ಅಧ್ಯಕ್ಷರಾದ  ಪಾಳ್ಯ ಸುರೇಶ್, ಉಪಾಧ್ಯಕ್ಷರಾದ ಮನೋನ್ಮಣಿ  ಹಾಗೂ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌
‘ಪ್ರಬುದ್ಧ’ ಸಂದೇಶದೊಂದಿಗೆ ದಸರಾ ಕವಿಗೋಷ್ಠಿ ಸಂಪನ್ನ
ಮೈಸೂರು: ಕನ್ನಡ ನಾಡು, ನುಡಿ, ಜಲ, ಭ್ರಾತೃತ್ವ, ಅಸ್ಪಶ್ಯತೆ ಕರಾಳತೆ, ವಿಶೇಷ ಚೇತನರ ಕಾವ್ಯಗಳು, ಪ್ರಕೃತಿ ವಿಸ್ಮಯ, ಕೋಮು ದಳ್ಳುರಿ ಕೊನೆಗಾಣಿಸುವ, ಮಹಿಳಾ ತಲ್ಲಣಗಳನ್ನು ಮೇಳೈಸಿದ ಜಾನಪದ ಸೊಗಡನ್ನು ಐದು ದಿನಗಳ ಕವಿ ಹೃಯದಗಳಿಗೆ ಪಸರಿಸಿದ ದಸರಾ ಕವಿಗೋಷ್ಠಿ ಶನಿವಾರ ಸಂಪನ್ನಗೊಂಡಿತು.
ನಾಡಗೀತೆಗೆ ನೂರು ವರ್ಷ ತುಂಬಿದ ಸಂಭ್ರಮದಲ್ಲಿ … ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆದ ಕವಿಗೋಷ್ಠಿಗಳು,  ಜಾತಿ, ಧರ್ಮಗಳ ಬೇಲಿ ದಾಟಿ ಜೀವಪರವಾದ ಸಂದೇಶಗಳನ್ನು ಬಿತ್ತಿದವು.
ಕೊನೆಯ ದಿನವಾದ ಶನಿವಾರ ಪ್ರಬುದ್ಧ ಶೀರ್ಷಿಕೆಯಡಿ ನಡೆದ ಕವಿಗೋಷ್ಠಿಯು ರಾಜ್ಯ ವಿವಿಧ ಜಿಲ್ಲೆಗಳ ಕಾವ್ಯ ಪ್ರತಿಭೆಗಳ ಬಹುತ್ವದ ಪ್ರತೀಕಕ್ಕೆ ಸಾಕ್ಷಿಯಾಯಿತು. ಪ್ರಬುದ್ಧ ಮನಸ್ಸಿನ ಪಕ್ವ ಚಿಂತನೆಯ ಕವಿಗಳು ಕಟ್ಟಿದ ಕವಿತೆಗಳ ಬಹುಮುಖಿ ನೆಲೆಯ ಅನಾವರಣಗೊಂಡಿತು.
ಮಹಿಳೆಯರ ಮೇಲಿನ ಶೋಷಣೆ ವಿರುದ್ಧ, ಕೋಮು ಸೌಹಾರ್ದತೆಯ ಪ್ರಸ್ತುತತೆ, ಕನ್ನಡ ಭಾಷೆ, ದೇವರ ಅಸ್ತಿತ್ವ ಕುರಿತು ರಚಿಸಿದ್ದ ಕವಿತೆಗಳು ನೆರೆದಿದ್ದ ಯುವ ಹಾಗೂ ಕವಿ ಹೃದಯಗಳನ್ನು ಚಿಂತನೆಗೆ ಹಚ್ಚಿದವು. ಬೆಳಗಾವಿಯ ಕವಿ ಆಕ್ಬರ್ ಎ ಸನದಿ ‘ಹೂವಿನಂತೆ ಅರಳಲಿ’ ಶೀರ್ಷಿಕೆಯಡಿ ವಾಚಿಸಿದ ಕವನವು ಒಲವ ಬಿತ್ತಿ ಒಲವ ಬೆಳೆ… ಒಲವಿನಿಂದಲೇ ಜೀವನ… ಎನ್ನುತ್ತ ಮನುಷ್ಯರ ನಡುವೆ ಪ್ರೀತಿ, ಪ್ರೇಮ, ಕರುಣೆಯ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿದರು.

Share This Article
Leave a Comment