ತರಳಬಾಳು ಮಠದ ಪರಂಪರೆ, ಜನಕಲ್ಯಾಣದ ಕಾಳಜಿ ಶ್ಲಾಘನೀಯ: ಸಿಎಂ ಡಿ.ಕೆ‌.ಶಿವಕುಮಾರ್

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ತರಳಬಾಳು ಮಠದ ಪರಂಪರೆ, ಜನಕಲ್ಯಾಣದ ಕಾಳಜಿ ಶ್ಲಾಘನೀಯ: ಸಿಎಂ ಡಿ.ಕೆ‌.ಶಿವಕುಮಾರ್

“ರೈತರ ಕುರಿತ ಶ್ರೀಗಳ ಕಳಕಳಿ ನಮಗೆ ಮಾರ್ಗದರ್ಶಿ”

ಬೆಂಗಳೂರು ಆಗಸ್ಟ್ 26: ತರಳಬಾಳು ಮಠದ ಶ್ರೀಗಳ ಬಗ್ಗೆ ಅಪಾರ ಗೌರವವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯಗಳು ಶಕ್ತಿಶಾಲಿಯಾಗಿ ಬೆಳೆದಿರುವ ಇಂದಿನ ಕಾಲದಲ್ಲೂ ಮಠದಲ್ಲಿ ನ್ಯಾಯನಿರ್ಣಯದ ಪರಂಪರೆ ಮುಂದುವರಿದಿರುವುದು ಅದರ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಅವರು ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತರಳಬಾಳು ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ತರಳಬಾಳುವಿನ ಸಿರಿಗೆರೆ ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಮಾತನಾಡಿದರು.

ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆಯವರು ನ್ಯಾಯನಿರ್ಣಯದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವಂತೆ ತರಳಬಾಳು ಮಠವೂ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಶ್ರೀಗಳು ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ವಿಶೇಷವಾಗಿ ನೀರಾವರಿ ಕ್ಷೇತ್ರದ ಬಗ್ಗೆ ಅವರಿಗೆ ಅಪಾರ ಕಾಳಜಿಯಿದ್ದು, ರೈತರ ಬದುಕು ಮತ್ತು ಜನರ ಕಲ್ಯಾಣದ ಬಗ್ಗೆಯೇ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.

ಜನರ ಕಲ್ಯಾಣ ಹಾಗೂ ರೈತರ ಬದುಕಿಗಾಗಿ ಶ್ರೀಗಳು ತೋರುತ್ತಿರುವ ಕಾಳಜಿ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದರು.

ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್, ಶಾಸಕರಾದ ಸರ್ಮರ್ಥ್ ಶಾಮನೂರು ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Share This Article
Leave a Comment