ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 25 ಹಾಗೂ 26ರ ಅಂದಾಜು 1 ಕೋಟಿ 35 ಲಕ್ಷಗಳ ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್ ಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್ 25 ಹಾಗೂ 26 ರ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಅಭಿವೃಧ್ಧಿ ಕಾಮಗಾರಿ ಇದಾಗಿದ್ದು ಪಾಲಿಕೆಯ ವಾರ್ಡ್ ಸಂ.25ರ ಎಂ.ಕೆ.ಡಿ.ಕೆ ರಸ್ತೆ, ಸಾಡೆ ರಸ್ತೆ 10ನೇ ಕ್ರಾಸ್, ಹಮದರ್ದ್ ಕ್ಲಿನಿಕ್ ರಸ್ತೆ, ಅಂಜುಮಾನ್ ಲೈಬ್ರರಿ ರಸ್ತೆ, ಮುಸ್ತಫಾ ಉನಾನಿ ಪಾರ್ಮಸಿ ರಸ್ತೆಗಳನ್ನು ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗು ಪಾಲಿಕೆಯ ವಾರ್ಡ್ ಸಂ. 26 ರ ಸಾಡೆ ರಸ್ತೆ ದಕ್ಷಿಣ ಕ್ರಾಸ್, ಕೆ.ಆರ್. ಪಾರ್ಕ್ ಕ್ರಾಸ್ ರಸ್ತೆ, ಸಹಿ ಮಸಜಿದ್ ರಸ್ತೆ, ರೈಲ್ವೆ ಗಲ್ಲಿ, ಸುನ್ನಿಚೌಕ ಶಾಲೆ ಹಿಂಭಾಗ ಹಾಗೂ ಕೆ.ಟಿ. ಸ್ಟ್ರೀಟ್ ಹಿಂಭಾಗದ ರಸ್ತೆಗಳನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿ ಮಾಡುವ ಕಾಮಗಾರಿಗೆ ಸರ್ಕಾರಿ ಉರ್ದು ಶಾಲೆಯ ಬಳಿ ( ಸುನ್ನಿ ಚೌಕ್)ಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.



ಕಾರ್ಯಕ್ರಮದಲ್ಲಿ ದೇವರಾಜ ಬ್ಲಾಕ್ ಹಾಗೂ ಜನತಾ ಬಜಾರ್ ಅಧ್ಯಕ್ಷ ಯು.ಎಸ್ ರಮೇಶ್ ರಾಯಪ್ಪ, ನಗರಪಾಲಿಕೆ ಮಾಜಿ ಸದಸ್ಯ ನಸ್ರುದ್ದೀನ್ ಬಾಬು,ಬಾಲರಾಜ್, ರೆಹಮಾನ್ ತುಲ್ಲಾ ಟಿಪ್ಪು, ಸೈಯದ್ ಮಜೀದ್,ಮುಜು,ಅಜ್ಮಲ್ ಅಜ್ಜು , ಆರೀಫ್, ಸಯ್ಯದ್ ಫಾರೂಕ್, ಅಜ್ಜು, ತಬ್ರೆಜ್, ರಾಚಪ್ಪ, ಗಿರೀಶ್, ರಾಜ ಗಣೇಶ್,ಇಮ್ರಾನ್ ಖಾನ್, ಶಂಕರ್,ಕೃಷ್ಣ,ಕಾಳಪ್ಪ ವಾಣಿ ವಿಲಾಸದ ಸಹಾಯಕ ಅಭಿಯಂತರರಾದ ಮುಸ್ತಫಾ ಸೇರಿ ಇನ್ನಿತರರು ಭಾಗವಹಿಸಿದ್ದರು.
