ಪಬ್ಲಿಕ್ ಅಲರ್ಟ್
ಮೈಸೂರು: ಬನ್ನೂರು ಹೋಬಳಿಯ ಮಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮದ್ಯ ತಯಾರಿಕಾ ಕಂಪನಿಯೊAದು ಅಕ್ರಮವಾಗಿ ಬೋರ್‌ವೆಲ್‌ಗಳ ನೀರು ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಂತರ್ಜಲ ಕುಸಿದಿದೆ. ಆದರೂ ಸಹಾ ಸಂಬAಧಒಪಟ್ಟ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಎಂ. ಪ್ರಸಾದ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಆಂತರಿಕ ಬಳಕೆಗಾಗಿ ಮೂರು ಬೋರ್‌ವೆಲ್ ಬಳಸಲು ಈ ಕಂಪನಿ ಅನುಮತಿ ಪಡೆದಿದೆ. ಆದರೆ ಅಕ್ರಮವಾಗಿ ಒಂಭತ್ತು ಬೋರ್‌ವೆಲ್ ಕೊರೆಯಿಸಿಕೊಂಡು ನೀರನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ರೈತರ ಕೃಷಿ ಚಟುವಟಿಕೆಗೆ ಅಡ್ಡಿಯುಂಟಾಗಿದೆ ಎಂದು ದೂರಿದರು.
ಈ ಕಾರ್ಖಾನೆಯಲ್ಲಿ ಸುಮಾರು ೨ ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಬಹುತೇಕ ಮಂದಿ ಹೊರಗಿನವರೇ ಆಗಿದ್ದಾರೆ. ಸ್ಥಳೀಯರಿಗೆ ಕೆಲಸ ಕೊಟ್ಟಿಲ್ಲ. ಇದಲ್ಲದೆ, ಹೊರಗಿನಿಂದ ನೀರನ್ನು ಟ್ಯಾಂಕರ್‌ಗಳ ಮೂಲಕ ತರಿಸಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಈ ರೀತಿ ತರಿಸಿಕೊಂಡ ನೀರು ಪ್ರಮಾಣೀಕೃತವಾಗಿಲ್ಲ. ಆಗಾಗ್ಗೆ ಈ ಕಂಪನಿ ನಿರಪೇಕ್ಷಣಾ ಪತ್ರ ಪಡೆಯುತ್ತಿದೆ. ಇದರಲ್ಲಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಪಂ ಪಿಡಿಓ ಶಾಮೀಲಾಗಿದ್ದಾರೆ. ಹೀಗಾಗಿ ಕೂಡಲೇ ಕಂಪನಿಯ ಅಕ್ರಮ ಚಟುವಟಿಕೆಗಳಿಗೆ ತಡೆ ಹಾಕದಿದ್ದರೆ ನ್ಯಾಐಆಳಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ದಾಖಲಿಸಿ, ಲೋಕಾಯುಕ್ತರಿಗೆ ದೂರು ನೀಡಲಾಗುವುದೆಂದು ಎಚ್ಚರಿಸಿದರು.
ಸ್ಥಳೀಯರು, ಸಾಮಾಜಿಕ ಹೋರಾಟಗಾರರು ಹಾಗೂ ವಕೀಲರುಗಳಾದ ಚಿನ್ನಸ್ವಾಮಿ, ಪ್ರಜ್ವಲ್, ಗವಿಸ್ವಾಮಿ ಮಹದೇವಸ್ವಾಮಿ, ಲೋಕೇಶ್ ಇದ್ದರು.
ಅಕ್ರಮ ಜಲ ಬಳಕೆ ಅಂತರ್ಜಲ ಕುಸಿತದ ಆರೋಪ
Leave a Comment
Leave a Comment
