ಪಬ್ಲಿಕ್ ಅಲರ್ಟ್ ನ್ಯೂಸ್:-ಸಿವಿಲ್ ಪೋಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ಲಿಖಿತ ಪರೀಕ್ಷೆಯುಆಗಸ್ಟ್ ತಿಂಗಳ ೨ರಂದು ನಡೆಯಲಿದೆ ಪರೀಕ್ಷೆಗೆ ಹಾಜರಾಗುತ್ತಿರುವ ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಪೀಪಲ್ಸ್ ಪಾರ್ಕ್ ನಗರ ಕೇಂದ್ರ ಗ್ರಂಥಾಲಯ ವತಿಯಿಂದ ನಡೆದ ಐದನೇ ಅಣಕು ಪರೀಕ್ಷೆಯ ಇಂದಿನ ವಿಷಯವು ಅರ್ಥಶಾಸ್ತ್ರವಾಗಿತ್ತು. ೧೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು ಇಂದಿನ ಅಣಕು ಪರೀಕ್ಷೆಗೆ ಚಾಲನೆ ನೀಡಿದ ಮುಖ್ಯ ಅತಿಥಿಗಳಾದ ಅಬಕಾರಿ ಇಲಾಖೆಯ, ಬೆಂಗಳೂರಿನ ಉಪ ಆಯುಕ್ತೆ ಶ್ರೀಮತಿ ಸ್ಮಿತಾ ರಾವ್ ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಪೋಲೀಸ್ ಇಲಾಖೆಗೆ ಸೇರಲು ಇಚ್ಚಿಸಿರುವುದು ಪ್ರಶಂಸಾರ್ಹ ಎಂದರು. ಮುಂದುವರೆದು, ಇಂದಿನ ಪರಿಸ್ಥಿತಿ ಸಾಕಷ್ಟು ಬದಲಾಗಿದ್ದು ಅಪರಾಧ ಪತ್ತೆಯಲ್ಲಿ ಹೊಸ ಸವಾಲುಗಳು ಹೇರಳವಾಗುತ್ತಿವೆ ಎಂದರು. ಅಪರಾಧಿ ಯಾರೆಂದು ತಿಳಿಯಲಾಗದ ಹಾಗೂ ಅಪರಾಧ ಎಲ್ಲಿಂದ ಎಸಗಲಾಗುತ್ತದೆ ಎಂದು ತಿಳಿಯುವುದು ಕಷ್ಟ ಕೆಲಸವಾಗಿದೆ ಎಂದು ಹೇಳಿದರು. ಪೋಲೀಸ್ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಮಹಿಳೆಯರು ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನ ಕಾಪಾಡಿಕೊಂಡು ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮಾನಸಿಕ ಸ್ಥೈರ್ಯವನ್ನು ಹಾಗೂ ದೈಹಿಕ ಆರೋಗ್ಯ ಮತ್ತು ಸಧೃಡತೆಯನ್ನು ಕಾಪಾಡಿಕೊಂಡು ಹೋಗುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು. ಅಭ್ಯರ್ಥಿಯೊಬ್ಬರು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಮಾದಕ ವಸ್ತುಗಳ ಸೇವನೆ ಯುವಕರಲ್ಲಿ ವ್ಯಾಪಿಸುತ್ತಿದ್ದು ಪೋಲೀಸ್ ಇಲಾಖೆಯಂತೆಯೇ ಅಬಕಾರಿ ಇಲಾಖೆಗೂ ಅದನ್ನು ನಿಗ್ರಹಿಸುವುದು ದೊಡ್ಡ ಸವಾಲಾಗಿದೆ ಎಂದರು. ಅಭ್ಯರ್ಥಿಗಳಿಗೆ ದಿನಪತ್ರಿಕೆಗಳ ಓದುವ ಮಹತ್ವ ಅದರಲ್ಲೂ ಸಂಪಾದಕೀಯ ಅಂಕಣಗಳು ಓದುವುದು ಜ್ಞಾರ್ನಾಜನೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುತ್ತದೆ ಎಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ ಮಂಜುನಾಥ ರವರು ಮಾತನಾಡಿ, ಪೀಪಲ್ಸ್ ಪಾರ್ಕ್ ಗ್ರಂಥಾಲಯದಲ್ಲಿ ನಡೆಸುತ್ತಿರುವ ಅಣಕು ಪರೀಕ್ಷೆಯನ್ನು ಇತರೆ ಶಾಖಾ ಗ್ರಂಥಾಲಯಗಳಿಗೂ ವಿಸ್ತರಿಸಿ ಎಂದು ಮನವಿಗಳು ಬರುತ್ತಿರುವುದಾಗಿ ತಿಳಿಸಿದರು. ಯಾವುದೇ ಸರ್ಕಾರದ ಸಂಸ್ಥೆಗಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ/ಅಣಕು ಪರೀಕ್ಷೆ ನಡೆಸಲು ಬಯಸಿದ್ದಲ್ಲಿ ಸಂಬAಧಿಸಿದ ತರಬೇತಿ/ಅಣಕು ಪರೀಕ್ಷೆಗೆ ಸಹಾಯ ಹಸ್ತ ನೀಡಲು ಮೈಸೂರು ನಗರ ಕೇಂದ್ರ ಗ್ರಂಥಾಲಯ ಸದಾ ಸಿದ್ಧವಿದೆ ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಹಾಗೂ ಸದರಿ ಅಣುಕು ಪರೀಕ್ಷೆ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥರಾದ ಶ್ರೀ ರಮೇಶ್ ನರಸಯ್ಯ ರವರು ಮಾತನಾಡುತ್ತಾ, ಸರ್ಕಾರದಿಂದ ಇತರೆ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳಿಗೂ ತರಬೇತಿ, ಕಾರ್ಯಗಾರ ಹಾಗೂ ಅಣುಕು ಪರೀಕ್ಷೆಗಳನ್ನು ನಡೆಸಲು ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರದಿಂದ ಯೋಜನೆಗಳನ್ನು ಬೇಡಿಕೆ ಮೇರೆಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಶ್ರೀಮತಿ ಸುಮಾ ಬಿ. ಕೋಡಿಹಳ್ಳಿ ರವರು ಉಪಸ್ಥಿತರಿದ್ದರು.
ಸಿವಿಲ್ ಪೋಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಆಗಸ್ಟ್ ತಿಂಗಳ ೨ರಂದು ನಡೆಯಲಿದೆ
Leave a Comment
Leave a Comment
