ಮಲೇಷ್ಯಾದಲ್ಲಿ ನಡೆದ 7ನೇ ಅಂತರರಾಷ್ಟ್ರೀಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ 5 ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ಮೈಸೂರಿನ ಐ ಡ್ಯಾನ್ಸ್ ಸ್ಟುಡಿಯೋ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮಲೇಷ್ಯಾದಲ್ಲಿ ನಡೆದ 7ನೇ ಅಂತರರಾಷ್ಟ್ರೀಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ 5 ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ಮೈಸೂರಿನ ಐ ಡ್ಯಾನ್ಸ್ ಸ್ಟುಡಿಯೋ

ಮೈಸೂರಿನ ಐ ಡ್ಯಾನ್ಸ್ ಸ್ಟುಡಿಯೋ ವಿದ್ಯಾರ್ಥಿಗಳು 2026ರ ಜೂನ್ 26ರಿಂದ ಜುಲೈ 1ರವರೆಗೆ ಮಲೇಷ್ಯಾದ ರಾಯಲ್ ಚುಲಾನ್ ಆಡಿಟೋರಿಯಂನಲ್ಲಿ ನಡೆದ 7ನೇ ಅಂತರರಾಷ್ಟ್ರೀಯ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 5 ಚಿನ್ನದ ಪದಕಗಳನ್ನು ಗೆದ್ದು ಭಾರತ, ಕರ್ನಾಟಕ ಹಾಗೂ ಮೈಸೂರುಗೆ ಹೆಮ್ಮೆ ತಂದಿದ್ದಾರೆ.

ಚಿನ್ನದ ಪದಕ ವಿಜೇತರು:

🥇 ಲವಿಕ್ ರಾಜಶೇಖರ್ – ಅಂಡರ್-9 ಬಾಲಕರ ವಿಭಾಗ
🥇 ಅನ್ವೇಷಾ ಶ್ರೀ ಎಂ. – ಅಂಡರ್-12 ಕ್ಲಾಸಿಕಲ್ ವಿಭಾಗ
🥇 ಹಸಿನಿ ಜಿ. – ಅಂಡರ್-12 ಬಾಲಕಿಯರ ಫ್ರೀಸ್ಟೈಲ್ ವಿಭಾಗ
🥇 ವಿಹಾನಾ ದಡ್ಡೇನವರ್ – ಅಂಡರ್-15 ಬಾಲಕಿಯರ ಹಿಪ್-ಹಾಪ್ ಸೋಲೋ ವಿಭಾಗ
🥇 ಮೋಹಿತ್ – ಅಂಡರ್-15 ಬಾಲಕರ ಹಿಪ್-ಹಾಪ್ ಸೋಲೋ ವಿಭಾಗ

ತಂಡಕ್ಕೆ ಐ ಡ್ಯಾನ್ಸ್ ಸ್ಟುಡಿಯೋ, ಮೈಸೂರು ಸಂಸ್ಥಾಪಕ ಹಾಗೂ ನಿರ್ದೇಶಕರಾದ ಪೃಥ್ವಿ ನಾಯಕ್ ಅವರು ತರಬೇತಿ ಮತ್ತು ಮಾರ್ಗದರ್ಶನ ನೀಡಿದರು. ಅವರು ಡ್ಯಾನ್ಸ್ ಕೊರಿಯೋಗ್ರಾಫರ್, Zumba Certified Instructor (ZIN), ಕರ್ನಾಟಕ SDA ತಾಂತ್ರಿಕ ನಿರ್ದೇಶಕರು, ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರೆಫರಿ ಆಗಿದ್ದಾರೆ.

ಈ ಸಾಧನೆ ಐ ಡ್ಯಾನ್ಸ್ ಸ್ಟುಡಿಯೋ, ವಿದ್ಯಾರ್ಥಿಗಳು, ಪೋಷಕರು ಹಾಗೂ ಮೈಸೂರು ನಗರದ ಹೆಮ್ಮೆಯಾಗಿದೆ. ವಿಜೇತ ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಈ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಜೈ ಹಿಂದ್! 🇮🇳

Share This Article
Leave a Comment