ಪಬ್ಲಿಕ್ ಅಲರ್ಟ್
ಬೆಂಗಳೂರು,ಅ.23- ವೃತ್ತಿಯಲ್ಲಿ ಸರ್ಕಾರಿ ಪಶುವೈದ್ಯ ದಿನವಿಡೀ ಪಶುಗಳ ಚಿಕಿತ್ಸೆಯಲ್ಲೇ ಕಾಲ ಕಳೆದು ಹೋಗುತ್ತೆ , ಇದರ ಮಧ್ಯೆ ಉತ್ತಮ ಡಯಟ್ ಜೊತೆಗೆ ಸಾಧಾರಣ ವ್ಯಾಯಾಮ ಮಾಡಿ ರಾಷ್ಟ್ರಮಟ್ಟದ ವೆಟಿಕೊ ಕ್ವೀನ್ ಸ್ಪರ್ಧೆಯಲ್ಲಿ ಗೆದ್ದು ಬಿಗಿದ್ದಾರೆ.
ಅಂತಹ ಹೆಮ್ಮೆಯ ಕನ್ನಡತಿ ಯಾರವರು ಅಂತೀರಾ? ಈ ಸ್ಟೋರಿ ನೋಡಿ.
ಹೌದು ಹೀಗೆ ಚಂದುಳ್ಳಿ ಚೆಲುವೆ ಅಂತೆ ಕಾಣುತ್ತಿರುವ ಇವರ ಹೆಸರು ಡಾ.ಅನಿತಾ ಶ್ರೀ ರಾಮ್ , ಮೂಲತಃ ಬೆಂಗಳೂರಿನ ಮಹದೇವಪುರ ಕ್ಷೇತ್ರದ ನಿವಾಸಿ. ವೃತ್ತಿಯಲ್ಲಿ ಸರ್ಕಾರಿ ಪಶುವೈದ್ಯೆ ಈಗ ಇದರ ಜೊತೆ ಜೊತೆಯಲಿ ವೆಟಿಕೊ ಕ್ವೀನ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಸಸ್ 2025 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಬಿಡುವಿಲ್ಲದ ಕೆಲಸದಲ್ಲಿದ್ದರೂ ಉತ್ತಮ ಡಯಟ್ ಉತ್ಕೃಷ್ಟ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೋಡುಗರ ನಿಬ್ಬೆರಗಾಗುವಂತೆ ಮೈಮಾಟವನ್ನು ಹೊಂದಿದ್ದಾರೆ.
ಭಾರತದ ಛತ್ತೀಸ್ಗಢ್ ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಯಿಂದಲೂ ಪಶುವೈದ್ಯರೇ ಭಾಗವಹಿಸುವ ಸ್ಪರ್ಧೆಯಲ್ಲಿ ಇವರು ಭಾಗಿಯಾಗಿ ಸುಂದರಿಯ ಕಿರೀಟವನ್ನು ದಕ್ಕಿಸಿಕೊಳ್ಳುವ ಜೊತೆಯಲ್ಲಿ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ನಿನ್ನಿಂದ ಆಗೋದಿಲ್ಲ ಇರುವ ವೃತ್ತಿಯನ್ನೇ ಮುಂದುವರಿಸುವ ಇವೆಲ್ಲ ಯಾಕೆ ಬೇಕು ಎಂದವರಿಗೆ ಮೂಗುದಾರ ಹಾಕಿ ಪ್ರಶಸ್ತಿಯನ್ನು ಹೊತ್ತು ತಾಯಿನಾಡಿಗೆ ಆಗಮಿಸಿದ್ದಾರೆ ಸುಂದರಿ ಡಾ. ಅನಿತಾ ಶ್ರೀರಾಮ್.
ಸಾಧನೆಗೆ ಮುಂದಾದಾಗ ಅಡೆತಡೆಗಳು ಇದ್ದದ್ದೇ ಅದನ್ನು ಎದುರಿಸಿ ಮುಂದೆ ಸಾಗಿದರೆ ಸನ್ಮಾನದ ಕಿರೀಟ ದೊರಕೆ ದೊರೆಯುತ್ತದೆ ಎಂಬುದಕ್ಕೆ ಡಾ. ಅನಿತಾ ಶ್ರೀ ರಾಮ್ ಅವರು ಪ್ರೇರಣೆಯ ರೂವಾರಿಗಾರಿ ಗುರುತಿಸಿಕೊಂಡಿದ್ದು ಹೆಮ್ಮೆಯ ಸಂಗತಿ.! ಇವರಿಗೆ ಮುಂದೆ ಒಂದೊಳ್ಳೆ ಅವಕಾಶ ಒದಗಲಿ ಎಂದು ಆಶಿಸೋಣ.
