ಮಾದಕ ವಸ್ತುಗಳ ಉತ್ಪದನೆ ಹಾಗೂ ಬೇಡಿಕೆಯ ಜಾಲವನ್ನು ನಿಷ್ಕ್ರಿಯೆಗೊಳಿಸಲು ಸಹಕರಿಸಿ: ಮಲ್ಲಿಕ್

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮಾದಕ ವಸ್ತುಗಳ ಉತ್ಪದನೆ ಹಾಗೂ ಬೇಡಿಕೆಯ ಜಾಲವನ್ನು ನಿಷ್ಕ್ರಿಯೆಗೊಳಿಸಲು ಸಹಕರಿಸಿ: ಮಲ್ಲಿಕ್

ಮೈಸೂರು,ಫೆ.17 (ಕರ್ನಾಟಕ ವಾರ್ತೆ):-
ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದರೊಂದಿಗೆ ಮಾದಕ ವಸ್ತುಗಳ ಉತ್ಪಾದನೆ ಹಾಗೂ ಬೇಡಿಕೆಯ ಜಾಲವನ್ನು ನಿಷ್ಕ್ರಿಯೆಗೊಳಿಸಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕ್ ಸಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಕೋಡ್೯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಡಿದರು. ಮಾದಕ ವಸ್ತುಗಳ ವ್ಯಸನಿಗಳನ್ನು ಗುರುತಿಸಿ ಅವರಿಗೆ ವ್ಯಸನ ಮುಕ್ತ ಕೇಂದ್ರಗಳ ಮೂಲಕ ಸಮಾಲೋಚನೆ ಏರ್ಪಡಿಸಿ ವ್ಯಸನ ಮುಕ್ತರನ್ನಾಗಿಸಲು ಶ್ತಮಿಸಬೇಕು ಎಂದರು.

ಪೊಲೀಸ್ ಇಲಾಖೆ ವತಿಯಿಂದ ಹಲವಾರು ದಾಳಿಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಮಾದಕ ವಸ್ತುಗಳ ಮಾರಾಟ ಜಾಲವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಸಹಕಾರ ಅತಿಮುಖ್ಯ ಎಂದರು.

ವೈದ್ಯರ ಸಲಹಾ ಚೀಟಿಯಿಲ್ಲದೆ ನಿದ್ರಾ ಮಾತ್ರೆಗಳನ್ನು ಖರೀದಿಸಿ ಮಾದಕ ವಸ್ತುಗಳ ರೂಪದಲ್ಲಿ ಬಳಸುವ ಪ್ರಕರಣಗಳು ಕಂಡುಬಂದಿದೆ. ಮೆಡಿಕಲ್ ಸ್ಟೋರ್ ಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಇಂತಹ ಔಷಧಿ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಹಾಸ್ಟಲ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ವಾರ್ಡನ್ ಗಳು ಹೆಚ್ಚಿನ ನಿಗಾ ವಹಿಸಬೇಕು. ಅವರು ಹೊರಗಿನಿಂದ ಆಹಾರ ಸೇರಿ ಇನ್ನಿತರೆ ವಸ್ತುಗಳನ್ನು ಆರ್ಡರ್ ಮಾಡಿ ಖರೀದಿಸಿತ್ತಾರೆ. ಅವುಗಳ ಬಗ್ಗೆ ತೀಕ್ಷ್ಣ ನಿಗಾ ವಹಿಸಿ ಎಂದರು.

ಡಿ.ಸಿ.ಪಿ ಸುಂದರ್ ರಾಜ್ ಅವರು ಮಾತನಾಡಿ ವಿಮುಕ್ತಿ ‌ಎಂಬ ಹೊಸ ಯೋಜನೆಯನ್ನು ಜಾರಿ ಮಾಡಲಾಗಿದ್ದು, ನಕಾಡ್ ೯ ಡ್ರಗ್ಸ್ ಮಾರಾಟದ ಬಗ್ಗೆ ಮಾಹಿತಿ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.
ಡ್ರಗ್ಸ್ ವ್ಯಸನಿಗಳು ಕಂಡು ಬಂದಲ್ಲಿ ಅವರು ಮಾದಕ‌ವಸ್ತು ಸೇವನೆ ಮಾಡದಂತೆ ನೋಡಿಕೊಳ್ಳಲು ಒಬ್ಬರು ಪೊಲೀಸ್ ಪೇದೆಯನ್ನು ನಿಗಾ ವಹಿಸಲು ನಿಯೋಜಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment