ದಸರಾ ಹಿನ್ನಲೆ ಕ್ರೀಡಾಂಗಣಗಳ ಪರಿಶೀಲನೆ

latha prabhukumar
0 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದಸರಾ ಹಿನ್ನಲೆ ಕ್ರೀಡಾಂಗಣಗಳ ಪರಿಶೀಲನೆ

ದಸರಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳು ನಡೆಯುವ ಚಾಮುಂಡಿ ವಿಹಾರ್ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಂಗಣಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್ ಅನುಚೇತ್ ಅವರು ಪರಿಶೀಲಿಸಿದರು.

ಈ ಬಾರಿ ದಸರಾ ಕ್ರೀಡೆಯಲ್ಲಿ ಯಾವುದೇ ನ್ಯೂನತೆ ಉಂಟಾಗದಂತೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಕ್ರೀಡಾಂಗಣದಲ್ಲಿರುವ ದುರಸ್ಥಿ ಕಾಮಗಾರಿಗಳಿದ್ದಲ್ಲಿ ಕೂಡಲೇ ಕೈಗೊಂಡು ಪೂರ್ಣಗೊಳಿಸಿ ಎಂದರು.

ಪರಿಶೀಲನೆಯ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ಉಪಸ್ಥಿತರಿದ್ದರು.

Share This Article
Leave a Comment