ಪಬ್ಲಿಕ್ ಅಲರ್ಟ್ ನ್ಯೂಸ್:-ಕಣ್ಣಿನ ರಕ್ಷಣೆ ಅತ್ಯಗತ್ಯ-ಸರಳಾ ಮಣಿಲಾಲ್
ಮೈಸೂರು: ಮಾನವನ ದೇಹದ ಅತಿ ಮುಖ್ಯ ಅಂಗಗಳಲ್ಲಿ ಕಣ್ಣು ಕೂಡಾ ಪ್ರಮುಖ ಅಂಗ. ಆದ್ದರಿಂದ ಪ್ರತಿಯೊಬ್ಬರು ಕಣ್ಣಿನ ರಕ್ಷಣೆಯತ್ತ ಗಮನ ಹರಿಸುವುದು ಅತ್ಯಗತ್ಯ ಎಂದು ಜೀವನ್ ಜ್ಯೋತಿ ಮಲ್ಟಿಸ್ಟೇಟ್ ಕ್ರೆಡಿಟ್-ಕೋ ಆಪರೇಟಿವ್ ಸೊಸೈಟಿಯ ವಿರಾಜಪೇಟೆ ಹಾಗೂ ಮೈಸೂರು ಶಾಖೆಯ ಹಿರಿಯ ವ್ಯವಸ್ಥಾಪಕರಾದ ಸರಳ ಮಣಿಲಾಲ್ ಸಲಹೆ ನೀಡಿದರು.
ಗುರುವಾರ ಬೆಳಗ್ಗೆ ಮೈಸೂರಿನ ಎಎಸ್ಜಿ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಸೊಸೈಟಿಯ ಸದಸ್ಯರು ಹಾಗೂ ಸಿಬ್ಬಂದಿವರ್ಗದವರಿಗಾಗಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನುಷ್ಯನ ಪ್ರತಿ ಅಂಗಗಳೂ ಪ್ರಮುಖವಾಗಿದ್ದು, ಕಣ್ಣಿನ ಸಂರಕ್ಷಣೆ ಕೂಡಾ ಅತ್ಯಗತ್ಯ. ಈಗಾಗಲೇ ನಮ್ಮ ಸೊಸೈಟಿಯಲ್ಲಿ ಸದಸ್ಯರು ಹಾಗೂ ಸಿಬ್ಬಂದಿವರ್ಗದವರಿಗಾಗಿ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅದೇ ರೀತಿ ಇಂದು ಕಣ್ಣಿನ ತಪಾಸಣೆ ಶಿಬಿರ ನಡೆಸಲಾಗಿದೆ. ಸುಮಾರು 200ಕ್ಕೂ ಅಧಿಕ ಮಂದಿ ಈಗಾಗಲೇ ತಪಾಸಣೆಗೆ ಒಳಪಟ್ಟಿದ್ದು, ಸುಮಾರು 15 ಜನರಿಗೆ ಶಸ್ತ್ರಚಿಕಿತ್ಸೆಗೂ ಕೂಡಾ ಶಿಪಾರಸ್ಸು ಮಾಡಲಾಗಿದ್ದು, ಎಎಸ್ಜಿ ಆಸ್ಪತ್ರೆಯಲ್ಲಿ ಇವರೆಲ್ಲರಿಗೂ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಎಎಸ್ಜಿ ಆಸ್ಪತ್ರೆಯ ಜಾರ್ಜ್ ಅವರು ಮಾತನಾಡಿ,ಈಗಾಗಲೇ ಹಲವು ಮಂದಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಗಿದೆ. ಅದರಲ್ಲಿ ಸುಮಾರು 15 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಈ ಕುರಿತು ಅವರೊಂದಿಗೆ ಸಮಾಲೋಚನೆ ಸಹ ನಡೆಸಲಾಗಿದೆ ಎಂದರಲ್ಲದೇ, ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಪಾಲಿಸಿ ಸೇರಿದಂತೆ ಯಶಸ್ವಿನಿ ಯೋಜ ನೆಯನ್ನು ಅಂಗೀಕರಿಸಲಾಗುತ್ತಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಸುರೇಶ್ ಕುಮಾರ್, ಆಯಿಷಾ, ಭಾರ್ಗವಿ ಸೇರಿದಂತೆ ಇನ್ನಿತರರಿದ್ದರು.
ಕಣ್ಣಿನ ರಕ್ಷಣೆ ಅತ್ಯಗತ್ಯ-ಸರಳಾ ಮಣಿಲಾಲ್
Leave a Comment
Leave a Comment
