ಪಬ್ಲಿಕ್ ಅಲರ್ಟ್ ನ್ಯೂಸ್:-ಎಸ್ಸಿ,ಎಸ್ಟಿ ಉದ್ಯಮಿಗಳ ಬಗ್ಗೆ ಕೆಐಎಡಿಬಿ ಅಧಿಕಾರಿಗಳಿಂದ ತಾರತಮ್ಯ: ಮಾಜಿ ಮೇಯರ್ ಪುರುಷೋತ್ತಮ್ ಆರೋಪ
ಮೈಸೂರು: ಕೆಐಎಡಿಬಿ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರರಿಗೆ ಸೌಲಭ್ಯ ಒದಗಿಸುವ ವಿಚಾರದಲ್ಲಿ ತಾರತಮ್ಯ ಅನುಸುತ್ತಿದ್ದಾರೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಅವರು ಆರೋಪಿಸಿದ್ದಾರೆ.
ಮೈಸೂರು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕೆಐಎಡಿಬಿಯಿಂದ ಉದ್ಯಮಿದಾರರಿಗೆ ನೀಡುವ ಜಾಗ ಒಂದು ಎಕರೆ, ಅರ್ಧ ಎಕರೆ, ಅಥವಾ ೧೦ಗುಂಟೆ, ೨೦ ಗುಂಟೆ ಇರುಬಹುದು. ಈ ವಿಚಾರದಲ್ಲಿ ಎಸ್ಸಿ, ಎಸ್ಸ್ಟಿ ಉದ್ಯಮಿದಾರರಿಗೆ ನೀಡುವಾಗ ಮಾತ್ರ ಹಳ್ಳ ಕೊಳ್ಳದ ಜಾಗ ನೀಡುತ್ತಾರೆ. ಇಂತಹ ಜಾಗ ಪಡೆದು ಗುಂಡಿ ಮುಚ್ಚಿ ಸಮತಟ್ಟು ಮಾಡುವುದೇ ನಮ್ಮ ಉದ್ಯಮಿದಾರರಿಗೆ ಕಷ್ಟವಾಗುತ್ತದೆ ಎಂದು ಎಂದು ದೂರಿದರು.
ಸರ್ಕಾರಗಳು ಉದ್ಯಮಿದಾರರಿಗೆ ನೀಡುವ ಜಾಗ ಉಳ್ಳವರ ಪಾಲಾಗುತ್ತಿವೆ. ಅಧಿಕಾರಿ ವರ್ಗದವರ ಸಂಬಂಧಿಗಳು ಹಾಗೂ ರಾಜಕಾರಣಿಗಳಿಗೆ ಉತ್ತಮವಾದ ಸ್ಥಳದಲ್ಲಿ ಸಮತಟ್ಟಾದ ಜಾಗ ನೀಡಿ ನಮ್ಮವರಿಗೆ ಹಳ್ಳಕೊಳ್ಳದ ಜಾಗ ನೀಡಿ ತಾರತಮ್ಯ ಮಾಡುತ್ತಾರೆ. ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜಾಗಕ್ಕಾಗಿ ನಮ್ಮ ಎಸ್ಸಿ ಎಸ್ಟಿ ಕೈಗಾರಿಕೋದ್ಯಮಿಗಳು ಹಣ ಕಟ್ಟಿ ಎಂಟಿರಿಂದ ಹತ್ತು ವರ್ಷಗಳಾಗಿದ್ದರೂ ಸಹ ಕೆಲವರಿಗೆ ಇನ್ನೂ ಕೂಡ ಜಾಗ ನೀಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ ಆದೇಶ ಮಾಡುತ್ತಾರೆ. ಆದರೆ ಅಂತಹ ಆದೇಶಗಳು ಸಂಪೂರ್ಣವಾಗಿ ಜಾರಿಯಾಗಲ್ಲ. ಜಾರಿಯಾದರೂ ಕೂಡ ನಿಜವಾದ ಬಡವರಿಗೆ ಸಿಗದೆ ಉಳ್ಳವರ ಪಾಲಾಗುತ್ತಿರುವುದು ನೋವಿನ ಸಂಗತಿ ಎಂದರು.
ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದಶದಲ್ಲಿ ನಮ್ಮವರಿಗೆ ಒಂದು ರೀತಿಯ ಅನ್ಯಾಯವಾದರೆ, ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ೩೭ ಘಟಕದ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಹಳ್ಳ ಕೊಳ್ಳವಿರುವ ಜಾಗ ನೀಡಿದ್ದು, ಬದಲಿ ಜಾಗ ನೀಡಲು ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮವರಿಗೆ ಆಗುತ್ತಿರುವ ಅನ್ಯಾಯವನ್ನು ನಾವು ಎಷ್ಟು ದಿನ ಅಂತ ಸಹಿಸಿಕೊಳ್ಳುವುದು? ಇನ್ನು ಮುಂದೆ ಅದು ಸಾಧ್ಯವಿಲ್ಲ. ನಾವು ಕಾನೂನಾತ್ಮವಾಗಿ ಹೋರಾಟ ಮಾಡುತ್ತೇವೆ, ನಮ್ಮವರಿಗೆ ಅನ್ಯಾಯ ಮಾಡಿರುವ ಹಾಗೂ ನಮ್ಮಗಳ ಸೌಲಭ್ಯಗಳನ್ನು ಪಡೆದುಕೊಂಡಿರುವ ಯಾರೇ ಆಗಲಿ ಅಂತಹವರ ವಿರುದ್ಧ ಕೋರ್ಟ್ನಲ್ಲಿ ಹೋರಾಟ ಮಾಡುತ್ತೇವೆ. ಧರಣಿ ಕೂರುತ್ತೇವೆ ಎಂದು ಮಾಜಿ ಮೇಯರ್ ಪರುಷೋತ್ತಮ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಎಸ್ಸಿ, ಎಸ್ಸ್ಟಿ ಉದ್ಯಮಿದಾರರ ಸಂಘದ ಅಧ್ಯಕ್ಷ ವಿಜಯಶಂಕರ್ ಮಾತನಾಡಿ, ನಾವು ೨೦೧೭ರಿಂದಲೂ ನಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಲೇ ಬಂದಿದ್ದೇವೆ. ಆದರೆ ಏನೂ ಪ್ರಯೋಜನವಾಗುತ್ತಿಲ್ಲ. ವಲಯ ಕಚೇರಿಗಳಲ್ಲಿರುವ ಅಧಿಕಾರಿಗಳು ಆರ್ಟಿಐ ಕಾರ್ಯಕರ್ತರ ಅರ್ಜಿಗಳಿಗೆ ಗಮನ ಕೊಟ್ಟು ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ನಮ್ಮವರು ೧೩೦ ಮಂದಿ ಜಾಗಕ್ಕಾಗಿ ಹಣ ಕಟ್ಟಿದ್ದರೂ ಸಹ ೨೦-೩೦ಮಂದಿಗೆ ಮಾತ್ರ ಯಾವುದೋ ಹಳ್ಳದಲ್ಲಿ ಜಾಗ ತೋರಿಸುತ್ತಾರೆ. ಜಾಗಕ್ಕೆ ಒಂದು ಲಕ್ಷ ಹಣವಾದರೆ ಅಲ್ಲಿನ ಹಳ್ಳ ತುಂಬಲು ೨೦ ಲಕ್ಷ ಬೇಕಾಗುತ್ತದೆ. ಬೇಕಂತಲೇ ನಮಗೆ ಹುಡುಕಿ ಇಂತಹ ಸ್ಥಳ ನೀಡಿ ನಮಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗದಿದ್ದರೆ ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ವಿಜಯಶಂಕರ್ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಉದ್ಯಮಿಗಳ ಸಮಸ್ಯಗಳನ್ನು ಬಗೆಹರಿಸಲು ಕೆಐಎಡಿಬಿ ಅಧಿಕಾರಿಗೆ ಮನವಿ ಸಲ್ಲಿಸಿರುವ ಬಗ್ಗೆಯೂ ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಿವಣ್ಣ ನಂಜಾಪುರ, ಖಜಾಂಚಿ ರಘು, ಉಪಾಧ್ಯಕ್ಷ ಕುಮಾರ್ ಬಸ್ತಿ, ಸದಸ್ಯರಾದ ಗಣೇಶ್ಮೂರ್ತಿ, ಗಿರೀಶ್ ಸೇರಿದಂತೆ ಮತ್ತಿತರ ಸದಸ್ಯರು ಹಾಜರಿದ್ದರು.
