ಉದ್ಯೋಗ ಮೇಳ ನೇಮಕಾತಿ ಪತ್ರ ವಿತರಿಸಿದ ಶಾಸಕ‌‌ ಶ್ರೀವತ್ಸ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮಾನಸ ಗಂಗೋತ್ರಿಯ ಅಖಿಲ‌ಭಾರತ ವಾಕ್ ಶ್ರವಣ ಸಂಸ್ಥೆಯ ಜ್ಞಾನ ಉದ್ಯಾನ ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ ಕೇಂದ್ರ ಸರ್ಕಾರದ ಇಲಾಖೆ ಸಹಭಾಗಿತ್ವದೊಂದಿಗೆ ಶುಕ್ರವಾರ ಅಯೋಜಿಸಿದ್ದ ” ಉದ್ಯೋಗ ಮೇಳ” ಪ್ರಧಾನ‌ಮಂತ್ರಿ‌ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಉದ್ಯೋಗಮೇಳದಲ್ಲಿ ಆಯ್ಕೆಯಾದ ಉದ್ಯೋಗಿಗಳಿಗೆ ಶಾಸಕ ಶ್ರೀವತ್ಸ ನೇಮಕಾತಿ ಪತ್ರ ವಿತರಿಸಿದರು.
ಬಳಿಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ 40 ಸ್ಥಳಗಳಲ್ಲಿ ಏಕಕಾಲದಲ್ಲಿ ಉದ್ಯೋಗಮೇಳ ಆಯೋಜಿಸಿ ದಾಖಲೆ ಬರೆದಿದ್ದಾರೆ. ಅನೇಕರು ಕೇಂದ್ರ ಸರ್ಕಾರ ಉದ್ಯೋಗ ನೀಡುತ್ತಿಲ್ಲ ಎನ್ನುತ್ತಾರೆ. ಅಂತಹವರು ಇಂತಹ ಉದ್ಯೋಗ ಮೇಳ ಬಂದು ಗಮನಿಸಲಿ ಎಂದು ತಿಳಿಸಿದರು.
ಅಯುಷ್ ಇಲಾಖೆಯ ಪುಷ್ಪಾವತಿ
ರಾಷ್ಟ್ರ ನಿರ್ಮಾಣದಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಜ್ಞಾನ, ಕೌಶಲ ಮತ್ತು ಕಠಿಣ ಪರಿಶ್ರಮ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಇಲಾಖೆಗಳ ಬೆಳವಣಿಗೆಗೆ ಕೈಜೋಡಿಸಬೇಕು. ಕೇಂದ್ರ ಸರ್ಕಾರದ ಸಂಸ್ಥೆ ಜೊತೆ ಒಡನಾಟ ಇಟ್ಟುಕೊಂಡು ಅವರಿಂದ ಕಲಿಯಬೇಕಾದದ್ದು ಸಾಕಷ್ಟು ಇದೆ. ಮೈಸೂರಿನಲ್ಲಿ  ಇದೇ ಮೊದಲನೇ ಬಾರಿಗೆ ಪೋಸ್ಟ್ ಮ್ಯಾನ್ ಗಳಿಗೆ ಗ್ರಾಹಕರ ಜೊತೆ ವ್ಯವಹಾರ  ಮಾಡುವಾಗ ಹೇಗೆ ಮಾತಾನಾಡಬೇಕು ಶಿಸ್ತಿನಿಂದ ಹೇಗೆ ವರ್ತನೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಮ್ಮ ಅಯುಷ್ ಮಾಡುತ್ತಿದೆ ಎಂದರು.
“ಉದ್ಯೋಗ ಮೇಳ” ಪ್ರಧಾನ‌ಮಂತ್ರಿ‌ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ 40 ಸ್ಥಳಗಳಲ್ಲಿ ಆಯ್ಕೆಯಾದ 51,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ಮೈಸೂರಿನಲ್ಲಿ ಭವಿಷ್ಯನಿಧಿ, ಕೇಂದ್ರೀಯ ವಿಶ್ವವಿದ್ಯಾಲಯ, ಅಂಚೆ ಇಲಾಖೆ, ರೈಲ್ವೆ ಇಲಾಖೆ, ಆದಾಯ ತೆರಿಗೆ ಇಲಾಖೆ, ವಿಮಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದ 82ಕ್ಕೂ ಹೆಚ್ಚು ಜನರಿಗೆ ನೇಮಕಾತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಕಾಶ್, ಶಮೀದ್  ಅಹಮದ್, ಅಯುಷ್ ನಿರ್ದೇಶಕರಾದ ಪುಷ್ಪಾವತಿ, ಪಿ ಎಂ ಜಿ ಕಾಕುಮನ್ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment