ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ಕುರಿತ ಡಿಸಿ ಮತ್ತು ಸಿಇಒ ಗಳ ಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ನೀಡಿದ ಸೂಚನೆಗಳು

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ಕುರಿತ ಡಿಸಿ ಮತ್ತು ಸಿಇಒ ಗಳ ಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ನೀಡಿದ ಸೂಚನೆಗಳು

ಟೀಮ್ ಕರ್ನಾಟಕ ಆಗಿ ಕೆಲಸ ಮಾಡಿ.

ಕೇವಲ ಪೇಪರ್‌ ವರದಿ ನೀಡಿದರೆ ನಾನು ಕೇಳುವುದಿಲ್ಲ. ನನಗೆ ಫೀಲ್ಡ್‌ ರಿಪೋರ್ಟ್‌ ಮುಖ್ಯ.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ನಿಮ್ಮ ಅನುಭವ ಮತ್ತು ಕಾರ್ಯಕ್ಷಮತೆ ತೋರಿಸಿ. ಆಡಳಿತಾತ್ಮಕವಾಗಿ ಟೀಮ್‌ ವರ್ಕ್‌ ಪ್ರದರ್ಶಿಸಿ.

*ಈಗಾಗಲೇ ಬೆಳಗಾವಿ ಮತ್ತು ಕಲ್ಬುರ್ಗಿ ವಿಭಾಗ ಮಟ್ಟದಲ್ಲಿ ಸಭೆ ನಡೆಸಿ ಸಮಗ್ರ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ನಾನು ಕೊಟ್ಟಿರುವ ಸೂಚನೆಗಳು ಕಾಲ ಮಿತಿಯಲ್ಲಿ ಜಾರಿಯಾಗುತ್ತಿದೆ.

*TEAM KARNATAKA ಮನಸ್ಥಿತಿ, ಚಿಂತನೆಯಲ್ಲಿ ಕಾರ್ಯಕ್ಷಮತೆ ತೋರಿಸುತ್ತಿರುವ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

*ಉಪ ಮುಖ್ಯಮಂತ್ರಿಗಳು ಬರ ಕುರಿತಂತೆ ವಿಷಯ ಮಂಡಿಸುವಾಗ ಫೋನ್‌ ನಲ್ಲಿದ್ದ ಅಧಿಕಾರಿಯೊಬ್ಬರ ವರ್ತನೆಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿ, ತುರ್ತು ಇದ್ದರೆ ಹೊರಗೆ ಹೋಗಿ ಮಾತನಾಡುವುದು ಒಳ್ಳೆಯದು ಎನ್ನುವ ಸಲಹೆ ನೀಡಿದರು.

ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರದ ಧ್ವನಿ, ಸಿಎಂ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಯಾಶೀಲರಾಗಿದ್ದಾರೆ. ಸರಕಾರದ ಆಲೋಚನೆ ತಿಳಿಸುತ್ತಿರುವ ಅವರ ಕ್ರಿಯೆಗೆ ಗೌರವ ನೀಡೋದು ನಿಮ್ಮ ಜವಾಬ್ದಾರಿ.

ನಿವೃತ್ತ ಐಎಎಸ್‌ ಅಧಿಕಾರಿಗಳ ಅನುಭವ ಮತ್ತು ತಿಳಿವಳಿಕೆಯನ್ನು ನಮ್ಮ ಸರ್ಕಾರ ಸದುಪಯೋಗ ಮಾಡಿಕೊಳ್ಳುತ್ತಿದೆ. ನೀವೂ ಈ ದಿಕ್ಕಿನಲ್ಲಿ ಸಕ್ರಿಯರಾಗಬೇಕು.

ಗ್ರಾಮೀಣ ಭಾಗದ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ತಲಾ ಒಂದು ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಘೋಷಿಸಲಾಗಿದೆ.

ಮಳೆಯ ಪ್ರಮಾಣ ಮತ್ತು ಅಣೆಕಟ್ಟುಗಳಲ್ಲಿ ಶೇಖರಣೆಯಾಗಿರುವ ನೀರಿನ ಆಧಾರದಲ್ಲಿ ಕೃಷಿ ಚಟುವಟಿಕೆ ಮುಂದುವರೆಯಬೇಕು. ಡಿಸಿ-ಸಿಇಒ ಗಳು ಈ ಬಗ್ಗೆ ರೈತ ಸಮುದಾಯದ ಜೊತೆ ಸಂಪರ್ಕದಲ್ಲಿದ್ದು ಮಾರ್ಗದರ್ಶನ ಮಾಡಬೇಕು.

ಸದ್ಯ ಶೇ. 60 ರಷ್ಟು ಮಳೆ ಕೊರತೆ ಕಾಣುತ್ತಿದೆ. 178 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಕಾಣುತ್ತಿದೆ.

ಎರಡನೇ ಹಂತದ ಪರಿಶೀಲನೆ ಮಾಡುವ ಅಗತ್ಯವಿದೆ.

ಮುಂದಿನ ಹದಿನೈದು ದಿನಗಳಲ್ಲಿ ನಾನು ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿ ಕುರಿತಂತೆ ವರದಿ ರವಾನಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡಿಸಿ-ಸಿಇಒ ಗಳು ತ್ವರಿತವಾಗಿ ಸಮಗ್ರ ಮಾಹಿತಿ ಸಂಗ್ರಹಿಸಿ ಕಳುಹಿಸಬೇಕು.

ಹೊಸ ಬೋರ್‌ ವೆಲ್‌ ಕೊರೆಸುವಾಗ ಅದರ ವಿಡಿಯೊ ಆಗಬೇಕು. ಎಲ್ಲೋ ಬೋರ್‌ ಕೊರೆಸಿದೆ ಎಂದು ಕತೆ ಹೇಳಿದರೆ ಕೇಳಬಾರದು. ನಕಲಿ ಬೋರ್‌ ವೆಲ್‌, ಬೋಗಸ್‌ ಬೋರ್‌ವೆಲ್‌ ಕಂಡು ಬಂದರೆ ಸಿಇಒ ಗಳು ನೇರ ಹೊಣೆ ಆಗ್ತೀರಿ. ಇದಕ್ಕೆ ಅವಕಾಶ ಕೊಡಬೇಡಿ.

ಟ್ರಾನ್ಸ್‌ಫಾರ್ಮರ್‌ ರಿಪೇರಿ ಕಡೆ ಗಮನ ಕೊಡಿ. ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ ರೆಡಿ ಇಟ್ಟುಕೊಳ್ಳಿ. ಇದರ ವ್ಯವಸ್ಥೆಗಾಗಿ ಈಗಾಗಲೇ 4ಜಿ ರಿಯಾಯ್ತಿ ನೀಡಲಾಗಿದೆ.

ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅತ್ಯಂತ ಸಕ್ರಿಯವಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಅವರ ಸ್ಪೀಡ್‌ಗೆ ಸ್ಪಂದಿಸಬೇಕು.

ಕೇವಲ ಪೇಪರ್‌ ನಲ್ಲಿ ಎಲ್ಲಾ ಸರಿಯಾಗಿದೆ ಎನ್ನುವ ವರದಿ ನೀಡಿದರೆ ನಾನು ಕೇಳುವುದಿಲ್ಲ. ಫೀಲ್ಡ್‌ ರಿಪೋರ್ಟ್‌ ನನಗೆ ಸಿಗುತ್ತದೆ. ನನಗೆ ಸಿಗುವ ಫೀಲ್ಡ್‌ ರಿಪೋರ್ಟ್‌ , ನೀವು ಅಧಿಕಾರಿಗಳು ಕೊಡುವ ಪೇಪರ್‌ ರಿಪೋರ್ಟ್‌ ನಡುವೆ ವ್ಯತ್ಯಾಸ ಇರಬಾರದು.

ಸರ್ಕಾರ ಅಗತ್ಯವಿರುವ ಎಲ್ಲಾ ಅನುಕೂಲ, ಅನುದಾನಗಳನ್ನು ಹೇರಳವಾಗಿ ಕೊಡುತ್ತಿದೆ. ಇಷ್ಟಾದ ನಂತರವೂ ಕರ್ತವ್ಯಲೋಪದಿಂದ ಯಾವುದೇ ಜಿಲ್ಲೆಯಲ್ಲಿ ಅನಾಹುತ ಕಂಡು ಬಂದರೆ ಅದಕ್ಕೆ ನೀವೇ ಜವಾಬ್ದಾರಿ ಹೊರಬೇಕಾಗುತ್ತದೆ.

ಬರ ಪರಿಸ್ಥಿತಿ ಅಧ್ಯಯನಕ್ಕೆ ಬರುತ್ತಿರುವ ತಂಡಕ್ಕೆ ಪೂರಕ ಮಾಹಿತಿ ನೀಡಿ.

ಅವರನ್ನು ಫೀಲ್ಡ್‌ಗೆ ಕರೆದುಕೊಂಡು ಹೋಗಿ ವಾಸ್ತವಾಂಶ ಮನವರಿಕೆ ಮಾಡಿಸಿ.

ಸಣ್ಣ ಮತ್ತು ಅತಿ ಸಣ್ಣ ರೈತರ ಹಿತವನ್ನು ನಿರ್ಲಕ್ಷಿಸಬಾರದು. ಇವರ ಹಿತವೇ ನಿಮ್ಮಗಳ ಮುಖ್ಯ ಆದ್ಯತೆಯಾಗಬೇಕು.

ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗದ ಪರಿಶೀಲನೆ ನಡೆಸುವಾಗ ಬೆಳೆ ವಿಮೆ ವಿಚಾರದಲ್ಲಿ ಬೇರೆ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಇವೆ. ಇದರ ಬಗ್ಗೆ ಪ್ರತ್ಯೇಕ ವರದಿ ಕೇಳಿದ್ದೇನೆ.

ಯಾವುದೇ ನೆಪ ಹೇಳದೆ ಇವತ್ತು ನಾನು ಏನೇನು ಹೇಳಿದ್ದೇನೆಯೋ ಅದೆಲ್ಲವನ್ನೂ ಅತ್ಯಂತ ಕೆಳ ಹಂತಕ್ಕೆ ತಲುಪಿಸಿ.

Share This Article
Leave a Comment