ಪಬ್ಲಿಕ್ ಅಲರ್ಟ್ ನ್ಯೂಸ್:-30 ವರ್ಷದ ಸೇವೆಗೆ ಗ್ರಾಮಸ್ಥರ ಅಭಿನಂದನೆ
ಮೈಸೂರು: ಕಳೆದ 30 ವರ್ಷಗಳಿಂದ ಹಂಚ್ಯಾಗ್ರಾಮ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಬಸವರಾಜು ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಸಣ್ಣಸ್ವಾಮಿ ಮಾತನಾಡಿ, ೪೦ ವರ್ಷಗಳಿಂದ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯುವಲ್ಲಿ ಹಾಗೂ ಸಂಘ ಯಾವುದೇ ಸಮಸ್ಯೆಗ ಎದುರಾಗದಂತೆ ಜನರಿಗೆ ನಿಗಧಿತ ಸಮಯಕ್ಕೆ ಪಡಿತರ ವಿತರಣೆ ಮಾಡುವಲ್ಲಿ ಇವರ ಪಾತ್ರ ಬಹಳ ದೊಡ್ಡದಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿದ್ದು, ಅವರ ಸ್ಥಾನಕ್ಕೆ ಮುಂದೆ ಬರುವವರು ಇಂತಹದೇ ಸೇವೆ ಒದಗಿಸಲಿ ಎಂದರು.
ಹಂಚ್ಯಾಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಸಿ.ಕುಮಾರಸ್ವಾಮಿ ಮಾತನಾಡಿ, ಬಸವರಾಜು ಅವರು ಸೇವೆ ಸದಾಸ್ಮರಣೀಯ. ಸದರಿ ಕೃಷಿ ಪತ್ತಿನ ಸಹಕಾರ ಸಂಘ ಸ್ವಂತ ಕಟ್ಟಡ ಬೇಕೆಂಬ ಅವರ ಕನಸು ನನಸಾಗುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರದ ಹಾಗೂ ಸ್ಥಳೀಯರ ಸಹಕಾರದಿಂದ ಇದನ್ನು ಕಾರ್ಯರೂಪಕ್ಕೆ ತರಲಾಗುವುದೆಂದು ಬಸರಾಜು ಅವರ ೪೦ ವರ್ಷದ ಕಾರ್ಯವೈಖರಿ ಸ್ಮರಿಸಿದರು.
ಗ್ರಾರಂಟಿ ಅನುಷ್ಠಾನ ಪ್ರಾಧಿಕಾರ ತಾಲ್ಲೂಕು ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಸದಸ್ಯ ಎಚ್.ಡಿ.ಚೆನ್ನಯ್ಯ ಮಾತನಾಡಿ, ಅನೇಕ ಸಂಧರ್ಭಗಳಲ್ಲಿ ಬಸವರಾಜು ಅವರೊಟ್ಟಿಗೆ ಚರ್ಚೆ ಸಹ ಮಾಡಿ ಗಲಾಟೆ ಸಹ ಮಾಡಿದ್ದು, ಎಲ್ಲವನ್ನೂ ಶಾಂತ ರೀತಿಯಲ್ಲೇ ನಿಭಾಯಿಸಿದ್ದಾರೆ. ನಮ್ಮ ಚರ್ಚೆ ಸೊಸೈಟಿಯ ಅಭಿವೃದ್ಧಿ ದೃಷ್ಠಿಯಿಂದಲೇ ಹೊರತು ಬೇರೆ ಎನಿಲ್ಲಾ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಬಸವರಾಜು,
ಕೃಷಿಪತ್ತಿನ ಸಹಕಾರ ಸಂಘದ ಮೇಲ್ವಿಚಾರಕರಾದ ಗಿರೀಶ್, ಹಂಚ್ಯಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೋಗಿಸಿದ್ದಯ್ಯ, ನಿರ್ದೇಶಕರಾದ ಎಸ್. ಕುಮಾರ್, ಎಚ್.ವಿ. ವೆಂಕಟೇಗೌಡ, ಸಾತಗಳ್ಳಿ ನಂಜಪ್ಪ, ಎಚ್.ಎಸ್.ಸ್ವಾಮಿಗೌಡ, ಶಂಕರಪ್ಪ, ಗಳಿಗರಹುಂಡಿ ಮಹದೇವ್, ಪಿ.ಲಕ್ಷ್ಮಿನಾರಾಯಣಚಾರಿ, ಗೌರಮ್ಮ, ಕಮಲಮ್ಮ, ಕಾಳಿಸಿದ್ದನಹುಂಡಿ ಮಹದೇವು, ರಮ್ಮನಹಳ್ಳಿ ಹಾಲಪ್ಪ, ಮುಖಂಡರಾದ ಯೋಗೀಶ್, ಸಹಕಾರ್ಯದರ್ಶಿ ನಾಗರಾಜ್, ಹೆಚ್ಚುವರಿ ಉಸ್ತುವಾರಿ ಶಿವಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.
30 ವರ್ಷದ ಸೇವೆಗೆ ಗ್ರಾಮಸ್ಥರ ಅಭಿನಂದನೆ
Leave a Comment
Leave a Comment
